ಗುಡ್ ನ್ಯೂಸ್; ಏಕಾಏಕಿ ಗ್ಯಾಸ್ ಬೆಲೆ ಇಳಿಕೆ ಬಡವರಿಗೆ ಬಾ ರಿ ಸಿಹಿಸುದ್ದಿ

 | 
Ha
ತೈಲ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡುತ್ತಲಿರುತ್ತವೆ. ಹಾಗೆಯೇ ಇದೀಗ ಇಂದು ಎಲ್‌ಪಿಜಿ ಗ್ಯಾಸ್‌ ದರ ಭರ್ಜರಿ ಇಳಿಕೆಯಾಗಿದೆ. ಹಾಗಾದ್ರೆ ಎಷ್ಟು ಹಾಗೂ ಯಾವ್ಯಾವ ನಗರದಲ್ಲಿ ಎಷ್ಟಿದೆ ಎನ್ನುವ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಮೇಲೆ ಹೇಳಿರುವ ಹಾಗೆ ತೈಲ ಕಂಪನಿಗಳು 19 ಕೆಜಿ ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಂದಿನಿಂದ ಅಂದರೆ ಜುಲೈ 1ರಿಂದಲೇ ಜಾರಿಗೆ ಬರುವಂತೆ 58.50 ರೂಪಾಯಿನಷ್ಟು ಕಡಿತ ಮಾಡಿವೆ. 14 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 58.50 ರೂಪಾಯಿ ಇಳಿಕೆಯಾಗಿದ್ದು, ನವದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1723.50 ರೂಪಾಯಿಗಳ ಬದಲಿಗೆ 1665 ರೂಪಾಯಿಗಳಿಗೆ ಲಭ್ಯ ಇರುತ್ತದೆ.
ಇನ್ನು ಕೋಲ್ಕತ್ತಾದಲ್ಲಿ, ಇಂದಿನಿಂದ ವಾಣಿಜ್ಯ ಸಿಲಿಂಡರ್ 1769 ರೂಪಾಯಿ ಆಗಿದೆ. ಮೊದಲು ಇದು 1,826 ರೂಪಾಯಿ ಇತ್ಯು. ಇದೀಗ ಅದು 57 ರೂಪಾಯಿಗಳಷ್ಟು ಅಗ್ಗವಾಗಿದೆ.ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ದರ 1,616 ರೂಪಾಯಿ ಆಗಿದೆ. ಜೂನ್‌ನಲ್ಲಿ ಇದು 1,674.50 ರೂಪಾಯಿ ಇತ್ತು. ಇದಕ್ಕೂ ಮೊದಲು ಮೇ ತಿಂಗಲಿನಲ್ಲಿ ಇದು 1,699 ರೂಪಾಯಿಗೆ ಲಭ್ಯ ಇತ್ತು. ಇಲ್ಲಿ ಪ್ರತಿ ಸಿಲಿಂಡರ್‌ಗೆ 58.50 ರೂಪಾಯಿ ಇಳಿಕೆ ಮಾಡಲಾಗಿದೆ. ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,823.50 ರೂಪಾಯಿಗೆ ಇಳಿಕೆ ಆಗಿದೆ. ಕಳೆದ ತಿಂಗಳು ಜೂನ್‌ನಲ್ಲಿ 1,881 ರೂಪಾಯಿಗೆ ಲಭ್ಯ ಇತ್ತು. ಜೂನ್ 2025, ಮೇ 2025, ಏಪ್ರಿಲ್ 2025ರಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳನ್ನು ಕೂಡ ಕಡಿಮೆ ಮಾಡಲಾಗಿತ್ತು.
ಜೂನ್ ತಿಂಗಳಲ್ಲಿ 24 ರೂಪಾಯಿ ಇಳಿಕೆಯಾಯಾಗಿತ್ತು. ಮೇ ನಲ್ಲಿ 14.50 ರೂಪಾಯಿ ಮತ್ತು ಏಪ್ರಿಲ್ ತಿಂಗಳಲ್ಲಿ 41 ರೂಪಾಯಿ ಇಳಿಕೆ ಕಂಡುಬಂದಿದೆ. ಫೆಬ್ರವರಿಯಲ್ಲಿ 7 ರೂಪಾಯಿ ಇಳಿಕೆ ಕಂಡುಬಂದಿದೆ. ಆದರೆ ಮಾರ್ಚ್‌ನಲ್ಲಿ 6 ರೂಪಾಯಿ ಹೆಚ್ಚಳ ಆಗಿದೆ. ಇದೀಗ ಜುಲೈನಲ್ಲಿ ದರ ಇಳಿಕೆಯಾಗಿದೆ. ಜೂನ್‌ನಲ್ಲಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ 1,723.50 ರೂಪಾಯಿಗೆ ಲಭ್ಯ ಇತ್ತು. ಏಪ್ರಿಲ್‌ನಲ್ಲಿ 1,762 ರೂಪಾಯಿ, ಮೇ ತಿಂಗಳಲ್ಲಿ 1,747.50 ರೂಪಾಯಿ ಇತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub