ಮಹಿಳೆಯರು ಮಾಡಿರುವ ಬ್ಯಾಂಕ್ ಸಾಲ ಮನ್ನಾ ಮಾಡಿದ ಸರ್ಕಾರ, ಮತ್ತೊಂದು ಭರ್ಜರಿ ಗ್ಯಾರಂಟಿ ಘೋಷಣೆ

 | 
Bd

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕೋಲಾರ ಸೇರಿ ಕೆಲವು ಭಾಗಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಮುಂದಿನ ವರ್ಷ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ವಿಧಾನಸೌಧದಲ್ಲಿ ಬುಧವಾರ ಸಚಿವ ಸಂಪುಟ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ವರ್ಷ ನಿಮ್ಮ ಸ್ತ್ರಿ ಶಕ್ತಿ ಸಾಲದ ಮನ್ನಾ ಮಾಡ್ತೀನಿ ಎಂದುರಾಜ್ಯದ ಸ್ತ್ರೀ ಸಂಘದ ಮಹಿಳೆಯರಿಗೆ ಸಿದ್ದರಾಮಯ್ಯ ಅವರು ಭರವಸೆಯನ್ನು ನೀಡಿದರು. ಸ್ತ್ರೀ ಸಂಘದ ಮಹಿಳೆಯರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಾಲಮನ್ನಾ ಬಗ್ಗೆ ಮನವಿ ಸಲ್ಇಸಿದ್ದರು. ನಾನು ಭರವಸೆ ಕೊಟ್ಟಿರೋದು ನಿಜ. 

ಆದರೆ, ಮುಂದಿನ ವರ್ಷ ಇದರ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಭರವಸೆ ನೀಡಿ ಕಳುಹಿಸಿದರು. ಇನ್ನು ರಾಜ್ಯಾದ್ಯಂತ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾಗೆ 2,400 ಕೋಟಿ ಬೇಕಾಗುತ್ತದೆ. ಹೀಗಾಗಿ ಈ ವರ್ಷ ಆಗೋದಿಲ್ಲ ಮುಂದಿನ ವರ್ಷ ಮಾಡ್ತೀನಿ ಎಂದು ಸಿದ್ದರಾಮಯ್ಯ ಮಹಿಳೆಯರುಗೆ ಭರಸವೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹಿಳೆಯರು ಇಂದು ಅಥಾವ ನಾಳೆ ಸಂಘದ ಮಹಿಳೆಯರ ಜೊತೆ ಚರ್ಚೆ ಮಾಡಿ, ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಾಮಾನ್ಯವಾಗಿ ಮಹಿಳಾ ಸ್ತ್ರೀ ಸಂಘಗಳಿಗೆ ಬ್ಯಾಂಕ್‌ಗಳು ಸಾಲ ಕೊಡುವುದು ಹಾಗೂ ವಸೂಲಿ ಮಾಡುವುದು ಸಾಮಾನ್ಯವಾಗಿದೆ. 

ಆದರೆ, ಕೋಲಾರದಲ್ಲಿ ಮಹಿಳಾ ಸಂಘಕ್ಕೆ ಸಾಲ ಕೊಟ್ಟಿದ್ದನ್ನು ವಸೂಲಿ ಮಾಡಲು ಬಂದ ಡಿಸಿಸಿ ಬ್ಯಾಂಕ್‌ ಸಿಬ್ಬಂದಿಯ ಬೈಕ್‌ನ್ನು ಮಹಿಳೆಯರು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಳೆದ ವಾರ ನಡೆದಿತ್ತು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಮಹಿಳೆಯರ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಸಾಲವನ್ನು ಮರುಪಾವತಿ ಮಾಡುವುದಿಲ್ಲ. ಈ ಮೂಲಕ ಮಹಿಳಾ ಸಂಘದ ಸಾಲವನ್ನು ಮನ್ನಾ ಮಾಡಬೇಕು ಎಂಬುದು ಮಹಿಳೆಯರ ನಿಲುವಾಗಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.