ಬಿಗ್ ಬಾಸ್ ಟ್ರೋಫಿ ನಿಮ್ಮ ಕೈ ಸೇರುತ್ತೆ, ತಂದೆಯ ಆರೋಗ್ಯ ಸಮಸ್ಯೆ ಬಗೆಹರಿಯುತ್ತೆ ಎಂದು ಭವಿಷ್ಯವಾಣಿ ಕೊಟ್ಟ ಗುರೂಜಿ
Jan 22, 2025, 17:06 IST
|

ತ್ರಿವಿಕ್ರಮ್, ಹನುಮಂತ, ಮಂಜು, ರಜತ್, ಭವ್ಯಾ ಹಾಗೂ ಮೋಕ್ಷಿತಾ. ಇವೆರೆಲ್ಲರಿಗೂ ಆಶೀರ್ವಾದ ಮಾಡಿದ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ ಅವರು ಇವರು ಮುಂದಿನ ಭವಿಷ್ಯವನ್ನು ನುಡಿದಿದ್ದಾರೆ.ಬಿಗ್‌ಬಾಸ್ ಮನೆಗೆ ಆಗಮಿಸಿದ ವಿದ್ಯಾ ಶಂಕರಾನಂದ ಗುರೂಜಿ ಎಲ್ಲರನ್ನೂ ಕೂಡಿಸಿಕೊಂಡು ಕಷ್ಟಗಳು ಬಂದಾಗ ಹೇಗಿರಬೇಕು? ಯಾವ ರೀತಿ ಎದುರಿಸಬೇಕು ಎಂದು ಕೆಲ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಬಳಿಕ ರಜತ್ ಕಿಶನ್ ಅವರನ್ನು ಕೂಡಿಸಿಕೊಂಡು- ನೀನು ಸೊಂಬೇರಿ, ನಾಲಕ್ಕಾಣೆ ಕೆಲಸ ಮಾಡಲ್ಲ ಎಂದು ಹೇಳಿದರು.
ಇನ್ನೂ ಭವ್ಯಾ ಗೌಡ ಅವರಿಗೆ 'ವ್ಯಾಮೋಹ, ಪ್ರೀತಿ ಇಂತವೇ ನಿನಗೆ ಕಾಟ ಕೊಡುತ್ತವೆ' ಎಂದು ಹೇಳಿದರು. ಜೊತೆಗೆ ಮೋಕ್ಷಿತಾ ಅವರನ್ನು ಕುಡಿಸಿಕೊಂಡು, 'ಈ ವರ್ಷ ಆಗಸ್ಟ್‌ನಲ್ಲಿ ನಿನ್ನ ಮದುವೆ ಇದೆ, ಹುಷಾರಾಗಿ ಮಾಡ್ಕೋ ಇಲ್ಲವಾದಲ್ಲಿ ನಿನಗೆ ಪೆಟ್ಟು ಬೀಳುತ್ತೆ' ಎಂದಿದ್ದಾರೆ. ಗುರೂಜಿ ಭವಿಷ್ಯ ಕೇಳಿ ಮನೆ ಸ್ಪರ್ಧಿಗಳು ಚಿಂತಿತರಾಗಿದ್ದಾರೆ.
ಜೊತೆಗೆ ಹನುಮಂತ ಅವರನ್ನು ಕೂಡಿಸಿಕೊಂಡು ಮಾತನಾಡಿದ ಗುರೂಜಿ, 'ಹನುಮಂತ ಈ ವರ್ಷದಲ್ಲಿ ನಿನಗೆ ಮದುವೆ ಆಗುತ್ತೆ, ಎರಡು ವರ್ಷ ಆದ್ಮೇಲೆ ನಿಮ್ಮ ತಾಯಿ ಆರೋಗ್ಯದಲ್ಲಿ ಸಮಸ್ಯೆ ಕಂಡುಬರುತ್ತದೆ. ಮದುವೆಗೂ ಕೂಡ ಸಮಸ್ಯೆ ಆಗುತ್ತದೆ' ಎಂದು ಹೇಳಿದ್ದಾರೆ. ಇದರಿಂದ ಹನುಮಂತ ಕೂಡ ಆತಂಕಕ್ಕೆ ಒಳಗಾಗಿದ್ದಾರೆ.
ಅಲ್ಲದೆ ತ್ರಿವಿಕ್ರಮ್‌ಗೂ ಕೂಡ ಗುರೂಜಿ ಹಾಗೇ ಹೇಳಿದ್ದಾರೆ. 'ನಿಮಗೆ ಮದುವೆ ಆಗುತ್ತೆ. ಮದ್ವೆ ಆಗಿ ನಾಲ್ಕು ವರ್ಷ ಆದ್ಮೆಲೆ ಸಮಸ್ಯೆ ಬರುತ್ತದೆ' ಎಂದು ಗುರೂಜಿ ತ್ರಿವಿಕ್ರಮ್‌ಗೆ ಹೇಳಿದ್ದಾರೆ. ಇದರಿಂದ ಮದುವೆ ಆಗದವರು ಮದುವೆ ಆಗೋದು ಹೇಗಪ್ಪಾ ಅಂತ ತಲೆ ಕೆಡಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,13 Mar 2025