ಪತ್ನಿಗೆ ವಿ ಡಿಯೋ ಕಾಲ್ ಮೂಲಕ ಕ್ಷಮೆ ಕೇಳಿದ ಗುರುಪ್ರಸಾದ್
Nov 3, 2024, 18:05 IST
|
ಕನ್ನಡದ ಹೆಸರಾಂತ ನಿರ್ಮಾಪಕ ಡೈರೆಕ್ಟರ್ ಗುರುಪ್ರಸಾದ್ ರವರು ಆತ್ಮಹ ತ್ಯೆ ಮಾಡಿಕೊಂಡ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಹೌದು ಬುದ್ದಿವಂತ ಗುರುಪ್ರಸಾದ್ ಇಂತಹ ನಿರ್ಧಾರ ತೆಗೆದುಕೊಂಡಿದ್ದು ಅವರ ಕುಟುಂಬಿಕರಿಗೆ ನುಂಗಲಾರದ ನಷ್ಟವಾಗಿದೆ.
ಇತ್ತೀಚಿನ ಕೆಲವೊಂದು ಸಿನಿಮಾಗಳು ಗುರುಪ್ರಸಾದ್ ರವರಿಗೆ ದೊಡ್ಡ ಮಟ್ಟದ ಸಕ್ಸಸ್ ನೀಡದೆ ಸಾಕಷ್ಟು ಹಣದ ಕೊರತೆ ಉಂಟಾಗಿತ್ತು. ಹಾಗಾಗಿ ಬ್ಯಾಂಕ್ ಮೂಲಕ ಸಾಲ ಪಡೆದು ಹೊಸ ಸಿನಿಮಾ ಕನಸಲ್ಲಿ ಇದ್ದರು. ಆದರೆ ಅದು ಯಾವ ಸಿನಿಮಾ ಕೂಡ ಹಿಟ್ ನೀಡದ ಪರಿಣಾಮ ಸಾಲದ ಸುಳಿಗೆ ಬಿದ್ದು ಜೀವನ ಮುಕ್ತಾಯಕ್ಕೆ ಮುಂದಾದರು.
ಇದೀಗ ಬೆಳಕಿಗೆ ಬಂದ ವಿಚಾರದಲ್ಲಿ ಗುರುಪ್ರಸಾದ್ ರವರು ತನ್ನ ಪತ್ನಿಗೆ ವಿಡಿಯೋ ಮೂಲಕ 'ದಯವಿಟ್ಟು ನನ್ನ ಕ್ಷಮಿಸು' ಎಂಬ ಮಾತುಗಳ ಮೂಲಕ Sorry ಕೇಳಿದ್ದಾರೆ ಎನ್ನಲಾಗಿದೆ.
ಇನ್ನು ಅಪಾರ್ಟ್ಮೆಂಟ್ ನಲ್ಲಿ ಗುರು ಅವರು ಎರಡು ದಿನಗಳ ಹಿಂದೆಯೇ ಆತ್ಮಹ ತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೂಡ ಬೆಳಕಿಗೆ ಬಂದಿದೆ. ಗುರು ವಾಸವಿದ್ದ ಅಕ್ಕ ಪಕ್ಕದ ಜನರಿಗೆ ವಿಪರೀತ ವಾಸನೆ ಬಂದ ಪರಿಣಾಮ ಈ ಪ್ರಕರಣ ಬೆಳಕಿಗೆ ಬಂದಿದೆ.