ಜಗತ್ತಿನ ಅತ್ಯಂತ ಮುದ್ದಾದ ಮಗುವಿಗೆ ಜನ್ಮ ಕೊಟ್ಟ ಹರಿಪ್ರಿಯಾ ವಸಿಷ್ಠ

 | 
ತಿ
ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ. ಸಿಂಹ ಪ್ರಿಯ ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವದ ದಿನವೇ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿಕೊಂಡಿದ್ದಾರೆ. ಹೌದು ನಟಿ ಹರಿಪ್ರಿಯಾ ತಾಯಾಗಿದ್ದು ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ದೀಪಾವಳಿ ಹಬ್ಬದ ದಿನವೇ ಅಭಿಮಾನಿಗಳ ಗುಡ್​ನ್ಯೂಸ್​ ಕೊಟ್ಟಿದ್ದರು. ನಟಿ ಹರಿಪ್ರಿಯಾ ವಿಡಿಯೋವೊಂದನ್ನು ಹಂಚಿಕೊಂಡಾಗ ಅವರು ಗರ್ಭಿಣಿ ಇರಬಹುದು ಎಂದು ಅನೇಕರು ಊಹಿಸಿದ್ದರು. ಅಲ್ಲದೇ ಕಮೆಂಟ್‌ಗಳಲ್ಲಿ ಸಾಲು ಸಾಲು ಪ್ರಶ್ನೆಗಳನ್ನು ಕೇಳುತ್ತಿದ್ದರು.
ಕೊನೆಗೂ ಈ ಬಗ್ಗೆ ಅಧೀಕೃತವಾಗಿ ತಿಳಿಸಿದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ವಿಶೇಷವಾದ ಫೋಟೋ ಹಂಚಿಕೊಂಡು ತಂದೆ-ತಾಯಾಗುತ್ತಿರುವ ಸಿಹಿ ಸುದ್ದಿಯನ್ನು ಕಳೆದ ವರ್ಷ ದೀಪಾವಳಿ ಹಬ್ಬದ ದಿನವೇ ಬಹಿರಂಗಪಡಿಸಿದ್ದರು. ಈ ವೇಳೆ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಇಬ್ಬರ ಅಭಿಮಾನಿಗಳ ಶುಭ ಹಾರೈಕೆಯ ಮಹಾಪೂರವೇ ಹರಿದು ಬಂದಿತ್ತು.
ಈ ಸಿಹಿ ಸುದ್ದಿಯನ್ನು ಸ್ವತಃ ವಸಿಷ್ಠ ಸಿಂಹ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಮದುವೆಯಾದ ದಿನಾಂಕ ಅಂದರೆ ಜನವರಿ 26ರಂದು ಹರಿಪ್ರಿಯಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 'ನಮ್ಮ ಮದುವೆ ದಿನವೇ ಅವನು ಬಂದಿದ್ದಾನೆ' ಎಂದು ವಸಿಷ್ಠ ಸಿಂಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲರೂ ಶುಭ ಹಾರೈಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.