ಮಾಲಾಶ್ರೀ ಅವರ ಸ್ವಂತ ತಂಗಿಯನ್ನು ನೋಡಿದ್ದೀರಾ; ಮಾ.ಲಾಶ್ರೀ ತರ ಕಾಣುವ ಮುದ್ದಾದ ತಂಗಿ

 | 
F

ಕನ್ನಡ ಸಿನಿ ರಂಗದಲ್ಲಿ ಲೇಡಿ ಟೈಗರ್‌ ಎಂದೇ ಗುರುತಿಸಿಕೊಂಡವರು ನಟಿ ಮಾಲಾಶ್ರೀ. ಇವರ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕಾಲವೊಂದಿತ್ತು. ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬುತ್ತಿದ್ದ ಮಹಾನ್‌ ಕಲಾವಿದೆ ಈ ನಟಿ. ಕನ್ನಡಿಗರ ಕನಸಿನ ರಾಣಿ ಎಂಬ ಪಟ್ಟ ಅಲಂಕರಿಸಿದ ಈ ಸ್ಟಾರ್‌ ನಟಿ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದರು.

ಎಲ್ಲ ದೊಡ್ಡ ದೊಡ್ಡ ಸ್ಟಾರ್‌ ನಟರೊಂದಿಗೂ ತೆರೆ ಹಂಚಿಕೊಂಡು ದೊಡ್ಡ ಹೆಸರು ಮಾಡಿದ್ದಾರೆ.ನಂಜುಂಡಿ ಕಲ್ಯಾಣ ಚಿತ್ರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಲಾಶ್ರೀ ಯಾವುದೇ ಭೇದವಿಲ್ಲದೇ ಎಲ್ಲ ಪಾತ್ರಗಳಲ್ಲಿಯೂ ನಟಿಸಿ ಮಿಂಚಿದ್ದಾರೆ. ರಾಮಾಚಾರಿ, ದುರ್ಗಿ, ಕಿರಣ್‌ ಬೇಡಿ, ಚಾಮುಂಡಿ, ಹೀಗೆ ಹಲವಾರು ಪಾತ್ರಕ್ಕೆ ಜೀವತುಂಬಿದ ಖ್ಯಾತಿ ಇವರದ್ದು.

ನಟಿ ಮಾಲಾಶ್ರೀ ಅವರಿಗೆ ತಂಗಿಯೊಬ್ಬರಿದ್ದಾರೆ.ಅವರ ಹೆಸರು ಶುಭಾಶ್ರೀ. ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ ಇವರು ಅಷ್ಟಾಗಿ ಹೆಸರು ಮಾಡಲು ಸಾಧ್ಯವಾಗಲಿಲ್ಲ. ದೇವರಾಜ್ ನಟನೆಯ ಸರ್ಕಲ್ ಇನ್ಸ್​ಸ್ಟೆಕ್ಟರ್ ಸಿನಿಮಾದಿಂದ ಇವರು ಖ್ಯಾತಿ ಗಳಿಸಿದರು. ನಂತರ ಅವಕಾಶದಿಂದಾಗಿಯೋ ಅಥವಾ ಅದೃಷ್ಟದಿಂದಾಗಿಯೋ ಶುಭಾಶ್ರೀ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರು ನಡೆಸಿಕೊಟ್ಟಿರುವ ಕನ್ನಡದ ಕೋಟ್ಯಾಧಿಪತಿಯಲ್ಲಿ ಮಾಲಾಶ್ರೀ ತಂಗಿ ಕಾಣಿಸಿಕೊಂಡಿದ್ದರು. ಹೆಚ್ಚಾಗಿ ತೆರೆಯ ಹಿಂದೆ ಬದುಕುವ ಅವರು ಜನರ ನಡುವೆ ಕಾಣಿಸಿಕೊಳ್ಳಲು ಬೆರೆಯಲು ಬಯಸುವುದಿಲ್ಲ ಹಾಗಾಗಿ ಅವರ ಹೆಸರು ಬೇರೆಲ್ಲು ಕೇಳಿ ಬಂದಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.