ಆತ ಲಾಯರ್ ಅಲ್ಲಾರೀ, ಬಿಗ್ಬಾಸ್ ಜಗದೀಶ್ ಮುಖವಾಡ ಬಯಲು ಮಾಡಿದ ಹೋರಾಟಗಾರ ಪ್ರಶಾಂತ್ ಸಂಬಗಿ೯

 | 
ಹಾ
 ವಾದಗಳಿಂದ ಫೇಮಸ್ ಆಗ್ಬೇಕಿದ್ದ ಲಾಯರ್ ವಿವಾದಗಳಿಂದಲೆ ಎಲ್ಲರ ಗಮನ ಸೆಳೆದಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ವಕೀಲ್ ಸಾಬ್ ಲಾಯರ್ ಎಂದೇ ಫೇಮಸ್ ಆಗಿರುವ ಜಗದೀಶ್‌ ಇದೀಗ ಬಿಗ್ ಬಾಸ್ ಕನ್ನಡ 11ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್‌ ಮನೆಯೊಳಗೆ ಕಾಲಿಟ್ಟ ಮೇಲೆ ಜಗದೀಶ್‌ ಲಾಯರ್ ಅಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. 
ವಕೀಲರಲ್ಲದ ಜಗದೀಶ್‌ರನ್ನ ವಕೀಲರು ಎಂದು ಬಿಂಬಿಸಬೇಡಿ .ಎಂದು ಹೇಳಿ ಕಲರ್ಸ್ ಕನ್ನಡ ವಾಹಿನಿಗೆ ಬೆಂಗಳೂರು ವಕೀಲರ ಸಂಘ ಪತ್ರ ಬರೆದಿದೆ.ಕಲರ್ಸ್ ಕನ್ನಡ ವಾಹಿನಿಗೆ ಬರೆದ ಪತ್ರದಲ್ಲಿ ಕರ್ನಾಟಕ ರಾಜ್ಯದ ವಕೀಲರ ಪರಿಷತ್ತು ಜಗದೀಶ್‌ಗೆ ಕರ್ನಾಟಕ ರಾಜ್ಯದಲ್ಲಿ ಕಾನೂನು ವೃತ್ತಿ ನಡೆಸದಂತೆ ಆದೇಶ ಹೊರಡಿಸಿದೆ. ಕೆ.ಎನ್‌.ಜಗದೀಶ್‌ರವರು ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಣಿಯಾಗಿರುವ ದಾಖಲಾತಿಗಳನ್ನು ಪರಿಶೀಲಿಸಿ, ದಾಖಲೆಗಳು ನಕಲಿ ಎಂದು ದೃಢಪಟ್ಟ ನಂತರ ಅವರ ನೋಂದಣಿಯನ್ನು ದೆಹಲಿ ಬಾರ್ ಕೌನ್ಸಿಲ್‌ರವರು ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ ಎಂದು ಬೆಂಗಳೂರು ವಕೀಲರ ಸಂಘ ಉಲ್ಲೇಖಿಸಿದೆ.
ನಾನು ಮನಸ್ಸು ಮಾಡಿದರೆ ನಿಮಗೆಲ್ಲಾ ಹೆಲಿಕಾಪ್ಟರ್‌ನಲ್ಲಿ ಊಟ ತರಿಸ್ತೀನಿ, ನನಗೆ ನಾನೇ ಬಿಗ್‌ ಬಾಸ್‌, ನನಗೆ ಇಲ್ಲಿ ಇರಲು ಇಷ್ಟವಾಗುತ್ತಿಲ್ಲ, ಒಳಗಡೆ ಏನೆಲ್ಲಾ ಮಾಫಿಯಾ ನಡೆಸುತ್ತಿದ್ದೀರಿ ಎಲ್ಲವೂ ಎಕ್ಸ್‌ಪೋಸ್‌ ಆಗುತ್ತೆ, ನಾನು ಸರ್ಕಾರವನ್ನೇ ಅಲುಗಾಡಿಸುತ್ತೇನೆ, ಈ ಕಾರ್ಯಕ್ರಮವನ್ನು ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸರನ್ನು ಬೇರೆ ಇಡು, ಯಾರೂ ಇಲ್ಲಿಗೆ ಕಾಲಿಡದಂತೆ ಮಾಡುತ್ತೇನೆ, ನನ್ನನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್‌ಬಾಸ್‌ ನಡೆಸುತ್ತೀರಾ?ನನ್ನನ್ನು ಹೊರಗೆ ಕಳಿಸಿ ಎಂದಿದ್ದರು.
ಅಷ್ಟಕ್ಕೂ ನೀವು ಹೇಳಿ ನಮಗೇ ಶೋ ಹೇಗೆ ನಡೆಸಿಕೊಡಬೇಕು ಅಂತ ಎಂದು ಕಿಚ್ಚ ಸುದೀಪ್‌ ಜಗದೀಶ್‌ಗೆ ಪ್ರಶ್ನೆ ಮಾಡಿದ್ದಾರೆ. ಶೋ ಖಡಾಖಂಡಿತವಾಗಿಯೂ ಕರೆಕ್ಟ್‌ ಆಗಿದೆ, ಇಲ್ಲಾಂದ್ರೆ ನನ್‌ ಮಗಂದ್‌ 11ನೇ ಸೀಸನ್‌ ದಾಟ್ತಾನೇ ಇರ್ಲಿಲ್ಲ. ಕ್ಯಾಮರಾ ಮುಂದೆ ಬಿಗ್‌ಬಾಸ್‌ಗೆ ಚಾಲೆಂಜ್‌ ಮಾಡಿದ್ರಲ್ಲ ಅದು ತಪ್ಪೇ ಅಲ್ಲ. ಅದು ಅದೊಂದು ಜೋಕ್.‌ ಬಿಗ್‌ ಬಾಸ್‌ ಅನ್ನೋದು ಏನಿದೆ ಬ್ರದರ್‌, ಅದ್ಬುತವಾದ ಒಂದು ಶೋ. ಅದನ್ನು ಇಂಪ್ರೂ ಮಾಡುವುದು ನಿಮ್ಮ ಕೈಯಲ್ಲಿರುತ್ತೆ. ಹಾಳ್‌ ಮಾಡೋಕೆ ನಿಮ್ಮಪ್ಪನಾಣೆಗೂ ಸಾಧ್ಯ ಇಲ್ಲ ಎಂದು ಗುಡುಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.