ಅವ್ನು ಕಿಚ್ಚ ಸುದೀಪ್ ಅಲ್ಲ,ಹುಚ್ಚ ಸುದೀಪ್; ಕೆ ಮಂಜು
Feb 13, 2025, 21:55 IST
|

ಶ್ರೇಯಸ್ ಕೆ.ಮಂಜು ಮತ್ತು ಪ್ರಿಯಾ ವಾರಿಯರ್ ಜೋಡಿಯಾಗಿ ನಟಿಸಿರುವ ವಿಷ್ಣು ಪ್ರಿಯಾ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕೆ ಮಂಜು ಮಾಡಿದ ಎಡವಟ್ಟು ಇದೀಗ ಸಖತ್ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟ ಕಿಚ್ಚ ಸುದೀಪ್ ಅವರು ಆಗಮಿಸಿದ್ರು, ಕಾರ್ಯಕ್ರಮದಲ್ಲಿ ಕೆ ಮಂಜು ಅವರು ಸುದೀಪ್‌ರನ್ನು ಉದ್ದೇಶಿಸಿ ಮಾತನಾಡುವಾಗ ಕಿಚ್ಚ ಅನ್ನೋ ಬದಲು ಹುಚ್ಚ ಎಂದುಬಿಟ್ಟರು.
ಇನ್ನೂ ಕೆ ಮಂಜು ಅವರು ಈ ರೀತಿ ಕರೆದಿರುವುದಕ್ಕೆ ನಟ ಸುದೀಪ್ ಅವರ ಅಭಿಮಾನಿಗಳು ಗರಂ ಆಗಿದ್ದಾರೆ. ಆದರೆ, ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಕಿಚ್ಚ ಸುದೀಪ್ ಅವರು ಫುಲ್ ಕೂಗಿ ಆಗಿ ಉತ್ತರಿಸಿದ್ದಾರೆ. ಕೆ ಮಂಜು ಅವರು ಹುಚ್ಚ ಸುದೀಪ್ ಎಂದು ಹೇಳಿದ ಬಳಿಕ, ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಿಜಕ್ಕೂ ಥ್ಯಾಂಕ್ಸ್ ನಮ್ಮ ಹುಚ್ಚ ಸುದೀಪ್ ಅವರಿಗೆ. ಕಿಚ್ಚ ಸುದೀಪ್ ಅವರು. ಯಾಕೆ ಹುಚ್ಚ ಅಂದೆ ಅಂದರೆ ಈ ಸಿನಿಮಾ ನೋಡಿದಾಗ ಹುಚ್ಚ ಸಿನಿಮಾ ನೆನಪಿಗೆ ಬರುತ್ತದೆ.
ನಾವೇ ರೈಟ್ಸ್ ತಂದು ಮಾಡುವುದಕ್ಕೆ ಹೋಗಿದ್ವಿ. ಆ ಸಿನಿಮಾದ ಉಸಿರೇ ಉಸಿರೇ ಆ ಹಾಡನ ಫೀಲಿಂಗ್ ಈ ಸಿನಿಮಾ ಹಾಡು ನೋಡಿದಾಗ ಬಂತು. ಹುಚ್ಚ ಸಿನಿಮಾ ತರ ಯಶಸ್ವಿ ಅಗಲಿ ಅಂತ ಕೇಳಿಕೊಂಡೆ. ಬೇರೆ ಏನೂ ಇಲ್ಲ ಎಂದು ವೇದಿಕೆ ಮೇಲೆ ಕೆ. ಮಂಜು ಮಾತನಾಡಿದ್ದರು.ನಟ ಸುದೀಪ್ ಅವರನ್ನ ಕಿಚ್ಚನ ಹುಚ್ಚ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಸುದೀಪ್ ಅವರು ಮಾತನಾಡಿ, ವಿಷ್ಣು ಪ್ರಿಯ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೆ.ಮಂಜು ಕಡೆಯಿಂದ ಏನೋ ಒಂದು ಮಿಸ್ಟೇಕ್ ಆಯ್ತು. ಸ್ಟೇಜ್ ಮೇಲೆ ಚೆನ್ನಾಗಿ ಪ್ಯಾಚಪ್ ಮಾಡಿಬಿಟ್ಟರು. ಅಷ್ಟೇ ಅಲ್ಲ ಅದರ ಮೇಲೆ ಸ್ವಲ್ಪ ಹೊಗಳಿ ಹುಚ್ಚ ಯಾಕೆ ಅಂತ ಹೇಳಿ ಚೆನ್ನಾಗಿ ಪ್ಯಾಚಪ್ ಮಾಡಿದ್ರಿ ಎಂದು ಸುದೀಪ್ ನಗುತ್ತಲೇ ನೇರವಾಗಿ ಉತ್ತರಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025
ಸೆಟ್ ನಲ್ಲಿ ಕಿರಿಕ್, ಅಣ್ಣಯ್ಯ ಸೀರಿಯಲ್ ನಿಂದ ನಿಶಾ ಔಟ್
Sat,17 May 2025