ಚುನಾವಣೆಗೆ ಒಂದು ರೂಪಾಯಿ ಖರ್ಚು ಮಾಡದೆ ಬಹುಪತ ಪಡೆದು ಗೆಲ್ಲುವ‌ ಭಾರತದ ಏಕೈಕ ರಾಜಕಾರಣಿ

 | 
Uuu

ಕ್ಯಾಮರಾ ಹಿಡಿದು ಸರಿಯಾದ ಕೋನವನ್ನು ಹುಡುಕುವ ಫೊಟೋಗ್ರಾಫರ್‌ಗಳನ್ನು ಕಂಡರೆ ಈಗಲೂ ಬಿಜೆಪಿಯ ಈ ಪವರ್‌ಫುಲ್ ಹಾಗೂ ಸಿಂಪಲ್ ಎನಿಸಿಕೊಳ್ಳುತ್ತಿರುವ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕ್ಯಾಮರಾ ಹಿಡಿದುಕೊಳ್ಳುವುದು ಹೇಗೆ ಎಂದು ಪಾಠ ಮಾಡುತ್ತಾರೆ. ಏಕೆಂದರೆ ಒಂದು ಕಾಲದಲ್ಲಿ ಕೋಟ ಪರಿಸರದಲ್ಲಿ ಜನಪ್ರಿಯ ಫೊಟೋಗ್ರಾಫರ್ ಆಗಿದ್ದ ಶ್ರೀನಿವಾಸ ಪೂಜಾರಿ ಹಂತಹಂತವಾಗಿ ರಾಜಕೀಯದಲ್ಲಿ ಮೇಲೇರಿದವರು.

ತನ್ನ ನಿರರ್ಗಳ ಮಾತಿನಿಂದಲೇ ಜನಪ್ರಿಯರಾದವರು. ವಿಧಾನಪರಿಷತ್ ಸದಸ್ಯರಾಗಿದ್ದುಕೊಂಡೇ ಮಂತ್ರಿಯಾದ ಅದೃಷ್ಟಶಾಲಿ. ಹಾಗೆಯೇ ವಿಧಾನಪರಿಷತ್ ವಿಪಕ್ಷ ನಾಯಕರಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿರ್ವಹಿಸಿಕೊಂಡು ಬರುತ್ತಿದ್ದ ಶ್ರೀನಿವಾಸ ಪೂಜಾರಿ ಅವರನ್ನು ಬಿಜೆಪಿಯ ಭದ್ರಕೋಟೆಯೇ ಆಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕಿಳಿಸಿದೆ.

ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಗಮನ ಸೆಳೆದಿದ್ದರು. ಇವರು ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದವರು. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾಗಿದ್ದರು. ಸರಳ ವ್ಯಕ್ತಿತ್ವದ ಕೋಟ ಶ್ರೀನಿವಾಸ ಪೂಜಾರಿ ಬಿಲ್ಲವ ಸಮುದಾಯಕ್ಕೆ ಸೇರಿದವರು. 

7ನೇ ತರಗತಿ ಓದಿದ್ದಾರೆ. ಆದರೆ ಪಂಚಾಯತ್ ರಾಜ್ ವಿಷಯಕ್ಕೆ ಬಂದರೆ, ಅದರಲ್ಲಿ ಪಿಎಚ್‌ಡಿ. ಮಾಡಿದವರೂ ಇವರೆದುರು ಮಾತನಾಡಲು ಬೆವರಬೇಕು. ಅಂಕಿ ಅಂಶಗಳೆಲ್ಲಾ ಕೋಟ ಶ್ರೀನಿವಾಸ ಪೂಜಾರಿ ನಾಲಗೆಯಲ್ಲೇ ಇವೆ ಎಂದು ಇವರ ವಿರೋಧಿಗಳೂ ಮೆಚ್ಚುತ್ತಾರೆ. ಕುಂದಾಪುರ ಮೂಲದ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಮುಂಗಾರು ದಿನಪತ್ರಿಕೆಗೆ ಸಾಕಷ್ಟು ಚಿತ್ರಲೇಖನಗಳನ್ನು ಬರೆಯುವುದರ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಮುಂದೆ ಸ್ಥಳೀಯ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವುದರ ಮೂಲಕ ಸಾಮಾಜಿ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತಿದ್ದರು.

65 ವರ್ಷದ ಕೋಟ ಶ್ರೀನಿವಾಸ ಪೂಜಾರಿ ಹುಟ್ಟಿದ್ದು ಕೋಟತ್ತಟ್ಟು ಎಂಬಲ್ಲಿ. ಅಣ್ಣಯ್ಯ ಪೂಜಾರಿ ಮತ್ತು ಲಚ್ಚಿ ಪೂಜಾರಿ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದ ಶ್ರೀನಿವಾಸ ಪೂಜಾರಿ ಬಡತನದಲ್ಲಿರುವ ಮನೆಗೆ ಆಧಾರವಾಗಲು ಕೃಷಿಯೊಂದಿಗೆ ಕ್ಯಾಮರಾ ಹಿಡಿದವರು. ಹಾಗೆಯೇ ಪತ್ರಿಕೆಗಳಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಲೇಖನಗಳನ್ನೂ ಬರೆದು ಕಳುಹಿಸುವುದರ ಮೂಲಕ ಗಮನ ಸೆಳೆಯುತ್ತಿದ್ದರು. ಸ್ಥಳೀಯವಾಗಿ ಸ್ವಾತಿ ಎಂಬ ಸ್ಟುಡಿಯೋವನ್ನು ಆರಂಭಿಸಿದರು. ಕೋಟ ಶಿವರಾಮ ಕಾರಂತದ ಫೊಟೋಗಳನ್ನು ಸೆರೆಹಿಡಿಯುವ ಮೂಲಕ ಗಮನ ಸೆಳೆದಿದ್ದರು ಶ್ರೀನಿವಾಸ ಪೂಜಾರಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.