ನವಗ್ರಹ ಆಗಿ ಕೆಲವೇ ವಷ೯ಗಳಲ್ಲಿ ಮದ್ವೆ ಆಗ್ಬೇಕಿತ್ತು, ಆದರೆ ಆತ ಬಿಡಲಿಲ್ಲ

 | 
Jd
 ನವಗ್ರಹ ಸಿನಿಮಾದಲ್ಲಿ ಕ್ಯಾಡ್ಬರೀಸ್​ ಎಂಬ ಪಾತ್ರ ಮಾಡಿ ಫೇಮಸ್​ ಆದವರು ಧರ್ಮ ಕೀರ್ತಿರಾಜ್​. ಚಂದನವನದ ಖ್ಯಾತ ವಿಲನ್​ ಕೀರ್ತಿರಾಜ್​ ಅವರ ಪುತ್ರನಾದ್ರೂ ತಮ್ಮದೇ ರೀತಿಯಲ್ಲಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್​ 11 ಶೋಗೆ ಬರುವ ಮೂಲಕ ಅವರೀಗ ಹೊಸ ಇನ್ನಿಂಗ್ಸ್​ ಆರಂಭಿದ್ದಾರೆ. 
ನವಗ್ರಹ’ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್​ ಅವರು ಶರ್ಮಿಳಾ ಮಾಂಡ್ರೆ ಜೊತೆ ಜೋಡಿಯಾಗಿ ನಟಿಸಿದರು. ‘ಕಣ್ ಕಣ್ಣ ಸಲಿಗೆ..’ ಹಾಡಿನಲ್ಲಿ ಅವರಿಬ್ಬರ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟ ಆಯಿತು. ಇಂದಿಗೂ ಆ ಹಾಡು ಟ್ರೆಂಡ್​ನಲ್ಲಿದೆ. ಪ್ರೇಮಿಗಳ ಫೇವರಿಟ್​ ಸಾಂಗ್ ಅದು. ‘ಮುಮ್ತಾಜ್’, ‘ಜಾಣಾಕ್ಷಾ’, ‘ಜಾಸ್ತಿ ಪ್ರೀತಿ’ ಮುಂತಾದ ಸಿನಿಮಾಗಳಲ್ಲಿ ಧರ್ಮ ಕೀರ್ತಿರಾಜ್​ ನಟಿಸಿದ್ದಾರೆ. ಈಗ ಬಿಗ್​ ಬಾಸ್​ ಕಾರ್ಯಕ್ರಮದಿಂದ ಅವರ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್​ ಶುರುವಾಗಿದೆ.
ಇನ್ನು ಈಗಾಗಲೇ 40 ವರ್ಷದ ಧರ್ಮ ಅವರಿಗೆ ಇನ್ನು ಯಾಕೆ ಮದುವೆ ಆಗಿಲ್ಲ ಅನ್ನೋದು ಹಲವರ ಪ್ರಶ್ನೆ ಅಷ್ಟಕ್ಕೂ ಅವರೇ ಹೇಳಿದಂತೆ ನವಗ್ರಹ ಸಿನಿಮಾ ಮುಗಿಯುವ ವೇಳೆಗೆ ಮದುವೆ ಆಗಬೇಕಿತ್ತು. ಆದರೆ ಏನೇನೋ ಕಾರಣಗಳಿಂದ ಮದುವೆ ಕೂಡಿ ಬರಲೇ ಇಲ್ಲ. ಹಾಗಾಗಿ ನಾನಿನ್ನೂ ಸಿಂಗಲ್ ಆಗಿರೋದು ಎಂದು ಸಂದರ್ಶನ ಒಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ.
ನವಗ್ರಹ ಸಿನಿಮಾದಲ್ಲಿ ಕಣ್ ಕಣ್ಣ ಸಲಿಗೆ ಹಾಡಿನಲ್ಲಿ ಮಿಂಚಿದ್ದ ಹಾಗೂ ನಟ ದರ್ಶನ್ ಅವರಿಂದ 'ಹೇ.. ಕ್ಯಾಡ್ಬರಿ' ಎಂದು ಕರೆಸಿಕೊಳ್ಳುತ್ತಿದ್ದ ಚಾಕೋಲೇಟ್ ಬಾಯ್ ಧರ್ಮ ಕೀರ್ತಿರಾಜ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ನಿಮಗೆ ಸಪೋರ್ಟ್ ಮಾಡುವುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಡಿ ಬಾಸ್ ಅಭಿಮಾನಿಗಳೆಲ್ಲರೂ ನಿಮ್ಮ ಜತೆಗಿರ್ತೀವಿ. ನಿಮ್ಮ ಸಿನಿಮಾ ಜರ್ನಿಗೆ ನಾವೆಲ್ಲರೂ ಸಪೋರ್ಟ್ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ, ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.