ನಟಿ ರಾಧಿಕಾ ದೇವೆಗೌಡರ ಮುದ್ದಿನ ಸೊಸೆ ಎಂದಾಗ ಅನುಶ್ರೀ ರಿಯಾಕ್ಷನ್ ಹೇಗಿತ್ತು ನೋಡಿ
Sep 23, 2024, 13:45 IST
|
ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಅವರು ನಟಿಸಿರುವ ಭೈರಾದೇವಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ನಡುವೆಯೇ ಅವರು ತಮ್ಮ ಸಿನಿಮಾ ಕೆರಿಯರ್ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಡುವ ಮೂಲಕ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ್ದಾರೆ. ಈ ಸಿನಿಮಾ ಪ್ರಮೋಷನ್ ವೇಳೆಯೇ ನಟಿ ರಾಧಿಕಾ ಸಿನಿಮಾ ರಂಗ ತೊರೆಯುವ ಬಗ್ಗೆ ಮಾತನಾಡಿದ್ದಾರೆ.
ನಿನ್ನೆ ಭೈರಾದೇವಿ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಅವರು ಸಿನಿಮಾದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ದೀಢೀರನೆ ಚಿತ್ರರಂಗ ತೊರೆಯುವ ಮಾತನ್ನಾಡಿದರು. ಇದಕ್ಕೆ ಅಲ್ಲಿದ್ದವರೆಲ್ಲ ಒಂದು ಕ್ಷಣ ಶಾಕ್ ಕೂಡ ಆದರು. ಇದಕ್ಕೆ ಅಸಲಿ ಕಾರಣವನ್ನು ರಾಧಿಕಾ ಅವರೇ ಹೇಳಿದ್ದು, ಭೈರಾದೇವಿ ಸಿನಿಮಾದ ಸಕ್ಸಸ್ ಮೇಲೆ ನನ್ನ ಭವಿಷ್ಯ ನಿಂತಿದೆ ಎಂದಿದ್ದಾರೆ.
ನನ್ನ ಕೆರಿಯರ್‌ನಲ್ಲಿ ಈ ಭೈರಾದೇವಿ ದೊಡ್ಡ ಸಿನಿಮಾ. ಈ ಸಿನಿಮಾ ಯಶಸ್ವಿಯಾದರೆ ಮಾತ್ರ ನಾನು ಬೇರೆ ಸಿನಿಮಾಗಳನ್ನು ಮಾಡುತ್ತೇನೆ. ಒಂದು ವೇಳೆ ಸಕ್ಸಸ್ ಆಗದಿದ್ದರೆ ಇದೇ ನನ್ನ ಕೊನೆಯ ಸಿನಿಮಾ ಆಗಲಿದೆ. ಪ್ರೇಕ್ಷಕರಿಗೆ ನಾನು ಇಷ್ಟವಾಗದಿದ್ದರೆ ಸಿನಿಮಾರಂಗದಿಂದಲೇ ದೂರ ಹೋಗಲು ನಿರ್ಧರಿಸಿದ್ದೆ. ಈ ಬಗ್ಗೆ ನಾನು ನಿರ್ದೇಶಕರಿಗೂ ಹೇಳಿದ್ದೆ ಎಂದು ನಟಿ ರಾಧಿಕಾ ಕುಮಾರಸ್ವಾಮಿ ವೇದಿಕೆಯಲ್ಲಿ ಭಾವುಕರಾದರು.
ಇನ್ನು ವೇದಿಕೆಯ ಮೇಲೆಯೇ ಅಭಿಮಾನಿಯೊಬ್ಬ ಇವರು ಉತ್ತಮ ನಟಿ ಮಾತ್ರವಲ್ಲ ಕುಮಾರಸ್ವಾಮಿ ಪತ್ನಿ ನಮ್ಮ ದೇವೇಗೌಡರ ಸೊಸೆ ಎಂದು ನುಡಿದಿದ್ದಾರೆ. ಅದಕ್ಕೆ ನಕ್ಕು ರಾಧಿಕಾ ಕುಮಾರಸ್ವಾಮಿ ಅದೆಲ್ಲಾ ಈಗ ಯಾಕೆ ಎಂದಿದ್ದಾರೆ.ಇನ್ನು ಈ ಭೈರಾದೇವಿ ಸಿನಿಮಾದ ಟ್ರೈಲರ್ ನಿನ್ನೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ನಟಿ ರಾಧಿಕಾ ಅವರು ಕಾಳಿಯ ಅವತಾರ ತಾಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.