ಹಣದಾಸೆಗೆ ದೇವರಂತ ಗಂಡನ ಆಪ್ತನಿಗೆ ಕಣ್ಣು ಹಾಕಿದ ಹೆಂಡತಿ, ನಂತರ ಆಗಿದ್ದೇನು ಇಲ್ಲಿದೆ ಸಂಪೂರ್ಣ ಮಾಹಿತಿ

 | 
H

ಅದೊಂದು ಸುಂದರ ಕುಟುಂಬ. ಗಂಡ ಹೆಂಡತಿ ಮತ್ತು ಮಗ. ಗಂಡ ದೂರದ ಬೀದರ್‌ನಲ್ಲಿ ರೈತನ್ನಾಗಿದ್ರೆ ಹೆಂಡತಿ ಮೈಸೂರಿನ ಮಾವನ ಮನೆಯಲ್ಲಿದ್ದಳು. ಆದ್ರೆ ಆವತ್ತೊಂದು ದಿನ ಸ್ನೇಹಿತನ ಮನೆಗೆ ಅಂತ ಹೋಗಿದ್ದ ಗಂಡ ವಾಪಸ್ ಬರುವಾಗ ಆ್ಯಕ್ಸಿಡೆಂಟ್‌ನಲ್ಲಿ ತೀರಿ ಹೋಗಿದ್ದ. ಆದ್ರೆ ಸ್ಪಾಟ್‌ಗೆ ಬಂದ ಪೊಲೀಸರಿಗೆ ಅದು ಆ್ಯಕ್ಸಿಡೆಂಟ್ ಅಂತ ಅನ್ನಿಸಲೇ ಇಲ್ಲ. 

ಆದದ್ದಾಗಲಿ ಎಂದು ಕೇಸ್ ದಾಖಲಿಸಿಕೊಂಡು ಫೀಲ್ಡ್‌ಗೆ ಇಳಿದೇಬಿಟ್ಟರು. ಬರೋಬ್ಬರಿ 2 ತಿಂಗಳ ಕಾಲ ತನಿಖೆ ನಡೆಸಿದ ಪೊಲೀಸರು ಕೊನೆಗೂ ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಯಾವಾಗ ರವಿ ಪಾಟೀಲ್ ಆ್ಯಕ್ಸಿಡೆಂಟ್ ಅನ್ನೋದಕ್ಕೆ ಶುರು ಮಾಡಿದ್ನೋ ಎಲ್ಲರಿಗೂ ಅವನ ಮೇಲೆಯೇ ಡೌಟ್ ಶುರುವಾಗುತ್ತೆ. ಇನ್ನೂ ಎರಡು ತಿಂಗಳ ಕಾಲ ತನಿಖೆ ನಡೆಸಿದ ಪೊಲೀಸರು ಇವತ್ತು ಅದೇ ರವಿ ಪಾಟೀಲ್‌ನನ್ನ ಸಾಕ್ಷಿ ಸಮೇತ ಹಿಡಿದು ಹಾಕಿದ್ದಾರೆ. 

ಸ್ನೇಹಿತ ಅಮಿತ್‌ನನ್ನ ಕೊಂದು ಮುಗಿಸಿದ್ದ ರವಿ ಪಾಟೀಲ್ ಆ್ಯಕ್ಸಿಡೆಂಟ್ ನಾಟಕವಾಡಿದ್ದ.. ಇನ್ನೂ ಇದೇ ಕೊಲೆ ಕೇಸ್ ತನಿಖೆ ನಡೆಸಿದ್ದ ಪೊಲೀಸರಿಗೆ ರವಿ ಪಾಟೀಲೇ ಕೊಲೆಗಾರ ಅಂತ ಗೊತ್ತಿದ್ರೂ ಆತನನ್ನ ಬಂಧಿಸೋದಕ್ಕೆ ಸಾಕ್ಷಿ ಇರಲಿಲ್ಲ. ಸಾಕ್ಷಿಗಾಗಿ ಹುಡುಕಾಡುತ್ತಿದ್ದ ಪೊಲೀಸರಿಗೆ ಅಮಿತ್ ಪಕ್ಕದ ಮನೆಯ ಹುಡುಗ ಒಂದು ಮಹತ್ವದ ಸುಳಿವು ಕೊಟ್ಟಿದ್ದ. ಅಮಿತ್ ಕೊಲೆಯಾಗೋ 5 ದಿನಗಳ ಮುನ್ನ ಆತನ ಮೇಲೆ ಕೊಲೆ ಯತ್ನ ನಡೆದಿತ್ತು. ಆ ಜಾಗದಲ್ಲಿ ರವಿ ಪಾಟೀಲ್ ಬಳಸುತ್ತಿದ್ದ ಸಿಗರೇಟ್ ಬಿದ್ದಿತ್ತು.

 ಆ ವಿಷಯ ಅಮಿತ್, ಪಕ್ಕದ ಮನೆಯವರ ಬಳಿ ಹೇಳಿಕೊಂಡೊದ್ದ.. ಇದೇ ಸುಳಿವನ್ನ ಇಟ್ಟುಕೊಂಡು ತನಿಖೆ ಮುಂದುವರೆಸಿದ ಪೊಲೀಸರಿಗೆ ಅಲ್ಲಿ ರವಿ ಪಾಟೀಲ್ ಮತ್ತು ಅಮಿತ್ ಪತ್ನಿಯ ನಡುವಿನ ಲವ್ವಿಡವ್ವಿ ಕಹನಿ ತೆರೆದುಕೊಂಡಿತ್ತು. ಗಂಡನಿಗೆ ಮೋಸ ಮಾಡಿ ಪ್ರೀಯಕರನ ಜೊತೆ ಅನೈತಿಕ ಸಂಬಂಧ  ಇಟ್ಟುಕೊಂಡಿದ್ದ ಚೈತ್ರಾ ಅಂದರ್ ಆಗಿದ್ದಾಳೆ. ಗಂಡ ಪರಲೋಕ ಸೇರಿದ್ದಾನೆ. ಆದರೆ ಅವರ 4 ವರ್ಷದ ಮಗು ಈಗ ದಿಕ್ಕಿಲ್ಲದಂತಾಗಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.