ಬಿಗ್ ಬಾಸ್ ಮನೆಗೆ ಕಾಲಿಟ್ಟ ತುಕಾಲಿ ಸಂತು ಮೊದಲ‌ ದಿನವೇ ಏನು ಮಾಡಿದ್ದಾರೆ ಗೊ.ತ್ತಾ

 | 
ರು

ಬಿಗ್‌ಬಾಸ್ ಕನ್ನಡ ಸೀಸನ್ 10 ಅದ್ಧೂರಿಯಾಗಿ ಆರಂಭವಾಗಿದೆ. ಈಗಾಗಲೇ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲಿ 6 ಜನರ ಸ್ಥಿತಿ ಅತಂತ್ರವಾಗಿದೆ. ಮೊದಲ ದಿನವೇ ಶಾಸಕ ಪ್ರದೀಪ್ ಈಶ್ವರ್‌ ಬಿಗ್‌ಬಾಸ್ ಮನೆ ಪ್ರವೇಶಿಸಿ ಎಲ್ಲರಿಗೂ ಸ್ವೀಟ್ ಶಾಕ್ ಕೊಟ್ಟಿದ್ದಾರೆ. 

ಜೀಯೋ ಸಿನಿಮಾದಲ್ಲಿ 24 ಗಂಟೆ ಬಿಗ್‌ಬಾಸ್ ಮನೆಯಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದನ್ನು ಲೈವ್ ನೋಡಬಹುದಾಗಿದೆ. ಈಗಾಗಲೇ ಮೊದಲದ ದಿನದ ಲೈವ್ ಶುರುವಾಗಿದೆ. ಸ್ಪರ್ಧಿಗಳು ಹೊಸ ಮನೆಗೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಯಾರು ಯಾರೊಟ್ಟಿಗೆ ಬೆರೆಯಬೇಕು ಎನ್ನುವ ಗೊಂದಲ ಮುಂದುವರೆದಿದೆ. 

ಸಮಾನ ಮನಸ್ಕರು ಜೊತೆಯಾಗುತ್ತಿದ್ದಾರೆ. ತುಕಾಲಿ ಸಂತು, ರ್ಯಾಪರ್ ಇಶಾನಿ ಅದೇರೀತಿ ಮೈಕಲ್ ಹಾಗೂ ಸ್ನೇಹಿತ್ ಬಹಳ ಕ್ಲೋಸ್ ಆಗಿದ್ದಾರೆ. ಸ್ನೇಕ್‌ ಶ್ಯಾಮ್ ಇದೀಗ ಬಿಗ್‌ಬಾಸ್ ಮನೆಗೆ ಪೂಜಾರಿ ರೀತಿ ಆಗಿಬಿಟ್ಟಿದ್ದಾರೆ. ಅಂಗಿ ಬಿಚ್ಚಿ ಮನೆಯಲ್ಲಿ ದೇವರ ಪೂಜೆ ಮಾಡುವ ಜವಾಬ್ದಾರಿ ವಹಿಸಿಕೊಂಡಂತೆ ಕಾಣುತ್ತಿದೆ. 

ಇನ್ನು ತುಕಾಲಿನ ಸಂತುನ ಅಣ್ಣ ಅಣ್ಣ ಎಂದು ಕರೆದು ಇಶಾನಿ ಗೋಳಾಡಿಸುತ್ತಿದ್ದಾರೆ. ಇಶಾನಿನ ಕೈ ತೊಳೆದುಕೊಂಡು ಮುಟ್ಟಬೇಕು ಎಂದು ಸ್ನೇಕ್ ಶ್ಯಾಮ್ ಹೇಳಿದ್ದು ಅದಕ್ಕೆ ಸಂತು ಸರಿ ಎಂದಿದ್ದಾರೆ. ನಾವಿಬ್ಬರ ಹೀಗೆ ಇದ್ದರೆ ನಮ್ ಹೆಂಡ್ತಿ ಏನು ಅಂದುಕೊಳ್ಳುತ್ತಾಳೆ ಗೊತ್ತಾ ಅಂತ ಸಂತು ತಮಾಷೆ ಮಾಡಿದ್ದಾರೆ. ಅಣ್ಣ ಎಂದು ಮತ್ತೆ ಇಶಾನಿ ಕರೆದಿದ್ದಾರೆ.

ಇದರಿಂದಾಗಿ ತುಕಾಲಿ ಸಂತುವಿಗೆ ಅವಮಾನ ಬೇಸರವಾಗಿ ಕಣ್ಣೀರು ಹಾಕಿದ್ದಾರೆ. ಇನ್ನು ಬಿಗ್‌ಬಾಸ್ ಪ್ರೀಮಿಯರ್ ವೇದಿಕೆಯಲ್ಲಿ ಲೈವ್ ವೀಕ್ಷಕರ ವೋಟಿಂಗ್‌ನಲ್ಲಿ ಫೇಲ್ ಆಗಿದ್ದ 6 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸಿರೋದು ಗೊತ್ತೇಯಿದೆ. ಸಂಗೀತಾ ಶೃಂಗೇರಿ, ಡ್ರೋಣ್ ಪ್ರತಾಪ್, ತನಿಷಾ, ರಕ್ಷಕ್, ವರ್ತೂರು ಸಂತೋಷ್ ಕೇಸರಿ ಬಣ್ಣದ ಯೂನಿಫಾರ್ಮ್‌ ತೊಟ್ಟುಕೊಂಡಿರುವುದನ್ನು ಕೂಡ ನೋಡಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ