ಅಚ್ಚುಮೆಚ್ಚಿನ ನಟ ಇನ್ನ್ ಇಲ್ಲ, ಈ ಸಿನಿಮಾದಲ್ಲಿ ಸಕ್ಕತ್ ಆಗಿ ನಟನೆ ಮಾಡಿದ್ದ ನಟ ಇಹಲೋಕ

ಸಾವು ಯಾರಿಗೆ ಯಾವಾಗ ಬರುತ್ತದೆ ಹೇಳಲಾಗದು ಅದರಂತೆ ಇದೀಗ ಅಮೀರ್ ಖಾನ್ ನಟನೆಯ 3 ಈಡಿಯಟ್ಸ್ ಚಿತ್ರದಲ್ಲಿ ಲೈಬ್ರರಿಯನ್ ದುಬೆ ಪಾತ್ರವನ್ನು ನಿರ್ವಹಿಸುವ ಮೂಲಕ ಖ್ಯಾತಿ ಗಳಿಸಿದ್ದ ನಟ ಅಖಿಲ್ ಮಿಶ್ರಾ ನಿಧನರಾಗಿದ್ದಾರೆ. ಮನೆಯ ಅಡುಗೆ ಕೋಣೆಯಲ್ಲಿ ಆಯತಪ್ಪಿ ಬಿದ್ದು ಸಾವನಪ್ಪಿದ್ದಾರೆ.
ಅಖಿಲ್ ಪತ್ನಿ ಸುಝನ್ನಾ ಬರ್ನರ್ಟ್ ಶೂಟಿಂಗ್ ನಿಮಿತ್ತ ಹೈದರಾಬಾದ್‌ನಲ್ಲಿದ್ದರು. ಘಟನೆ ತಿಳಿದು ಧಾವಿಸಿ, ಅವರ ಸಾವಿನ ವಿಚಾರವನ್ನು ಖಚಿತಪಡಿಸಿದ್ದಾರೆ. ವರದಿಯ ಪ್ರಕಾರ, 58 ವರ್ಷದ ಅಖಿಲ್ ಮಿಶ್ರಾ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಜಾರಿ ಬಿದ್ದಿದ್ದಾರೆ. ಕೆಳಗೆ ಬೀಳುತ್ತಿದ್ದಂತೆ, ತಲೆಗೆ ಬಲವಾದ ಪೆಟ್ಟು ಬಿದ್ದಿದೆ.
ಪತಿಯ ಸಾವಿನ ವಿಚಾರವನ್ನು ಪತ್ನಿ ಸುಝನ್ನಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಹೃದಯ ಒಡೆದಿದೆ. ನನ್ನ ಜೀವನ ಸಂಗಾತಿ ಇನ್ನಿಲ್ಲ ಎಂದಿದ್ದಾರೆ. ನಟನ ಸಾವಿನಿಂದ ಬಾಲಿವುಡ್‌ನ ಹಲವು ಸಿನಿಮಾ ಮಂದಿ ಕಂಬನಿ ಮಿಡಿದಿದ್ದಾರೆ. ಸಿನಿಮಾಗಳ ಜತೆಗೆ ಕಿರುತೆರೆಯಲ್ಲಿನ ಹಲವು ಕಾರ್ಯಕ್ರಮಗಳಲ್ಲಿ ಅಖಿಲ್ ಮಿಶ್ರಾ ಕಾಣಿಸಿಕೊಂಡಿದ್ದರು.
ಉತ್ತರಾನ್, ಉಡಾನ್, ಸಿಐಡಿ, ಶ್ರೀಮಾನ್ ಶ್ರೀಮತಿ, ಹಾತಿಮ್ ಸೇರಿ ಹಲವು ಸೀರಿಯಲ್‌ಗಳ ಭಾಗವಾಗಿದ್ದರು. ಅದೇ ರೀತಿ ಡಾನ್, ಗಾಂಧಿ, ಮೈ ಫಾದರ್, ಶಿಖರ್, ಕಮಲಾ ಕಿ ಮೌತ್, ವೆಲ್ ಡನ್ ಅಬ್ಬಾ ಚಿತ್ರಗಳಲ್ಲಿ ನಟಿಸಿದ್ದಾರೆ. 3 ಈಡಿಯಟ್ಸ್ ಸಿನಿಮಾದಲ್ಲಿನ ಲೈಬ್ರರಿಯನ್ ದುಬೆ ಹೆಸರಿನ ಚಿಕ್ಕ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದರು.
ಆ ಪಾತ್ರ ಅಖಿಲ್ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಅಮೀರ್ ಖಾನ್, ಶರ್ಮನ್ ಜೋಶಿ, ಕರೀನಾ ಕಪೂರ್ ಖಾನ್, ಆರ್. ಮಾಧವನ್, ಬೊಮನ್ ಇರಾನಿ ಸೇರಿ ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದರು. ರಾಜ್ ಕುಮಾರ್ ಹಿರಾನಿ ನಿರ್ದೇಶನ ಈ ಚಿತ್ರಕ್ಕಿತ್ತು. ಇವರ ಸಾವಿಗೆ ಚಿತ್ರರಂಗದ ಗಣ್ಯರು ಕಣ್ಣೀರಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.