30 ವರ್ಷದ ಹಿಂದೆ ತಾತಾ ಮಾಡಿದ ಕೆಲಸಕ್ಕೆ ಸ್ವಂತ ಮೊಮ್ಮಗ ಫುಲ್ ಫಿದಾ;

 | 
೬

ಬದುಕಲ್ಲಿ ಒಮ್ಮೊಮ್ಮೆ ಆಕಸ್ಮಿಕ ಘಟನೆ ನಡೆದು ಬಡವನಾಗಿದ್ದವ ಕೋಟ್ಯಾಧಿಪತಿ ಆಗಬಹುದು. ಹೌದು ಅದೃಷ್ಟ ಲಕ್ಷ್ಮಿ ಕೈ ಹಿಡಿದರೆ ಹಾಗೆಯೇ ತೊಂಬತ್ತರ ದಶಕದಲ್ಲಿ ವ್ಯಕ್ತಿಯೊಬ್ಬರು 500 ರೂ ಮೊತ್ತಕ್ಕೆ ಖರೀದಿಸಿದ್ದ ಎಸ್​ಬಿಐ ಷೇರು ಇವತ್ತು 3.76 ಲಕ್ಷ ರೂ ಮೌಲ್ಯದ್ದಾಗಿರುವ ಒಂದು ಸುದ್ದಿ ವೈರಲ್ ಆಗಿದೆ. 

ಈಗ ಅಂಥದ್ದೇ ಇನ್ನೊಂದು ಸುದ್ದಿ ಇದೆ. ಎಪ್ಪತ್ತರ ದಶಕದಲ್ಲಿ ವ್ಯಕ್ತಿಯೊಬ್ಬರು ತೆಗೆದಿರಿಸಿದ್ದ ಹಿಂದೂಸ್ತಾನ್ ಯುನಿಲಿವರ್​ನ  100 ಷೇರುಗಳು ಇವತ್ತು 2 ಕೋಟಿ ರು ಮೌಲ್ಯದವಾಗಿದೆ. ಅಂದು ಷೇರು ಕೊಂಡಿದ್ದನ್ನು ಮರೆತೇ ಹೋಗಿದ್ದ ವ್ಯಕ್ತಿಗೆ ಈಗ 85 ವರ್ಷ. ಇವತ್ತು ಆ ನೂರು ಷೇರುಗಳ ಮೌಲ್ಯ 2 ಕೋಟಿ ರೂ ಆಸುಪಾಸಿನಲ್ಲಿ ಇದೆ.

 ಮಕ್ಕಳು ವಿದೇಶಗಳಲ್ಲಿ ನೆಲಸಿದ್ದು, ಭಾರತದಲ್ಲಿರುವ ಈ ವೃದ್ಧ ಅಚಾನಕ್ಕಾಗಿ ಸಿಕ್ಕಿದ ಈ ಹಣ ಬಳಸಿ ಒಂದು ಮನೆ ಖರೀದಿಸಿ ಅಲ್ಲಿ ಇರಲು ಬಯಸುತ್ತಿದ್ದಾರೆ. ಇನ್ನು ಬರೋಬ್ಬರಿ 30 ವರ್ಷದ ಹಿಂದೆ ಅಜ್ಜ ಷೇರು ಮಾರುಕಟ್ಟೆಯಲ್ಲಿ 500 ರೂಪಾಯಿ ಹೂಡಿಕೆ ಮಾಡಿದ್ದ. ಆ 500 ರೂಪಾಯಿಗಳಲ್ಲಿ SBI ಬ್ಯಾಂಕ್‌ನ ಷೇರು ಖರೀದಿ ಮಾಡಿ ಮನೆಯ ಲಾಕರ್‌ನಲ್ಲಿ ಇಟ್ಟಿದ್ದ. ಇದೀಗ ಅಜ್ಜನಿಂದ ಮೊಮ್ಮಗನಿಗೆ ಚಾಕ್‌ಪಾಟ್‌ ಹೊಡೆದಿದೆ. 

ಅಜ್ಜ 500 ರೂಪಾಯಿಗೆ ಖರೀದಿಸಿದ ಷೇರಿನಿಂದ ಮೊಮ್ಮಗನಿಗೆ ಲಕ್ಷಾಂತರ ರೂಪಾಯಿ ಲಾಭ ಬಂದಿದೆ. ಇದು ಷೇರು ಮಾರುಕಟ್ಟೆಯ ಮ್ಯಾಜಿಕ್  ಅಂತಲೇ ಸಖತ್ ಸುದ್ದಿಯಾಗಿದೆ.ಪಂಜಾಬ್‌ ರಾಜ್ಯದ ಚಂಡೀಗಢ ಮೂಲದ ವೈದ್ಯರೊಬ್ಬರು ತನ್ನ ಅಜ್ಜನಿಂದ ಲಕ್ಷಾಂತರ ರೂಪಾಯಿ ಲಾಭಗಳಿಸಿದ್ದಾರೆ. ಡಾ. ತನ್ಮಯ್ ಮೋತಿವಾಲಾ ಎಂಬುವವರು ಇಂತಹದೊಂದು ಸಂತಸದ ಸುದ್ದಿಯನ್ನ ಹಂಚಿಕೊಂಡಿದ್ದಾರೆ. 

ತನ್ಮಯ್ ಮೋತಿವಾಲಾ ಅವರು ತನ್ನ ಅಜ್ಜ 1994ರಲ್ಲಿ 500 ರೂಪಾಯಿಗೆ ಖರೀದಿಸಿದ SBI ಷೇರಿನ ಫೋಟೋವನ್ನು ಶೇರ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.