ಬಿಗ್ಬಾಸ್ ಬೆಡಗಿ ಮೋಕ್ಷಿತಾ ಪೈ ಕೋಟಿ ಕೋಟಿ ಸಂಪಾದಿಸಿದ್ದು ಹೇಗೆ, ಇವರ ಬ್ಯಾಗ್ರೌಂಡ್ ಕೇಳಿದ್ರೆ ಬೆಚ್ಚಿಬೀಳ್ತೀರಾ
Oct 19, 2024, 08:33 IST
|

ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ 'ಪಾರು..' ಧಾರವಾಹಿಯ ಟೈಟಲ್ ಸಾಂಗ್‌ನಲ್ಲಿ 'ಕರುಣೆಯ ಪೈರು, ನಮ್ಮ ಪಾರು...' ಅನ್ನೋ ಸಾಲಿದೆ. ಈ ಧಾರವಾಹಿಯಲ್ಲಿ ಪಾರು ಪಾತ್ರದಲ್ಲಿ ಅಭಿನಯಿಸಿದ್ದ ನಟಿ ಮೋಕ್ಷಿತಾ ಪೈ ಇಂದು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮೋಕ್ಷಿತಾ ಪೈ ಧಾರವಾಹಿಯಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಕರುಣೆಯ ಪೈರು ಅನ್ನೋದು ಅವರ ಜೀವನವನ್ನು ನೋಡಿದಾಗಲೇ ಅರ್ಥವಾಗುತ್ತದೆ.
ಎಲ್ಲರಿಗೂ ತಿಳಿದ ಹಾಗೆ ಮೋಕ್ಷಿತಾ ಪೈ ಅವರ ಸಹೋದರ ಬುದ್ದಿಮಾಂದ್ಯನಾಗಿ ಜನಿಸಿದ್ದಾರೆ. 22 ವರ್ಷವಾಗಿದ್ದರೂ ಇಂದಿಗೂ ಅವರು 8 ವರ್ಷದ ಮಕ್ಕಳ ರೀತಿ ಇದ್ದರೆ, ಅವರ ಬುದ್ದಿ ಇನ್ನೂ 8 ತಿಂಗಳ ಮಗುವಿನ ಹಾಗೆ ಇದೆ. ಈ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲೂ ಮೋಕ್ಷಿತಾ ಪೈ ಮಾತನಾಡಿದ್ದರು. ತಮ್ಮನ ಬಗ್ಗೆ ಹೇಳುವಾಗಲೆಲ್ಲಾ ಭಾವುಕರಾಗುವ ಮೋಕ್ಷಿತಾ ಪೈ, ಬಿಗ್ ಬಾಸ್ ವೇದಿಕೆಯಲ್ಲೂ ಸುದೀಪ್ ಈ ಬಗ್ಗೆ ಪ್ರಶ್ನೆ ಮಾಡಿದಾಗ, ನನ್ನ ತಮ್ಮನಿಗೆ ನಾನು ಅಕ್ಕನೂ ಹೌದು, ಅಮ್ಮನೂ ಹೌದು. ಆತನ ಬಗ್ಗೆ ಹೆಚ್ಚು ಮಾತನಾಡೋದು ಇಷ್ಟವಿಲ್ಲ ಎಂದು ಹೇಳಿ ಸುಮ್ಮನಾದರು.
ಮಂಗಳೂರು ಮೂಲದ ಈ ನಟಿ ಹುಟ್ಟಿ ಬೆಳೆದಿದ್ದು ಬೆಂಗಳೂರಲ್ಲಿ. ಬಿಕಾಂ ಪದವಿ ಪಡೆದಿರುವ ಇವರು ಬಿಕಾಂ ಓದು ಮುಗಿದ ಬಳಿಕ, ಅಮ್ಮ ಓದುವುದಕ್ಕೆ ಆರಂಭ ಮಾಡಿದ್ದರು. ಅಪ್ಪ ಅವರ ಕೆಲಸದಲ್ಲಿ ಅವರು ಬ್ಯುಸಿ ಆಗಿದ್ದರು. ಅಮ್ಮ ಓದುವುದರಲ್ಲಿ ಬ್ಯುಸಿ ಆಗಿದ್ದರು, ಈಗ ತಮ್ಮನನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದ್ದ ಕಾರಣಕ್ಕೆ ನಾನು ನನ್ನ ವಿದ್ಯಾಭ್ಯಾಸವನ್ನು ಅಲ್ಲಿಗೆ ನಿಲ್ಲಿಸಿದೆ. ಅವನನ್ನು 2-3 ವರ್ಷಗಳ ಕಾಲ ಮನೆಯಲ್ಲಿ ನಾನೇ ನೋಡಿಕೊಂಡೆ. ಅವನಿಗೆ ಏನೂ ಕೂಡ ಗೊತ್ತಾಗೋದಿಲ್ಲ.
ಈ ವೇಳೆ ನನಗೆ ಹಲವು ಆಫರ್‌ಗಳು ಬರುತ್ತಿದ್ದವು. ಆದರೆ, ಈ ವೇಳೆ ಅಮ್ಮ ಓದುತ್ತಾ ಇದ್ದರು. ಅವರ ಶಿಕ್ಷಣ ಕಂಪ್ಲೀಟ್ ಮಾಡಬೇಕು ಅನ್ನೋದು ನಮ್ಮ ಆಸೆ ಆಗಿತ್ತು. ಅವರಿಗೆ ಪ್ರೋತ್ಸಾಹ ಮಾಡುವ ಸಲುವಾಗಿ ನಾನು 2-3 ವರ್ಷ ಯಾವುದೇ ಆಫರ್ ಒಪ್ಪಿಕೊಳ್ಳಲಿಲ್ಲ. ಅವನ ಜತೆ ಇರೋದೇ ನನಗೆ ದಿನವಾಗ್ತಿತ್ತು.
ನನ್ನ ಜೊತೆ ಎಷ್ಟು ಬೆರೆತು ಹೋಗಿದ್ದ ಎಂದರೆ, ನನ್ನ ಹೊರತಾಗಿ ಬೇರೆ ಯಾರೂ ಊಟ ಮಾಡಿಸಿದ್ದರೂ ಆತ ಮಾಡ್ತಾ ಇರ್ಲಿಲ್ಲ. ಈಗ ಅಮ್ಮನ ಕೋರ್ಸ್ ಕೂಡ ಮುಗಿದಿದೆ. ಅವನನ್ನ ನೋಡಿಕೊಳ್ಳೋಕೆ ಮತ್ತೊಬ್ಬರೂ ಇದ್ದಾರೆ. ಹಾಗಾಗಿ ನಾನು ಶೂಟಿಂಗ್‌ಗೆ ಹೋಗಲು ಶುರು ಮಾಡಿದೆ ಎನ್ನುತ್ತಾರೆ ಮೋಕ್ಷಿತಾ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,8 Jul 2025
ಯಶ್ ತಾಯಿ ಎಡವಟ್ಟು, ಬೀದಿಗೆ ಬಿತ್ತು ರಾಕಿಬಾಯ್ ಕುಟುಂಬದ ಗೌರವ
Tue,8 Jul 2025