ಪ್ರಿಯಾಮಣಿಯನ್ನು ಮುಸ್ತಫಾ ತನ್ನ ಬಲೆಗೆ ಬೀಳಿಸಿದ್ದು ಹೇಗೆ ಗೊ.ತ್ತಾ; ಮೊದಲೇ ನಡೆದಿತ್ತಾ ಆ ಕೆಲಸ
ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪ್ರಿಯಾಮಣಿ ಹಾಗೂ ನಟ ಅಜಯ್ ದೇವಗನ್ ಅಭಿನಯದ ಮೈದಾನ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕಮಾಲ್ ಮಾಡಿಲ್ಲ. ಆದರೆ, ಅವರ ನಟನೆಗೆ ಮೆಚ್ಚುಗೆ ಸಿಕ್ಕಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಿಯಾಮಣಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮುಸ್ತಫಾ ರಾಜ್ ಅವರನ್ನು ಪ್ರಿಯಾಮಣಿ ವಿವಾಹವಾಗಿದ್ದಾರೆ. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಅವರು ಸಾಕಷ್ಟು ಟ್ರೋಲ್ಗೆ ಒಳಗಾಗಬೇಕಾಯಿತು.
ಇದು ಅವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿದೆಯೇ ಎಂದು ಕೇಳಲಾಯಿತು. ನಿಜ ಹೇಳಬೇಕೆಂದರೆ, ಇದು ನನ್ನ ಮೇಲೆ ಅಥವಾ ನನ್ನ ಹೆತ್ತವರ ಮೇಲೆ ಪರಿಣಾಮ ಬೀರಲಿಲ್ಲ. ನನ್ನ ಪತಿ ನನ್ನ ಹಿಂದೆ ದೃಢವಾಗಿ ನಿಂತರು ಎಂದು ಹೆಮ್ಮೆಯಿಂದ ಅವರು ಹೇಳಿದ್ದಾರೆ.
ನನ್ನ ಜೊತೆ ದೃಢವಾಗಿ ನಿಲ್ಲುವಂತೆ ನಾನು ಕೋರಿಕೊಂಡಿದ್ದೆ. ಏನೇ ಆದರೂ ಎಲ್ಲ ವಿಚಾರಗಳು ನನ್ನ ಬಳಿಗೆ ಬರುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ನನ್ನ ಪತಿ ನನಗೆ ಭರವಸೆ ನೀಡಿದರು. ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆ ಇರುವಂತೆ ಅವರು ಕೇಳಿದರು ಎಂದಿದ್ದಾರೆ ಪ್ರಿಯಾಮಣಿ.
ನಾವಿಬ್ಬರೂ ಡೇಟಿಂಗ್ ಮಾಡುವಾಗ ನಾನು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೆ. ಆ ಸಮಯದಲ್ಲಿ ನಾನು ನನ್ನೊಂದಿಗೆ ಇರಿ ಮತ್ತು ನನ್ನ ಮೇಲೆ ನಂಬಿಕೆ ಇಡಿ ಎಂದು ಅವರಿಗೆ ಹೇಳಿದೆ. ನಾವು ನಮ್ಮ ಇಡೀ ಜೀವನವನ್ನು ಪರಸ್ಪರ ಕಳೆಯಲು ನಿರ್ಧರಿಸಿದ್ದೇವೆ. ಹಾಗಾಗಿ ದಾರಿಯುದ್ದಕ್ಕೂ ಏನೇ ಬಂದರೂ ಅದನ್ನು ನಾವು ಒಟ್ಟಾಗಿ ಎದುರಿಸುತ್ತೇವೆ.
ಇಂತಹ ತಿಳುವಳಿಕೆಯ ವ್ಯಕ್ತಿ ಜೊತೆ ಇರಲು ಖುಷಿ ಆಗುತ್ತದೆ. ಎಲ್ಲ ಸಮಸ್ಯೆಗಳನ್ನೂ ಹೇಗೆ ಎದುರಿಸಬೇಕು ಎಂಬುದು ಅವರಿಗೆ ಗೊತ್ತಿದೆ ಎಂದು ಪ್ರಿಯಾಮಣಿನ್ನ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.