ತಾಯಿ ಇಲ್ಲದೆ ಮಗ ಶೌರ್ಯ ಮನೆಯಲ್ಲಿ ಹೇಗಿದ್ದಾನೆ, ಸ್ಕೂಲ್.ಗೆ ಹೋಗುತ್ತಿಲ್ವಾ ರಾಘು ಮಗ

 | 
Hhg

ಮಾತು ಕಡಿಮೆ, ಕೆಲಸ ಜಾಸ್ತಿ ಅನ್ನೋ ಗುಣ ಸ್ಪಂದನಾ ಅವರ ವ್ಯಕ್ತಿತ್ವ, ಇದೇ ನನ್ನನ್ನು ನನ್ನ ಮಗನನ್ನು ಮುಂದೆ ತೆಗೆದುಕೊಂಡು ಹೋಗ್ತಿದೆ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪತ್ನಿ ಸ್ಪಂದನಾ ಅವರನ್ನು ದೂರ ಮಾಡಿಕೊಂಡ ನಟ ವಿಜಯ್ ರಾಘವೇಂದ್ರ ಅವರು ಪತ್ನಿ ಇಲ್ಲ ಜೀವನವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. 

ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದೇನೆ, ದುಃಖ ಸಮಯದಲ್ಲಿ ಕನ್ನಡಿಗರು ನನಗೆ ಆಸರೆಯಾಗಿದ್ದಕ್ಕೆ ಧನ್ಯವಾದ ಅಂತ ಹೇಳಿದ್ದಾರೆ. ಕನ್ನಡ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ವಿಜಯ್ ರಾಘವೇಂದ್ರ ಅವರು, ಆತ್ಮೀಯರನ್ನು ದೂರ ಮಾಡಿಕೊಳ್ಳುವ ಅನುಭವ ಯಾರಿಗೂ ಆಗೋದು ಬೇಡ. ಸಾಕಷ್ಟು ಕನಸು ಕಟ್ಟಿಕೊಂಡಿರುತ್ತೇವೆ, ನಿರೀಕ್ಷೆಯನ್ನು ಮೀರಿ ಆಸೆ ಇಟ್ಟುಕೊಂಡಾಗ ನೋವು ಕಡಿಮೆ ಆಗುತ್ತೆ. 

ಆಶಯ ಮೀರಿ ನಿರೀಕ್ಷೆ ಇಟ್ಟುಕೊಂಡಾಗ ನೋವು ಜಾಸ್ತಿ ಆಗುತ್ತೆ. ಅದನ್ನ ಬಹಳ ಗಟ್ಟಿಯಾಗಿ ಜೀವನದಲ್ಲಿ ರೂಢಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಮಗ ಶೌರ್ಯ ನಂತೂ ಅಮ್ಮನಿಲ್ಲದೆ ಮಂಕಾಗಿದ್ದಾನೆ.ಅವಳಿದ್ದರೆ ಬೆಳಗ್ಗೆ ಎದ್ದ ಕ್ಷಣದಿಂದ ಹಿಡಿದು ಮಲಗುವವರೆಗೂ ಒಂದು ಸ್ಪರ್ಕ್​ ಇರುತ್ತೆ. ಒಂದು ನಗು, ಆತುರ, ಖುಷಿ ಇರುತ್ತಿತ್ತು. 

ಮನೆಗೆ ಬಂದಾಗ ನಮ್ಮೊಂದಿಗೆ ಇರುವವರಿಗಾಗಿ ಕಾಯೋದು ಸದಾ ಎಚ್ಚರಿಕೆ ನೀಡ್ತಾ ಇರುತ್ತೆ. ಕೆಲಸ ಬೇಗ ಮುಗಿಸಿ ಮನೆಗೆ ಬರೋ ಆತುರ ಇರುತ್ತೆ. ಈಗ ಅದು ಇಲ್ಲ ಅನ್ನೋದು ಬಹಳ ಕಷ್ಟ ಆಗುತ್ತೆ ಅಂತ ವಿಜಯ್ ರಾಘವೇಂದ್ರ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.