ಮುಗ್ಧನಂತೆ ಕಾಣುವ ಪ್ರತಾಪ್‌ ಬಳಿ ಎಷ್ಟು ಕೋಟಿ ಆಸ್ತಿ ಇದೆ, 600 ಡ್ರೋನ್ ಕಂಪನೆ ಮಾಲೀಕ

 | 
V

ಡ್ರೋನ್‌ ಬಾಯ್‌ ಪ್ರತಾಪ್‌ಗೆ ಬಿಗ್‌ಬಾಸ್‌ ಮನೆಯಲ್ಲಿ ಅನ್ಯಾಯವಾಗಿದೆ ಅಂತ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಅಲ್ಲದೆ, ಪ್ರತಾಪ್‌ಗೆ ನ್ಯಾಯ ನೀಡಿ ಅಂತ ಸೋಷಿಯಲ್‌ ಮೀಡಿಯಾದಲ್ಲಿ ಹ್ಯಾಷ್‌ ಟ್ಯಾಗ್‌ ಮೂಲಕ ಅವರ ಫ್ಯಾನ್ಸ್‌ ಒತ್ತಾಯಿಸುತ್ತಿದ್ದಾರೆ. ಬಿಗ್‌ಬಾಸ್‌ ಮನೆ ಸೇರಿದ ದಿನದಿಂದ ಪ್ರತಿದಿನ ಸುದ್ದಿಯಲ್ಲಿರುವ ಪ್ರತಾಪ್‌ ಜೀವನ ಮತ್ತು ಆಸ್ತಿ, ಶಿಕ್ಷಣ ಸೇರಿದಂತೆ ಅವರ ಕುರಿತು ಗೂಗಲ್‌ನಲ್ಲಿ ಸರ್ಚ್‌ ಹೆಚ್ಚಾಗುತ್ತಿದೆ.

ಹೌದು.. ಇತ್ತೀಚಿಗೆ ಟಿಕೆಟ್‌ ಟು ಫಿನಾಲೆ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್‌ಗೆ ಅನ್ಯಾಯವಾಗಿದೆ ಅಂತ ನೆಟ್ಟಿಗರು ಕಿಡಿಕಾರಿದ್ದರು. ಅಲ್ಲದೆ, ಪ್ರತಾಪ್‌ಗೆ ಬಿಗ್ ಬಾಸ್‌ ಮೋಸ ಮಾಡಿದೆ ಅಂತ ಅವರ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ನಿನ್ನೆ ಕಿಚ್ಚ ಪಂಚಾಯಿತಿ ಮಾಡಿ ಈ ಕುರಿತು ಸ್ಪಷ್ಟತೆ ನೀಡಿದರು.

ಇನ್ನು ಸದಾ ಸುದ್ದಿಯಲ್ಲಿರುವ ಪ್ರತಾಪ್‌ ಜೀವನ ಕುರಿತು ನೆಟ್ಟಿಗರು ಗೂಗಲ್‌ನಲ್ಲಿ ಹುಡುಕಾಡುತ್ತಿದ್ದಾರೆ. ಅವರ ಆಸ್ತಿ ಎಷ್ಟಿದೆ, ಶಿಕ್ಷಣ, ಕೆಲಸ, ಕಾಲೇಜ್‌ ಹೀಗೆ ಹಲವಾರು ವಿಚಾರಗಳನ್ನು ತಿಳಿಯಲು ಕಾತುರರಾಗಿದ್ದಾರೆ. ಯುವ ವಿಜ್ಞಾನಿ ಅಂತ ಬಿರುದು ಪಡೆದಿರುವ ಪ್ರತಾಪ್‌ ಸ್ವತಃ ಡ್ರೋನ್‌ ಕಂಡು ಹಿಡಿದಿದ್ದಾಗಿ ಹೇಳಿಕೊಂಡಿದ್ದರು. ಅಲ್ಲದೆ, ಇದೇ ವಿಚಾರವಾಗಿ ಟ್ರೋಲ್‌ಗೂ ಸಹ ಗುರಿಯಾಗಿದ್ದರು.

ಸಧ್ಯ ಆ ಹಳೆ ವಿಚಾರವನ್ನು ಬಿಟ್ಟು, ಅವರ ವಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಪ್ರತಾಪ್ ಜನವರಿ 10, 1998 ರಂದು ಜನಿಸಿದರು. ಅವರ ವಯಸ್ಸು 2023 ರ ಹೊತ್ತಿಗೆ 25 ವರ್ಷ. ಮಂಡ್ಯದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು, ಸಧ್ಯ ಬಿಗ್‌ಬಾಸ್‌ ಕನ್ನಡ 10 ರಲ್ಲಿ ಭಾಗವಹಿಸಿದ್ದಾರೆ.

ಡ್ರೋನ್ ಪ್ರತಾಪ್ ಭಾರತೀಯ ಯುವ ವಿಜ್ಞಾನಿ, ಎಂಜಿನಿಯರ್ ಮತ್ತು ಉದ್ಯಮಿ ಅಂತ ಹೇಳಲಾಗುತ್ತದೆ. ಅವರು ವಿದ್ಯುತ್ ತ್ಯಾಜ್ಯದಿಂದ 600 ಕ್ಕೂ ಹೆಚ್ಚು ಡ್ರೋನ್‌ಗಳನ್ನು ನಿರ್ಮಿಸಿದ್ದಾಗಿ ತಿಳಿದು ಬಂದಿದೆ. ಅವರ ಬಳಿ ಕೆಲವು ಸೈಟ್ಗಳಿದ್ದು 2 ಕೋಟಿ ಮೌಲ್ಯದ ಮನೆಯಿದೆ ಎನ್ನಲಾಗುತ್ತಿದೆ. ಇನ್ನು 2023 ರ ಹೊತ್ತಿಗೆ, ಡ್ರೋನ್ ಪ್ರತಾಪ್ ಅವರ ನಿವ್ವಳ ಮೌಲ್ಯವು $1 ಮಿಲಿಯನ್ ಡಾಲರ್‌ ಆಗಿದೆ ಎಂದು ವರದಿಯಾಗಿದೆ. ಆದ್ರೆ ಇದು ಅಧಿಕೃತವಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.