ಖ್ಯಾತ ಕ್ರಿಕೆಟರ್ ಅನಿಲ್ ಕುಂಬ್ಳೆ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು, ಇಲ್ಲಿದೆ ಕಂಪ್ಲೀಟ್ ಕಹಾನಿ

 | 
ರರಹ

 ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಅವರು ಕರ್ನಾಟಕದ ಹೆಮ್ಮೆ. ಅನಿಲ್ ಕುಂಬ್ಳೆ ಅವರ ವೈಯಕ್ತಿಕ ಬದುಕಿನ ಬಗ್ಗೆ ನಾವಿಂದು ತಿಳಿಯೋಣ. ಅನಿಲ್ ಕುಂಬ್ಳೆ ಅವರು ಚೇತನಾ ರಾಮತೀರ್ಥರನ್ನು ವಿವಾಹವಾಗಿದ್ದಾರೆ. ಚೇತನಾ ಅವರ ಮೊದಲ ಮದುವೆಯಿಂದ ಜನಿಸಿರುವ ಮಗಳು ಅರುಣಿಯನ್ನೂ ದತ್ತು ಪಡೆದಿದ್ದಾರೆ. ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನಾ ಅವರನ್ನು ಅವರು ಕೆಲಸ ಮಾಡುತ್ತಿದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಭೇಟಿಯಾದರು. ಆ ಸಮಯದಲ್ಲಿ ಚೇತನಾ ಅವರಿಗೆ ಮದುವೆಯಾಗಿತ್ತು.

ಭಾರತೀಯ ಕ್ರಿಕೆಟ್ನಲ್ಲಿ 'ಜಂಬೋ' ಎಂದು ಕರೆಯಲ್ಪಡುವ ಅನಿಲ್ ಕುಂಬ್ಳೆ ಅವರದ್ದು ಅತ್ಯಂತ ಸರಳ ಜೀವನ. ಅವರ 18 ವರ್ಷಗಳ ಕ್ರಿಕೆಟ್ ಜೀವನದಲ್ಲಿ, ಅವರ ಹೆಸರು ಎಂದಿಗೂ ಯಾವುದೇ ವಿವಾದಕ್ಕೆ ಒಳಗಾಗಲಿಲ್ಲ. ಕ್ರಿಕೆಟ್ ಮೈದಾನದಲ್ಲಿ ಕುಂಬ್ಳೆ ಅವರು ನಾಯಕ ಮತ್ತು ಆಟಗಾರನಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರು. ಸ್ಪಿನ್ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ ಕುಂಬ್ಳೆ ಟೀಂ ಇಂಡಿಯಾ ನಾಯಕತ್ವವನ್ನೂ ವಹಿಸಿದ್ದರು. 

ನಿವೃತ್ತಿಯ ನಂತರ ಭಾರತ ತಂಡದ ಕೋಚ್ ಜವಾಬ್ದಾರಿಯನ್ನೂ ವಹಿಸಿದ್ದರು. ಕುಂಬ್ಳೆಯನ್ನು ಇಷ್ಟಪಡುವವರಿಗೆ ಕೊರತೆ ಇರಲಿಲ್ಲ ಮತ್ತು ಅವರ ಅಭಿಮಾನಿಗಳ ಪಟ್ಟಿಯಲ್ಲಿ ಹುಡುಗಿಯರೂ ಸೇರಿದ್ದಾರೆ. ಆದರೆ ಭಾರತದ ಅತ್ಯಂತ ಯಶಸ್ವಿ ಬೌಲರ್ ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾದರು.ಕುಂಬ್ಳೆ ಅವರ ಪರಿಚಯವಾದಾಗ ಚೇತನಾ ಅವರಿಗೆ ಮದುವೆಯಾಗಿತ್ತು. 1986 ರಲ್ಲಿ, ಚೇತನಾ ಮೈಸೂರಿನಲ್ಲಿ ಸ್ಟೋರ್ ಬ್ರೋಕರ್ ಅನ್ನು ವಿವಾಹವಾದರು. ಆದಾಗ್ಯೂ, ಈ ಮದುವೆಯಲ್ಲಿ ಅವರು ಸಂತೋಷವಾಗಿರಲಿಲ್ಲ. ಗಂಡನಿಂದ ದೂರವಿರಲು ಟ್ರಾವೆಲ್ ಏಜೆನ್ಸಿಯೊಂದರ ಕೆಲಸ ಮಾಡತೊಡಗಿದ್ದರು.
ಅನಿಲ್ ಕುಂಬ್ಳೆ ಮೊದಲ ಬಾರಿಗೆ ಚೇತನಾ ಅವರನ್ನು ಭೇಟಿಯಾದಾಗ ಇಬ್ಬರ ನಡುವೆ ಗೆಳೆತನ ಶುರುವಾಗಿತ್ತು. 1998 ರಲ್ಲಿ ಚೇತನಾ ತನ್ನ ಪತಿಯಿಂದ ಸಂಪೂರ್ಣವಾಗಿ ಬೇರ್ಪಟ್ಟರು.

ಅನಿಲ್ ಕುಂಬ್ಳೆ ಚೇತನಾ ಅವರ ಬಳಿ ಮದುವೆಗೆ ಪ್ರಸ್ತಾಪಿಸಿದರು, ಆದರೆ ಅವರು ಒಪ್ಪಲಿಲ್ಲ. ಇನ್ನು ಪ್ರೀತಿ, ಮದುವೆಯಂತಹ ಸಂಬಂಧಗಳಲ್ಲಿ ನಂಬಿಕೆ ಇಲ್ಲ ಎಂದು ಹೇಳುತ್ತಲೇ ಇದ್ದರಂತೆ. ಕುಂಬ್ಳೆ ಕಾದು ಪ್ರೀತಿಯಿಂದ ಚೇತನಾಳ ಮನ ಗೆದ್ದರು. 1999 ರಲ್ಲಿ ಇಬ್ಬರೂ ವಿವಾಹವಾದರು. ಕುಂಬ್ಳೆ ಮತ್ತು ಚೇತನಾ ಮದುವೆಯಾದಾಗ ಚೇತನಾಗೆ ಒಬ್ಬಳು ಮಗಳಿದ್ದಳು. ಮಗಳ ಜವಾಬ್ದಾರಿಯನ್ನು ಹೊರಲು ಇಬ್ಬರೂ ಸುದೀರ್ಘ ಹೋರಾಟ ನಡೆಸಿ ಮಗಳನ್ನು ತಮ್ಮದಾಗಿಸಿಕೊಂಡರು.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.