ತುಕಾಲಿ ಸಂತು ಖರೀದಿ ಮಾಡಿದ ಕಾರಿನ ಬೆಲೆ ಎಷ್ಟು ಗೊ.ತಾ; ಈತ ನಿಜವಾಗ್ಲೂ ಬಡವನಾ

 | 
Gf

ಬಿಗ್​ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಹೊಸ ಕಾರು ಖರೀದಿಸಿದ್ದಾರೆ. ತುಕಾಲಿ ಸಂತೋಷ್ ಅವರು ಕಾರು ಖರೀದಿ ಮಾಡುವ ವಿಡಿಯೋ  ಒಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದು ಅವರ ಫ್ಯಾನ್ಸ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ತುಕಾಲಿ ಸಂತೋಷ್ ಅವರು ಹ್ಯೂಂಡೈ ಕಿಯಾ ಕಾರು ಖರೀದಿ ಮಾಡಿದ್ದು ಈ ಮಾಡೆಲ್ ಕಾರುಗಳ ಬೆಲೆ ಸುಮಾರು 15-20 ಲಕ್ಷದ ತನಕ ಇದೆ. ಅಂತೂ ತುಕಾಲಿ ಸಂತೋಷ್ ಪತ್ನಿ ಜೊತೆ ಖುಷಿಯಿಂದ ತಮ್ಮ ಕಾರನ್ನು ರಿವೀಲ್ ಮಾಡಿದ್ದಾರೆ.

ತುಂಬಾ ದಿನಗಳಿಂದ ಕಾರು ಖರೀದಿ ಮಾಡಬೇಕು ಅಂದುಕೊಳ್ಳುತ್ತಿದ್ದೆ ಆಗ ಕನಸು ನನಸು ಆಗಿದೆ. ದೊಡ್ಡ ಕಾರುಗಳನ್ನು ನೋಡಿದರೆ ನಮಗೂ ಆಸೆ ಆಗುತ್ತಿತ್ತು ಆದರೆ  EMI ಅನ್ನೋ ಭಯ ಜಾಸ್ತಿ ಇದೆ. ಬಿಗ್ ಬಾಸ್‌ ಮನೆಯಿಂದ ಬಂದ ಹಣದಲ್ಲಿ ಕಾರಿನ ಡೈನ್ ಪೇಮೆಂಟ್ ಮಾಡಲು ಸಾಕಾಗುಷ್ಟು ಹಣ ಬಂದಿದೆ...ಅದು ಡೈನ್‌ ಪೇಮೆಂಟ್ ಮಾಡಿರುವೆ ಅಷ್ಟೆ. ಸಂಪೂರ್ಣ ಹಣವನ್ನು ಒಂದಕ್ಕೆ ಹಾಕಲು ಆಗಲ್ಲ. ಗಿಚ್ಚಿ ಗಿಲಿಗಿಲಿ ಸೀಸನ್ 3 ಮಾಡುತ್ತಿರುವೆ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವೆ. 

ಜೀವನದಲ್ಲಿ ಕಮಿಟ್‌ಮೆಂಟ್ ಸಾಕಷ್ಟಿದೆ. EMI ಆದ್ರೂ ಪರ್ವಾಗಿಲ್ಲ ಬಿಗ್ ಬಾಸ್‌ನಿಂದ ಹಣದಲ್ಲಿ ಕಾರು ಖರೀದಿ ಮಾಡೋಣ ಅಂತ ಮನಸ್ಸು ಮಾಡಿದೆ. ಉತ್ತರ ಕರ್ಣಾಟಕ ಕಡೆ ಜಾಸ್ತಿ ಪ್ರಯಾಣ ಮಾಡುವುದು ಹೀಗಾಗಿ ದೊಡ್ಡ ಕಾರಿದ್ದರೆ ಬೇಗ ಪ್ರಯಾಣ ಮಾಡಬಹುದು ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ತುಕಾಲಿ ಸಂತೋಷ್ ಮಾತನಾಡಿದ್ದಾರೆ.

ಅಣ್ಣ ದುಡ್ಡು ಯಾರು ವರ್ತೂರ್ ಕೊಟ್ನಾ ಎಂದಿದ್ದಾರೆ ಒಬ್ಬರು. ತಲೆನೇ ಕೆಡಿಸ್ಕೋಬೇಡಿ ನಮ್ ಕರುನಾಡ ಜನತೆ ಇನ್ನೂ ಮೇಲಕ್ಕೆ ಒಯ್ಯುತ್ತೆ ನಿಮ್ಮನ್ನ ಎಂದಿದ್ದಾರೆ ಇನ್ನೊಬ್ಬರು. ಇನ್ನೂ ಕೆಲವರು ಒಳ್ಳೇದಾಗಲಿ ಎಂದು ಹಾರೈಸಿದ್ದಾರೆ. ಇನ್ನೂ ಕೆಲವರು ಅಣ್ಣ ನಿಮ್ಮ ಬಳಿ ದುಡ್ಡಿಲ್ಲ ಎನ್ನುತ್ತಿದ್ದಿರಿ. ಇಷ್ಟೊಂದು ಖರ್ಚು ಮಾಡಿದ್ದೀರಿ ಎಂದಿದ್ದಾರೆ.

ನೆಗೆಟಿವ್ ಕಾಮೆಂಟ್ ಮಾಡುವವರಿಗೆ ನಾನು ಎಂದೂ ಉತ್ತರ ಕೊಡುವುದಿಲ್ಲ ನಮ್ಮ ಕೆಲಸಗಳು ಎಲ್ಲದಕ್ಕೂ ಉತ್ತರ ಕೊಡಬೇಕು. ಬಡವ ಬಡವ ಅಂದುಕೊಂಡು ಕಾರು ಖರೀದಿ ಮಾಡಿಬಿಟ್ಟ, ಚಪ್ಪಲಿಗೂ ಗತಿ ಇಲ್ಲ ಅಂತಾನೆ ಕಾರು ಖರೀದಿ ಮಾಡಿದ್ದಾನೆ ಎಂದು ನೆಗೆಟಿವ್ ಕಾಮೆಂಟ್ ಬರ್ತಿದೆ. ನಾನು ಬಡವ ಅಂತ ಎಲ್ಲೂ ಹೇಳಿಕೊಂಡಿಲ್ಲ ನಾನು ಶ್ರಮ ಜೀವಿ...ಇರುವುದರಲ್ಲಿ ಜೀವನ ಬ್ಯಾಲೆನ್ಸ್ ಮಾಡಿಕೊಂಡು ಕೆಲಸ ಮಾಡುತ್ತಿರುವೆ ಎಂದಿದ್ದಾರೆ ತುಕಾಲಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.