ದಶಕಗಳ ಹಿಂದೆ ಸುನೀಲ್ ಜೊತೆ ಮಾಲಾಶ್ರೀ ಒಡನಾಟ ಯಾವ ಮಟ್ಟಿಗೆ ಇತ್ತು ಗೊ ತ್ತಾ
Aug 2, 2024, 15:07 IST
|
ಕನ್ನಡ ಸಿನಿಮಾ ರಂಗ ಕಂಡ ಜೋಡಿಹಕ್ಕಿಗಳಲ್ಲಿ ಮಾಲಾಶ್ರೀ ಹಾಗೂ ಸುನಿಲ್ ಜೋಡಿ ಕೂಡ ಒಂದು. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಪ್ರೀತಿಯ ಜೋಡಿಯಂತೆ ಹಾಡಿ ಕುನಿಯುತ್ತಿದ್ದ ಈ ಮುದ್ದಾದ ಜೋಡಿಯ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ ಮಾಲಾಶ್ರೀ ಅವರ ಕಣ್ಣೆದುರಿಗೆ ಸುನಿಲ್ ತಮ್ಮ ಪ್ರಾಣವನ್ನು ಕಳೆದುಕೊಂಡರು.
ಮಾಲಾಶ್ರೀ ಹಾಗೂ ಸುನಿಲ್ ಒಟ್ಟಟ್ಟಿಗೆ ಸಿನಿಮಾಗಲಲ್ಲಿ ನಟಿಸುತ್ತಾ ರೀಲ್ ಲೈಫ್‌ನಲ್ಲಿ ಅಷ್ಟೇ ಅಲ್ಲದೆ ರಿಯಲ್ ಲೈಫ್‌ನಲ್ಲೂ ಜೋಡಿ ಹಕ್ಕಿಯಂತೆ ಹಾಡಿ ನಲಿಯುತ್ತಿದ್ದ ಸಮಯವದು. ಮಾಲಾಶ್ರಿ ಅವರ ಗೆಳೆಯ ಸುನಿಲ್ ಕನ್ನಡ ಸಿನಿಮಾ ಇಂಡಷ್ಟ್ರಿಯಲ್ಲಿ ಆಗಿನ ಕಾಲಕ್ಕೆ ಟ್ರೆಂಡಿಂಗ್‌ನಲ್ಲಿದ್ದವರು, ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದವರು. ಬೆಳ್ಳಿ ಕಾಲುಂಗುರ, ಮನಮೆಚ್ಚಿದ ಸೊಸೆ ಸಿನಿಮಾಗಳಲ್ಲಿ ನಟಿಸಿ ಜನ ಪ್ರಸಿದ್ದಿ ಪಡೆದವರು.
ಆದರೆ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಪ್ರಾಣ ಕಳೆದುಕೊಂಡವರು ಸುನಿಲ್. ಜೂನ್ 25, 1994ರಲ್ಲಿ ಸುನಿಲ್ ಊಹಿಸಲಾಗದ ಕಹಿ ಘಟನೆ ಒಂದು ನಡೆದುಬಿಟ್ಟಿತ್ತು. ಯಾರೂ ಕೂಡ ಕನ್ನಡ ಸಿನಿಮಾ ರಂಗದಲ್ಲಿ ಹೀಗೊಂದು ಘಟನೆ ನಡೆಯುತ್ತೆ ಎಂದು ಕೂಡ ಊಹಿಸಿರಲಿಲ್ಲ. ಆ ದಿನ ನಟಿ ಮಾಲಾಶ್ರಿ ಜೊತೆ ಸುನಿಲ್ ಹಾಗೂ ಪ್ರಡ್ಯೂಸರ್ ಕಾರ್‌ನಲ್ಲಿ ಪ್ರಯಾಣ ಬೆಳೆಸಿದ್ದರು.
ಎದುರಿನಲ್ಲಿ ಯಮನಂತೆ ಬಂದ ಲಾರಿ ಈ ಮೂವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯಿತು. ಲಾರಿ ಕಾರಿಗೆ ಡಿಕ್ಕಿ ಹೊಡೆದ ರಬಸಕ್ಕೆ ಕಾರು ಅಪ್ಪಚ್ಚಿಯಾಗಿತ್ತು, ಸಾವಿನ ಸುಳಿಯಿಂದ ತಪ್ಪಿಸಿಕೊಂಡು ಮಾಲಾಶ್ರಿ ಹಾಗೂ ನಿರ್ಮಾಕರು ಗಾಯಗಳೊಂದಿಗೆ ಹೊರಬಂದಿದ್ದರು, ಆದರೆ ಸುನಿಲ್ ಮಾತ್ರ ಸಾವನ್ನಪ್ಪಿದ್ದರು.
ಆ ಒಂದು ಘಟನೆಯಿಂದ ಇಡೀ ಸಿನಿಮಾ ರಂಗವೇ ಬೆಚ್ಚಿಬಿದ್ದತ್ತು, ತನ್ನ ಕಣ್ಣ ಎದುರೆ ತನ್ನ ಗೆಳೆಯ ಪ್ರಾಣ ಕಳೆದುಕೊಂಡಿದ್ದನ್ನು ನೋಡಿ ಮಾಲಾಶ್ರಿ ಖಿನ್ನತೆಗೆ ಒಳಗಾಗಿದ್ದರೂ, ಯಾವ ಸಿನಿಮಾ ಕೂಡ ಮಾಡುವುದಿಲ್ಲ, ನಂತರ 1995 ರಲ್ಲಿ ಮಾಲಾಶ್ರಿ ಸಿನಿಮಾಗೆ ಕಂಬ್ಯಾಕ್ ಮಾಡಿದರು. 1997ರಲ್ಲಿ ಕೋಟಿ ರಾಮು ಎಂಬುವವರನ್ನು ವಿವಾಹವಾಗಿ ಸಂಸಾರ ನಡೆಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.