ಗಿಣಿರಾಮ ಸೀರಿಯಲ್ ನ ಟಿಯ ಗಂಡ ಎಷ್ಟು ಸೂಪರ್ ಗೊ ತ್ತಾ; ಕನ್ನಡಿಗರು ಫಿದಾ

 | 
H

ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಸಂಭ್ರಮ. ಒಬ್ಬರಾದ ಮೇಲೆ ಒಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ, ನಟಿ ಸಿರಿ ಕೂಡ ಸರಳವಾಗಿ ಮದುವೆಯಾಗಿದ್ದರು. ಈಗ ನಯನಾ ನಾಗರಾಜ್ ಅವರು ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.

ಅಷ್ಟಕ್ಕು ನಯನಾ ಅಂದರೆ ಯಾರೆಂದು ನೆನಪಾಗಲಿಕ್ಕಿಲ್ಲ. ಬದಲಾಗಿ ಗಿಣಿರಾಮ ಧಾರವಾಹಿಯ ಮಹತಿ ಎಂದರೆ ಹಲವರಿಗೆ ಗೊತ್ತು. ಹೌದು ನಯನಾ ನಾಗರಾಜ್ ಅವರು ಪಾಪ ಪಾಂಡು ಹಾಗೂ ಗಿಣಿರಾಮ ಧಾರಾವಾಹಿಗಳಲ್ಲಿ ನಟಿಸಿದ್ದರು. ಉತ್ತಮ ಗಾಯಕಿಯೂ ಆಗಿರುವ ನಯನಾ ನಾಗರಾಜ್ ಸಾಕಷ್ಟು ವೇದಿಕೆಗಳಲ್ಲಿ ಹಾಡಿದ್ದಾರೆ.

ತಮ್ಮ ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ ಅವರೊಂದಿಗೆ ನಯನಾ ನಾಗರಾಜ್ ಅವರು ಹೊಸ ಬದುಕಿಗೆ ಕಾಲಿಟ್ದಿದ್ದಾರೆ. ಈ ಜೋಡಿ ಹತ್ತು ವರ್ಷಗಳಿಂದ ಪ್ರೀತಿ ಮಾಡುತ್ತಿದೆ. ಕೆಲ ತಿಂಗಳುಗಳ ಹಿಂದೆ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಮನೆಯಲ್ಲಿಯೇ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈಗ ಅಷ್ಟೇ ಸರಳವಾಗಿ ಸಂಪ್ರದಾಯ ಬದ್ದವಾಗಿ ಸಪ್ತಪದಿ ತುಳಿದಿದೆ.

ಸುಹಾಸ್ ಶಿವಣ್ಣ ಕೂಡ ರಂಗಭೂಮಿಯಲ್ಲಿ ಗುರುತಿಸಿಕೊಂಡವರು ಎನ್ನಲಾಗಿದೆ. ಇವರಿಬ್ಬರು ಹಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸುಹಾಸ್ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.ಅಂದಹಾಗೆ ಈ ಜೋಡಿ ಮದುವೆಗೆ ಕನ್ನಡ ಕಿರುತೆರೆಯ ನಿನಗಾಗಿ ಖ್ಯಾತಿಯ ರಿತ್ವಿಕ್ ಮಠದ್, ನಟ ಸಿಹಿ ಕಹಿ ಚಂದ್ರು ಕುಟುಂಬ ಮುಂತಾದವರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.