ಜೈ.ಲಿನಲ್ಲಿ ಮಹಿಳಾ ಖೈದಿಗಳನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ, ಇದು ಅಕ್ಷರಶಃ ನ.ರಕದ ಬಾಗಿಲು

 | 
Hd

ಸಾಮನ್ಯವಾಗಿ ಮೋಸ ಮಾಡಿ, ಕೊಲೆ ಸುಲಿಗೆ ಮಾಡಿದವರನ್ನು ಪೋಲಿಸರು ಬಂಧಿಸಿ ವಿಚಾರಣೆಗೆ ಹಾಜರು ಪಡಿಸುತ್ತಾರೆ. ನಂತರದಲ್ಲಿ ಕೋರ್ಟ್ ಅವರಿಗೆ ಶಿಕ್ಷೆ ನೀಡುತ್ತವೆ. ಇನ್ನೂ ಕೆಲವು ಸಲ ಕೋರ್ಟ್ ವಿಚಾರಣೆ ತಡವಾಗುತ್ತ ಹೋಗುವ ಕಾರಣ ಶಿಕ್ಷೆ ಪ್ರಕಟವಾಗಿದೆ ಅವರು ಜೈಲಿನಲ್ಲೇ ಉಳಿಯಬೇಕಾಗುತ್ತದೆ. ಹೌದು ಅಂತಹ ಸಮಯದಲ್ಲಿ ಕೈದಿಗಳು ಏನು ಮಾಡುತ್ತಾರೆ. ಎಂದು ನಾವಿಂದು ತಿಳಿದುಕೊಳ್ಳೋಣ.

ಯಾವುದೇ ಅಪರಾಧ ಕೃತ್ಯದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಅಥವಾ ಶಿಕ್ಷೆಗೆ ಗುರಿಯಾಗಿ ಅಪರಾಧಿ ಎಂದು ಸಾಬೀತಾಗಿ ಜೈಲು ಸೇರುವವರಿಗೆ ಸರ್ಕಾರ ಬಂಪರ್ ಸೌಲಭ್ಯ ಕಲ್ಪಿಸಿದೆ. ರಾಜ್ಯದಲ್ಲಿ ಒಬ್ಬ ಬಡವನಿಗೆ ತಿಂಗಳಿಗೆ ಏಳು ಕೆ.ಜಿ. ಅಕ್ಕಿ ನೀಡಲು ತಗಾದೆ ತೆಗೆಯುತ್ತಿದೆ. ಆರೆ, ಜೈಲಿನಲ್ಲಿರುವ ಕ್ರಿಮಿನಲ್ ಗಳ ವಿಚಾರಕ್ಕೆ ಬಂದರೆ ಒಂದು ದಿನವೂ ತಡ ಮಾಡುವಂತಿಲ್ಲ. ಒಬ್ಬ ಶಿಕ್ಷಾ ಬಂಧಿಗೆ ಶರ್ಟ್, ಚಡ್ಡಿ, ಜಂಖಾನ, ಟೋಪಿ, ಟವಲ್, ಎರಡು ಬೆಡ್ ಶೀಟ್, ಒಂದು ಕಂಬಳಿ, ಪಿಲ್ಲೋ, ತಟ್ಟೆ, ಬಟ್ಲು, ಚೆಂಬು, ಲೋಟಾ ನೀಡಲಾಗುತ್ತದೆ. ಬೆಳಗ್ಗೆ ತಿಂಡಿ ಕೊಡಲಾಗುತ್ತದೆ.

ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಡಯಟ್ ಫುಡ್ ನೀಡಲಾಗುತ್ತದೆ. ದಿನಕ್ಕೆ 150 ಗ್ರಾಂ ಅಕ್ಕಿ, 300 ಗ್ರಾಂ ರಾಗಿ ಹಿಟ್ಟು, 80 ಗ್ರಾಂ ದಾಲ್ ಸೇರಿದಂತೆ ಶುದ್ಧ ತರಕಾರಿ, ಕಾಫಿ, ಟೀ ಎಲ್ಲವನ್ನು ಕಡ್ಡಾಯವಾಗಿ ನೀಡಲಾಗುತ್ತದೆ. ಐದು ನಿಮಿಷವೂ ತಡವಾಗುವುದಿಲ್ಲ. ಜತೆಗೆ ವಾರಕ್ಕೊಮ್ಮೆ ಮಾಂಸದೂಟ ಕೊಡಲಾಗುತ್ತದೆ. ಮೊದಲು ಒಬ್ಬ ಕೈದಿಯ ಒಂದು ದಿನದ ಊಟಕ್ಕೆ ಕೇವಲ 40 ರೂಪಾಯಿ ವೆಚ್ಚವಾಗುತ್ತಿತ್ತು. ಈಗ ಪರಿಸ್ಥಸ್ಥಿತಿ ಬದಲಾಗಿದೆ.100 ರುಪಾಯಿ  ವೆಚ್ಚದ ಗುಣಮಟ್ಟದ ಊಟ, ಸೌಲಭ್ಯ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ಕೋಟಿ ರೂಪಾಯಿ ವ್ಯಯಿಸುತ್ತಿದೆ.

ಅಪರಾಧ ಕೃತ್ಯ ಎಸಗಿ ಶಿಕ್ಷೆಗೆ ಗುರಿಯಾಗುವ ಕೈದಿಗಳು ದಿನವೂ ದುಡಿದು ಆದಾಯಗಳಿಸಬಹುದು. ಕಾರಾಗೃಹದಲ್ಲಿ ಕೌಶಲ್ಯ ರಹಿತ, ಅರೆ ಕೌಶಲ್ಯ ಹಾಗೂ ಕೌಶಲ್ಯ ಎಂದು ಪರಿಗಣಿಸಿ ಕನಿಷ್ಠ 40 ರೂ. ನಿಂದ 60 ರೂ. ವರೆಗೂ ದಿನ ಗೂಲಿ ನೀಡಲಾಗುತ್ತದೆ. ಕೂಲಿ ಮಾಡಿದ ಕೈದಿಗೆ ಅರ್ಧ ಮೊತ್ತಕ್ಕೆ ಜೈಲಿನ ಟೋಕನ್ ನೀಡಲಾಗುತ್ತದೆ. ಟೋಕನ್ ಬಳಿಸಿ ಜೈಲಿನ ಕ್ಯಾಂಟೀನ್ ನಲ್ಲಿ ಬೇಕಾಗಿದ್ದನ್ನು ಖರೀದಿ ಮಾಡಬಹುದು. ಉಳಿದಿದ್ದನ್ನು ಕೈದಿಯ ಸಂಬಂಧಿಕರ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತದೆ. ಟೀ, ಕಾಫಿ, ತಿನಿಸುಗಳನ್ನು ಜೈಲಿನಲ್ಲಿಯೇ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ನಿಯಮಿತವಾಗಿ ಅರೋಗ್ಯ ತಪಾಸಣೆ. ಮಹಿಳೆಯರಿಗೆ ಹೆರಿಗೆ ವ್ಯವಸ್ಥೆಯನ್ನು ಸಹಾ ಮಾಡಲಾಗುತ್ತಿದೆ.

ಸನ್ನಡತೆ ಹಾಗೂ ವಿಚಾರಣಾಧೀನ ಕೈದಿ ಅನಾರೋಗ್ಯಕ್ಕೆ ಒಳಗಾದರೆ ಜೈಲಿನ ಆಸ್ಪತ್ರೆಯಲ್ಲಿ ಉಚಿತವಾಗಿ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಪ್ರಮುಖ ಶಸ್ತ್ರ ಚಿಕಿತ್ಸೆಗೆ ಒಳಪಟ್ಟರೂ ಜೈಲು ಅಧಿಕಾರಿಗಳೇ ಸರ್ಕಾರಿ ವಾಹನದಲ್ಲಿ ಸೂಕ್ತ ಆಸ್ಪತ್ರೆಗೆ ಕರೆ ತಂದು ಶಸ್ತ್ರ ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಹೀಗಾಗಿ ಜೈಲಿನಲ್ಲಿರುವ ಕೈದಿಗಳು ಆರೋಗ್ಯದ ಬಗ್ಗೆಯಾಗಲೀ, ಊಟದ ಬಗ್ಗೆಯಾಗಲೀ ಚಿಂತೆ ಮಾಡುವ ಅಗತ್ಯವೇ ಇಲ್ಲ. ಇಂತಹ ಸುಸಜ್ಜಿತ ಸೌಲಭ್ಯವನ್ನು ಜೈಲಿನಲ್ಲಿರುವ ಕೈದಿಗಳಿಗೆ ಕಲ್ಪಿಸಲಾಗಿದೆ. 

ಕೈಯಲ್ಲಿ ಒಂದು ರೂಪಾಯಿ ಇಲ್ಲದಿದ್ದರೂ ಎಲ್ಲವನ್ನೂ ಸರ್ಕಾರವೇ ನೋಡಿಕೊಳ್ಳುತ್ತದೆ. ಅದೇ ವಿಕಲಚೇತನರಿಗೆ, ವಿಧವೆಯರಿಗೆ, ಹಿರಿಯ ನಾಗರಿಕರಿಗೆ ಸರ್ಕಾರ ಮಾಸಿಕ ಒಂದು ಸಾವಿರ ರೂ. ಕೊಡಲು ಸರ್ಕಾರ ನೂರು ಬಾರಿ ಚಿಂತಿಸುತ್ತದೆ. ಇನ್ನು ಅನಾರೋಗ್ಯಕ್ಕೆ ಒಳಗಾದರೆ ಅವರವರ ಹಣೇ ಬರಹ. ಬೆಡ್ ಸಿಕ್ಕಿಲ್ಲ, ಮೆಡಿಸಿನ್ ಸಿಕ್ಕಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಶಕ್ತಿ ಇಲ್ಲ ಹೀಗೆ ಸಮಸ್ಯೆಗಳು ನೂರಾರು. ಅದೇ ಕೈದಿಗಳಿಗೆ ಇಂಧನ ಸಮೇತ ಸರ್ಕಾರಿ ವಾಹನದಲ್ಲಿ ಕರೆದುಕೊಂಡು ಹೋಗಿ ಉತ್ತಮ ವೈದ್ಯರ ಬಳಿ ತೋರಿಸಿ ವಾಸಿ ಮಾಡಿಸಿಕೊಂಡು ಜೈಲು ಅಧಿಕಾರಿಗಳೇ ಕರೆದುಕೊಂಡು ಹೋಗಿ ಬರುತ್ತಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.