ಸಂಪೂರ್ಣ ಬದಲಾದ ಹುಚ್ಚ ವೆಂಕಟ್; ಇನ್ನುಮುಂದೆ ರಮ್ಯಾ ಸಹವಾಸ ಬೇಡ ಎಂದ ವೆಂಕಟ್

 | 
Ui

ಹುಚ್ಚ ವೆಂಕಟ್.. ವಿಚಿತ್ರ ಮ್ಯಾನರಿಸಮ್ ನಿಂದಲೇ ಸುದ್ದಿಯಾದವರು. ಹೆಣ್ಣು ಮಕ್ಕಳು ಬಟ್ಟೆ ಬಿಚ್ಚಿ ಕುಣಿಯೋ ಸಿನಿಮಾಗಳನ್ನ ಬ್ಯಾನ್ ಮಾಡಬೇಕು ಅಂತ ಅಭಿಯಾನ ಶುರುಮಾಡಿದ ಹುಚ್ಚ ವೆಂಕಟ್ ಅದಕ್ಕಾಗಿ ಸಾಕಷ್ಟು ಹೋರಾಟ ಕೂಡ ಮಾಡಿದ್ರು. ಆದ್ರೆ ಇವರಿಗೆ ಜನ ಹುಚ್ಚ ಅನ್ನೋ ಪಟ್ಟವನ್ನೇ ಕಟ್ಟಿಬಿಟ್ಟರು. ಇದೀಗ ಜನ ಗುರುತಿಸೋದೆ ಹುಚ್ಚ ವೆಂಕಟ್ ಅಂತ.

ಇವತ್ತಿಗೂ ಹುಚ್ಚ ವೆಂಕಟ್ ಅವರನ್ನ ಫಾಲೋ ಮಾಡೋ ಮಂದಿ ಹೆಚ್ಚಿದ್ದಾರೆ. ಆದ್ರೆ ಹುಚ್ಚ ವೆಂಕಟ್ ಈಗ ಆರ್ಥಿಕವಾಗಿ ತುಂಬಾ ಕುಗ್ಗಿ ಹೋಗಿದ್ದಾರೆ. ಜೊತೆಗೆ ಮಾನಸಿಕವಾಗಿಯೂ ಅಷ್ಟೇ. ಹುಚ್ಚ ವೆಂಕಟ್ ಅವರು ಈಗ ಏನು ಮಾಡುತ್ತಿದ್ದಾರೆ ಅನ್ನೋದನ್ನ ಹುಡುಕೋ ಪ್ರಯತ್ನವನ್ನ ಕೂಡಾ ಮಾಡಿದ್ದರು. ಅಂತೆಯೇ ಸಂದರ್ಶನ ಕೂಡ ಮಾಡಿ ಅವರನ್ನ ಪ್ರಶ್ನೆ ಮಾಡಿದ ವೇಳೆ ಅವರ ಸ್ಥಿತಿಗತಿ ತುಂಬಾ ಅಸಹಾಯಕ ರೀತಿಯಲ್ಲಿ ಇರೋದು ಕಂಡುಬಂದಿದೆ.

ಆಸರೆ ಅಂತ ಹುಚ್ಚ ವೆಂಕಟ್ ಗೆ ಯಾರು ಇಲ್ಲ. ಸದ್ಯ ಹುಚ್ಚ ವೆಂಕಟ್ ಕಿರುಚಿತ್ರಗಳಲ್ಲಿ ನಟನೆ ಮಾಡೋ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಜೀವನಕ್ಕೆ ಅಂತ ಅವರಿಗೆ ದೊಡ್ಡ ಮಟ್ಟದ ಅವಕಾಶಗಳು ಇಲ್ಲ.ಅಷ್ಟೇ ಅಲ್ಲ ನಾನು ಬೀದಿಗೆ ಬಿದ್ದಾಗ ನನಗೆ ಅನ್ನ ಹಾಕಿದ್ದು ಮಂಗಳಮುಖಿಯರು ಮತ್ತು ಭಿಕ್ಷುಕರು ಅಂತ ಮಾತನಾಡೋ ವೇಳೆ ಹೇಳಿಕೊಂಡಿದ್ದಾರೆ ಹುಚ್ಚ ವೆಂಕಟ್. 

ಅಷ್ಟೇ ಅಲ್ಲ ತಂದೆ-ತಾಯಿಗೆ ರೆಸ್ಪೆಕ್ಟ್ ಕೊಟ್ಟು ಅವರನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ಮನವಿ ಕೂಡ ಮಾಡಿಕೊಂಡ್ರು ಹುಚ್ಚ ವೆಂಕಟ್. ಇದೀಗ ಸಕತ್ ಫಿಟ್ ಆಗಿ ಕಾಣಿಸಿ ಕೊಳ್ಳುತ್ತಿರುವ ಇವರು ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಸಿನೆಮಾದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.