ಹುಲಿ ಕಾತಿ೯ಕ್ ಗೆ ಗಿಚ್ಚಿಗಿಲಿಗಿಲಿ 3 ಪಟ್ಟ, ಬಿಗ್ಬಾಸ್ ಗೆ ನೇರ ಎಂಟ್ರಿ

 | 
Jd
 ಕಳೆದ ವರ್ಷ ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮ ಮುಗಿಯುತ್ತಿದ್ದ ಹಾಗೇ ‘ಗಿಚ್ಚಿ ಗಿಲಿಗಿಲಿ 3’ ಹೊಸ ಸೀಸನ್‌ಗೆ ಚಾಲನೆ ನೀಡಲಾಯಿತು. ಈಗ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಇನ್ನೇನು ಆರಂಭವಾಗಲಿದೆ. ಹೀಗಿರುವಾಗಲೇ, ‘ಗಿಚ್ಚಿ ಗಿಲಿಗಿಲಿ 3’ ಶೋ ಅಂತ್ಯವಾಗಿದೆ. ಈಗಾಗಲೇ ‘ಗಿಚ್ಚಿ ಗಿಲಿಗಿಲಿ 3’ ಗ್ರ್ಯಾಂಡ್ ಫಿನಾಲೆ ಶೂಟಿಂಗ್ ಮುಕ್ತಾಯವಾಗಿದ್ದು, ಸಂಚಿಕೆ ಸೆಪ್ಟೆಂಬರ್ 15ರ ಅಂದರೆ ನಿನ್ನೆ ಸಂಜೆ ಅಷ್ಟೇ ಪ್ರಸಾರವಾಗಿದೆ.
ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸಲೀಸಾಗಿ ನಿಭಾಯಿಸಿ, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವ, ಅದ್ಭುತ ಕಾಮಿಡಿ ಟೈಮಿಂಗ್ ಹೊಂದಿರುವ ಕಲಾವಿದ ಹುಲಿ ಕಾರ್ತಿಕ್. ಗಿಚ್ಚಿ ಗಿಲಿಗಿಲಿ 3 ಕಾರ್ಯಕ್ರಮದಲ್ಲಿ ಹುಲಿ ಕಾರ್ತಿಕ್ ಗೆಲುವಿನ ನಗೆ ಬೀರಿದ್ದಾರೆ.ಹುಲಿ ಕಾರ್ತಿಕ್ ಮೂಲತಃ ಶಿವಮೊಗ್ಗದವರು. ತೀರ್ಥಹಳ್ಳಿಯ ಚಿಕ್ಕಳ್ಳಿ ಎಂಬಲ್ಲಿ ಹುಟ್ಟಿ ಬೆಳೆದವರು ಹುಲಿ ಕಾರ್ತಿಕ್. ಸದ್ಯ ಇವರಿಗೆ 30 ವರ್ಷ ವಯಸ್ಸು. ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ಹುಲಿ ಕಾರ್ತಿಕ್‌ಗೆ ತಾಯಿಯೇ ಪ್ರಪಂಚ. 
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆದ ಹುಲಿ ಕಾರ್ತಿಕ್ ಹೊಟ್ಟೆಪಾಡಿಗಾಗಿ ಮಾಡದ ಕೆಲಸಗಳಿಲ್ಲ.ಗಾರೆ ಕೆಲಸ ಮಾಡಿರುವ ಹುಲಿ ಕಾರ್ತಿಕ್, ಪಂಚರ್ ಶಾಪ್, ವೆಲ್ಡಿಂಗ್ ಶಾಪ್ ಹಾಗೂ ಐಸ್‌ಕ್ರೀಮ್ ಪಾರ್ಲರ್‌ನಲ್ಲೂ ಕೆಲಸ ಮಾಡಿದ್ದಾರೆ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಾಗ ಪಬ್ಲಿಕ್ ಟಾಯ್ಲೆಟ್ ಸಹ ಕ್ಲೀನ್ ಮಾಡಿದ್ದಾರೆ. ಹೋಟೆಲ್‌ನಲ್ಲಿ ಟೇಬಲ್ ಕ್ಲೀನ್ ಮಾಡಿ, ಪಾತ್ರೆಯನ್ನೂ ತೊಳೆದಿದ್ದಾರೆ.
 ಇಂತಿಪ್ಪ ಹುಲಿ ಕಾರ್ತಿಕ್‌ಗೆ ಕೈಹಿಡಿದಿದ್ದು ಕಲೆ. ನಾಟಕ, ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಹುಲಿ ಕಾರ್ತಿಕ್‌ ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಶೋಗಳನ್ನ ಮೂಲಕ ಜನಪ್ರಿಯತೆ ಪಡೆದರು. ಟಗರು ಪಲ್ಯ, ತ್ರಿವಿಕ್ರಮ ಮುಂತಾದ ಸಿನಿಮಾಗಳಲ್ಲಿ ಹುಲಿ ಕಾರ್ತಿಕ್ ನಟಿಸಿದ್ದಾರೆ.ಬಿಗ್ ಬಾಸ್‌’ ಮನೆ ಅಂದ್ಮೇಲೆ ಅಲ್ಲಿ ತಮಾಷೆ ಕೂಡ ಇರಬೇಕು. ಒಳ್ಳೆ ಕಾಮಿಡಿ ಟೈಮಿಂಗ್ ಹೊಂದಿರುವ ಪ್ರತಿಭೆಗಳು ‘ಬಿಗ್ ಬಾಸ್’ ಮನೆಯಲ್ಲಿ ಲಾಕ್ ಆದರೆ ವೀಕ್ಷಕರಿಗೆ ಮನರಂಜನೆ ಸಿಗೋದರಲ್ಲಿ ಡೌಟ್ ಇಲ್ಲ. ಈಗಾಗಲೇ ‘ಮಜಾ ಭಾರತ’ ಖೋಟಾದಿಂದ ಮಂಜು ಪಾವಗಡ, ವಿನೋದ್ ಗೊಬ್ರಗಾಲ ‘ಬಿಗ್ ಬಾಸ್’ ಮನೆ ಪ್ರವೇಶಿಸಿದ್ದರು. ಈ ಬಾರಿ ‘ಬಿಗ್ ಬಾಸ್’ ಮನೆ ಸೇರ್ತಾರಾ ಹುಲಿ ಕಾರ್ತಿಕ್ ಎಂಬುದೇ ಸದ್ಯದ ಪ್ರಶ್ನೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಆಕ್ಟೋಬರ್‌ ಆರಂಭದ ವೇಳೆಗೆ ಬಿಗ್ ಬಾಸ್ ಕನ್ನಡ 11 ಶುರುವಾಗಲಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.