ನನಗೂ ಮಗು ಬೇಕು ಎಂಬ ಆಸೆ ಇದೆ, ಆದರೆ ಫಿಗರ್ ಹಾಳಾಗುತ್ತೆ ಎಂಬ ಚಿಂತೆ; ರಾಗಿಣಿ ಪ್ರಜ್ವಲ್
Feb 22, 2025, 16:51 IST
|

ಫಿಟ್ ನೆಸ್ ಅಲ್ಲಿ ಹೆಸರು ಮಾಡಿ ಬ್ಯುಸಿನೆಸ್ ವುಮೆನ್ ಎಂದೇ ಕರೆಸಿಕೊಳ್ಳುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಪಾದಾರ್ಪಣೆ ಮಾಡಿದ್ದು, ಇದೀಗ ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದ ಶಾನಭೋಗರ ಮಗಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಫಿಟ್‌ನೆಸ್ ಟ್ರೈನರ್, ಡಾನ್ಸರ್ ಆಗಿರುವ ರಾಗಿಣಿ ನಟಿಯಾಗಿ ಕೂಡ ಮಿಂಚುತ್ತಿದ್ದಾರೆ.
ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಯಾಗಿರುವ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದು, ಮಗು ಯಾವಾಗ ಎನ್ನುವ ಪ್ರಶ್ನೆಗೆ ಇದೀಗ ರಾಗಿಣಿ ಉತ್ತರ ಕೊಟ್ಟಿದ್ದಾರೆ. ನಾನು ಡಾನ್ಸ್ ಕ್ಲಾಸ್ ನಡೆಸೋದು ಅದರಲ್ಲಿ ಇನ್ನೂರು ಮಕ್ಕಳಿದ್ದಾರೆ. ಈಗಾಗಲೇ ಅಮ್ಮ ಆಗಲು ನೂರಕ್ಕೆ ನೂರು ಟ್ರೈನಿಂಗ್ ಆಗಿದೆ ನನಗೆ. ನಾನು ನೂರಕ್ಕೆ ನೂರು ಅಮ್ಮ ಆಗುತ್ತೇನೆ ಕೂಡ. ಈ ಆಸೆ ನಮ್ಮಿಬ್ಬರಿಗೂ ಇದೆ. ಆದರೆ ಅದಕ್ಕೊಂದು ಸಮಯ ಬರಬೇಕು. ನಮ್ಮಿಬ್ಬರಿಗೆ ಇಷ್ಟವಾಗುವ ಸಮಯ ಬಂದರೆ ಆಗೇ ಆಗುತ್ತದೆ. ಆಗ ಎಲ್ಲರಿಗೂ ಗೊತ್ತಾಗುತ್ತದೆ ಎಂದಿದ್ದಾರೆ.
ನಮಗೆ ಮಗು ಆಗಲ್ಲ. ನಮಗೆ ಮಗು ಬೇಡ ಎನ್ನುವ ಆಲೋಚನೆಯಲ್ಲಾ ನೂರಕ್ಕೆ ನೂರು ಇಲ್ಲ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಜೀವನ ಇರುತ್ತದೆ. ಅವರೇ ಆದ ಪ್ರಾಮುಖ್ಯತೆ ಇರುತ್ತದೆ. ನಾನು ಪ್ರಜ್ವಲ್ ಹೇಗೆ ಇದ್ದೇವೇ ಅಂದರೆ, ನಮ್ಮ ಸ್ನೇಹಿತರ ಗ್ರೂಪ್ ಅಲ್ಲಿರುವವರ ಮಕ್ಕಳು ಮೊದಲು ಬರುವುದು ನಮ್ಮ ಹತ್ತಿರವೇ.
ಆ ಮಕ್ಕಳನ್ನು ಮಲಗಿಸಬೇಕು ಅಂದರೆ, ಊಟ ಮಾಡಿಸಬೇಕು ಅಂದರೆ ಏನೇ ಇರಲಿ ರಾಯನ್, ವೇದ ಎಲ್ಲರೂ ಮೊದಲು ಬರುವುದು ನಮ್ಮ ಹತ್ತಿರನೇ. ನಮಗೆ ಮಕ್ಕಳೆಂದರೆ ತುಂಬಾ ಇಷ್ಟ. ನಾನು ನೂರಕ್ಕೆ ನೂರು ತಂದೆ -ತಾಯಿ ಆಗುತ್ತೇವೆ. ಸ್ವಲ್ಪ ನಮಗೆ ನಮ್ಮದೇ ಆದ ಸಮಯ ಬೇಕಿತ್ತು. ಆದರೆ ಖಂಡಿತಾ ತಂದೆ -ತಾಯಿ ಆಗುತ್ತೇವೆ ಎಂದಿದ್ದಾರೆ.
ಶಾನಬೋಗರ ಮಗಳು ಸಿನಿಮಾದಲ್ಲಿ ಗರ್ಭಿಣಿ ಪಾತ್ರ ಮಾಡಿದ್ದೇನೆ. ಆ ಪಾತ್ರಕ್ಕೆ ಫೀಲ್ ಮನಸ್ಸಿಂದನೇ ಬಂದಿದೆ. ಏನೋ ಮಾಡಬೇಕು ಅಂತಾ ಮಾಡಿಲ್ಲ. ನಮ್ಮ ಅತ್ತೆ ಮಾವ ನನಗೆ ಬೆಂಬಲವಾಗಿದ್ದಾರೆ. ಯಾವಾಗ ಏನೋ ಆಗಬೇಕೋ ಅದು ಆಗುತ್ತದೆ. ಆಗ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.