ನಾನು‌‌ ಬಚ್ಚನ್ ಕುಟುಂಬದ ಹೆಣ್ಣು; ಖಾನ್ ಕುಟುಂಬದವಳಲ್ಲ ಎಂದು ಬಾಲಿವುಡ್ ಗೆ ಬಿಸಿಮುಟ್ಟಿಸಿದ ಐಶ್ವರ್ಯ ರೈ

 | 
Jd
 ಐಶ್ವರ್ಯ ರೈ ಡೈವೋರ್ಸ್ ಸುದ್ದಿ ಎಲ್ಲೆಡೆ ವೈರಲ್ ಆದ ಬೆನ್ನಲ್ಲೇ ಸಲ್ಮಾನ್​ ಖಾನ್​  ಮತ್ತು ಶಾರುಖ್​ ಖಾನ್​ ಜೊತೆಗೆ ನಟಿ ಐಶ್ವರ್ಯ ರೈ ಅವರ ಕುಚ್​ ಕುಚ್​ ಬಾಲಿವುಡ್​ನಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದರಲ್ಲೂ  ಸಲ್ಮಾನ್​ ಖಾನ್​ ಜೊತೆಗಿನ ಲವ್​ ಸ್ಟೋರಿ ಒಂದು ಹಂತ ಮುಂದಕ್ಕೆ ಹೋಗಿತ್ತು.  ಐಶ್ವರ್ಯ ಅವರು, ಅಭಿಷೇಕ್‌ ಬಚ್ಚನ್‌ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ನಲ್ಲಿ ಇದ್ದರು. 
ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು.  90ರ ದಶಕದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ  ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್‌ ಹೆಚ್ಚು ಚರ್ಚೆಯಾಗಿತ್ತು.  ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು. ಇವರಿಬ್ಬರು ಬೇರ್ಪಟ್ಟಿರುವುದದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆಯಾದರೂ, ಐಶ್ವರ್ಯ ತಮಗೆ ಕೈಕೊಟ್ಟಿದ್ದಾರೆ ಎಂದು ಮೊನ್ನೆಮೊನ್ನೆಯವರೆಗೂ ಸಲ್ಮಾನ್​ ಖಾನ್​ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ.
  ಇದೀಗ ಸಲ್ಲು ಭಾಯಿ ಅವಿವಾಹಿತರಾಗಿಯೇ ಉಳಿದಿದ್ದರೆ, ಐಶ್ವರ್ಯ ರೈ, ಬಚ್ಚನ್​ ಕುಟುಂಬದ ಸೊಸೆಯಾಗಿ ಒಬ್ಬಳು ಮುದ್ದಾದ ಮಗಳು ಆರಾಧ್ಯಳ ಅಮ್ಮ ಕೂಡ ಆಗಿದ್ದಾರೆ.ಇನ್ನು ಶಾರುಖ್​ ಜೊತೆಗಿನ ಸಂಬಂಧದ ಕುರಿತು ಹೇಳುವುದಾದರೆ, ಶಾರುಖ್​ ಖಾನ್​  ಮತ್ತು ಐಶ್ವರ್ಯ ರೈ,  'ಜೋಶ್', ’ದೇವದಾಸ್’ ಹಾಗೂ ’ಮೊಹಬ್ಬತೆ’ ನಂತಹ ಬ್ಲಾಕ್​ಬಸ್ಟರ್​ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. 
ಆದರೆ ಇದಾದ ಬಳಿಕ ಇಬ್ಬರೂ ಒಟ್ಟಿಗೆ ಹಲವು ವರ್ಷ ನಟಿಸಿಯೇ ಇಲ್ಲ. ಐದು ಚಿತ್ರಗಳಲ್ಲಿ ಶಾರುಖ್​ ಮತ್ತು ಐಶ್ವರ್ಯ ರೈ ಜೋಡಿಯಾಗಿ ನಟಿಸುವ ಅವಕಾಶವಿದ್ದರೂ, ಈ ಚಿತ್ರಕ್ಕೆ ನಟಿ ಓಕೆ ಎಂದಿದ್ದರೂ ಶಾರುಖ್​ ಮಾತ್ರ ಐಶ್ವರ್ಯರನ್ನು ರಿಜೆಕ್ಟ್​ ಮಾಡಿಬಿಟ್ಟಿದ್ರಂತೆ  ಇದಕ್ಕೆ ಕಾರಣ ಶಾರುಖ್​ ಖಾನ್​ರ ಪ್ರೀತಿಯನ್ನು ಐಶ್ವರ್ಯ ರಿಜೆಕ್ಟ್​ ಮಾಡಿದ್ದರು ಎನ್ನುವ ಕಾರಣ ಎಂದೇ ಹೇಳಲಾಗುತ್ತದೆ. ಈ ಬಗ್ಗೆ ಖುದ್ದು ಶಾರುಖ್​ ಪರೋಕ್ಷವಾಗಿ ಹೇಳಿಕೊಂಡಿದ್ದರು.
  ಮೊದಲ ಸಿನಿಮಾ ಜೋಶ್ ನಲ್ಲಿ ಐಶ್ವರ್ಯಾ ತಂಗಿಯ ಪಾತ್ರ ಮಾಡಿದ್ದರು. ಎರಡನೇ ಸಿನಿಮಾ ದೇವದಾಸ್ ಸಿನಿಮಾದಲ್ಲಿ ಐಶ್ವರ್ಯ ನನ್ನನ್ನು ಬಿಟ್ಟು ಹೋಗುತ್ತಾರೆ ಹಾಗೂ ಮೂರನೇ ಸಿನಿಮಾ ಮೊಹಬ್ಬತೆಂಯಲ್ಲಿ ದೆವ್ವದ ಪಾತ್ರ ಮಾಡಿದ್ದರು. ಆದರೆ ಆಕೆಯೊಂದಿಗೆ ನನಗೆ ಆನ್‌ಸ್ಕ್ರೀನ್‌ನಲ್ಲಿ ರೊಮಾನ್ಸ್​ ಮಾಡುವ ಅವಕಾಶ ಮಾತ್ರ ಸಿಗಲಿಲ್ಲ. ಈ ವಿಚಾರವಾಗಿ ನನಗೆ ಬಹಳ ಬೇಸರ ಇದೆ ಎಂದಿದ್ದರು.
ಈಗ ಇವರಿಬ್ಬರ ಹೆಸರನ್ನೇ ತೆಗೆದುಕೊಂಡರೆ ಸರಿಯಾಗುವುದಿಲ್ಲ ಎಂದು ನಿರ್ದೇಶಕ ಕರಣ್​ ಜೋಹರ್​ ಅವರು ತಮ್ಮ ಚಾಟ್​ ಷೋನಲ್ಲಿ ಐಶ್ವರ್ಯ ಮತ್ತು ಅಭಿಷೇಕ್​ ಒಟ್ಟಿಗೇ ಬಂದಿದ್ದ ಸಂದರ್ಭದಲ್ಲಿ, ಶಾರುಖ್​, ಸಲ್ಮಾನ್​, ಆಮೀರ್​ ಮತ್ತು ಸೈಫ್​ ಈ ನಾಲ್ವರು ಖಾನ್​ಗಳ ಪೈಕಿ ಎಲ್ಲಾ ಸೀಸನ್​ಗೂ ಸಲ್ಲುವ ಖಾನ್​ ಯಾರು ಎಂದು ಕೇಳಿದಾಗ, ಐಶ್ವರ್ಯ ರೈ ಸ್ವಲ್ಪ ಗರಂ ಆದಂತೆ ಕಂಡಿತು. ಆದರೆ ಸಾವರಿಸಿಕೊಂಡು, ನಾನು ಬಚ್ಚನ್​ ಫ್ಯಾಮಿಲಿಯವಳು, ಖಾನ್​ ಫ್ಯಾಮಿಲಿಯವಳ್ಳ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.