ಕಾರ್ತಿಕ್ ಜೊತೆ ಸ್ನೇಹ ಬೆಳೆಸಲು ನಾನು ರೆಡಿ, ಕಾ.ರ್ತಿಕ್ ಟ್ರೋಫಿ ಗೆದ್ದ ಬಳಿಕ ಸಂಗೀತ ಯೂಟರ್ನ್

 | 
Bnj

ಬಿಗ್​ ಬಾಸ್​ ಕನ್ನಡ ಸೀಸನ್​ 10 ಫಿನಾಲೆಯಲ್ಲಿ ಸಂಗೀತಾ ಶೃಂಗೇರಿ ಗೆಲ್ಲಬಹುದು ಎಂದು ಅವರ ಅಭಿಮಾನಿಗಳು ಭಾವಿಸಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಆಗಿದ್ದೇ ಬೇರೆ. ಕಾರ್ತಿಕ್​ ಮಹೇಶ್​ ಹಾಗೂ ಡ್ರೋನ್​ ಪ್ರತಾಪ್​ ಟಾಪ್​ 2 ಸ್ಥಾನ ತಲುಪಿದರು. ಸಂಗೀತಾ 3ನೇ ರನ್ನರ್​ ಅಪ್​ ಆದರು. ಕಾರ್ತಿಕ್​ ಬಿಗ್​ ಬಾಸ್​ ಟ್ರೋಫಿ ಗೆದ್ದರು. ಈ ವಿಚಾರದ ಬಗ್ಗೆ ಸಂಗೀತಾ ಶೃಂಗೇರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್​ ಸೀಸನ್ 10ರಲ್ಲಿ ಸಂಗೀತಾ ಹಾಗೂ ಕಾರ್ತಿಕ್​ ಅಸಮರ್ಥರಾಗಿ ಎಂಟ್ರಿ ಕೊಟ್ರು. ಬಳಿಕ ನಾವು ಸಮರ್ಥರೇ ಎಂದು ಸಾಬೀತು ಪಡಿಸಿಕೊಂಡ್ರು. ಬಳಿಕ ತಮ್ಮ ಆಟದಿಂದಲೇ ಎಲ್ಲರ ಗಮನ ಸೆಳೆದ್ರು. ಬಿಗ್ ಬಾಸ್ ಕಾರ್ಯಕ್ರಮದ ಆರಂಭದಲ್ಲಿ ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್​ ಒಳ್ಳೆ ಸ್ನೇಹಿತರಂತೆ ಇದ್ರು. ಲವ್​ ಬರ್ಡ್ಸ್​​ಗಳಂತೆ ಓಡಾಡಿಕೊಂಡಿದ್ದರು. ಇಬ್ಬರ ಸ್ನೇಹ ದಿನಕಳೆದಂತೆ ದ್ವೇಷವಾಗಿ ಬದಲಾಯ್ತು.

ಬಿಗ್ ಬಾಸ್ ಮುಗಿದು ಟ್ರೋಫಿ ಕಾರ್ತಿಕ್ ಪಾಲಾಯ್ತು. ಜನರು ಈಗಲೂ ಕಾರ್ತಿಕ್​-ಸಂಗೀತಾ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದಾರೆ. ಸಂದರ್ಶನದಲ್ಲೂ ಸಂಗೀತಾ ಮೇಡಂ, ಕಾರ್ತಿಕ್​ ಮೇಲೆ ನಿಮಗೆ ಯಾಕಿಷ್ಟು ಕೋಪ ಅಂತ ಜನ ಕೇಳ್ತಾನೆ ಇದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ಸಂಗೀತಾಗೆ ನಿರೂಪಕರು ನಿಮ್ಮ ಅಹಂಕಾರದಿಂದ ಬಿಗ್ ಬಾಸ್​ ಕಪ್ ಮಿಸ್ ಆಯ್ತು ಎಂದು ಜನ ಮಾತಾಡುತ್ತಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು ಎಂದು ಕೇಳಿದ್ದಾರೆ.

ಇದೇ ವೇಳೆ ಮಾತಾಡಿದ ಸಂಗೀತಾ ಕಪ್​ ಗೆದ್ದವರಿಗೆ ಅಹಂಕಾರ ಇಲ್ವಾ ಎಂದು ಕೇಳಿದ್ರು. ಜನ ಅದನ್ನು ಅಹಂಕಾರ, ಸೆಲ್ಫ್​ ರೆಸ್ಪೆಕ್ಟ್​ ಏನೇ ಅಂದ್ರು ಪರವಾಗಿಲ್ಲ . ಅವರವರ ಅಭಿಪ್ರಾಯ ಅವರಿಗೆ ಎಂದು ಸಂಗೀತಾ ಹೇಳಿದ್ದಾರೆ. ನಾನು ಕಣ್ಣೀರು ಹಾಕಿದಾಗ ಕಾರ್ತಿಕ್ ಸಮಾಧಾನ ಮಾಡಿದ್ದಾರೆ. ಬಳಿಕ ಅವರ ವರ್ತನೆ ನನಗೆ ಇಷ್ಟವಾಗಲಿಲ್ಲ ಎಂದಿದ್ದಾರೆ. ಕಾರ್ತಿಕ್ ಅವರನ್ನು ನಾನು ದ್ವೇಷ ಮಾಡ್ತಿಲ್ಲ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.