ಶೀಘ್ರದಲ್ಲೇ ಮದುವೆಯಾಗಲು ನಾನು ರೆಡಿಯಾಗಿದ್ದೇನೆ ಎಂದ ರಾಹುಲ್ ಗಾಂಧಿ; ಇಡೀ ಊರಿಗೆ ಮಹಾ ಸಂಭ್ರಮ

 | 
U

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಸಿಕೊಳ್ಳುವ ರಾಹುಲ್ ಗಾಂಧಿ ಮದುವೆ ಆಗ್ತಿದ್ದಾರೆ. ಹೌದು ಸದ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣೆ ಪ್ರಚಾರದ ಬ್ಯುಸಿಯಲ್ಲಿದ್ದಾರೆ, ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ರ‍್ಯಾಲಿ ನಡೆಸುತ್ತಿದ್ದಾರೆ. 

ರ‍್ಯಾಲಿಗೆ ಆಗಮಿಸಿದ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ರಾಯ್ಬರೇಲಿಯೊಂದಿಗಿನ ತಮ್ಮ ಕುಟುಂಬದ ದೀರ್ಘಕಾಲದ ಸಂಬಂಧವನ್ನು ನೆನಪಿಸಿಕೊಂಡರು.
ರಾಯಬರೇಲಿ ಮತ್ತು ನನ್ನ ಕುಟುಂಬವು ತುಂಬಾ ಹಳೆಯ ಸಂಬಂಧವನ್ನು ಹೊಂದಿದೆ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು ಅಲ್ಲದೆ ಕ್ಷೇತ್ರದ ಅಭಿವೃದ್ಧಿಯ ವಿಚಾರವಾಗಿ ಜನತೆಗೆ ಭರವಸೆಯನ್ನು ನೀಡಿದ ಅವರು ಅಂತಿಮವಾಗಿ ಕ್ಷೇತ್ರದ ಜನತೆಯಲ್ಲಿ ಆಶೀರ್ವಾದ ಪಡೆದು ಮುಂದುವರೆಯುವ ವೇಳೆ ಸಭೆಯ ಮಧ್ಯೆ ವ್ಯಕ್ತಿಯೊಬ್ಬರು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ರಾಹುಲ್ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇನೆ ಎಂದು ಹೇಳಿ ಸಭೆಯಲ್ಲಿದ್ದ ಜನರಿಗೆ ಕೈ ಬೀಸುತ್ತಾ ಮುನ್ನಡೆದರು.ಹೌದು.. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಸೋಮವಾರ ನಡೆದ ರ್ಯಾಲಿಯಲ್ಲಿ ರಾಹುಲ್ ಅವರ ಭಾಷಣ ಮುಗಿದಾಗ ನೆರೆದಿದ್ದವರು ಜೋರಾಗಿ ಪ್ರಶ್ನೆಗಳನ್ನು ಕೇಳತೊಡಗಿದರು.

ಆಗ ಜನರ ಪ್ರಶ್ನೆಗಳಿಗೆ ಮುಗುಳ್ನಗುತ್ತಾ ಉತ್ತರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ನಾನು ಆದಷ್ಟು ಬೇಗ ಮದುವೆಯಾಗಬೇಕು’ ಎಂದು ಹೇಳಿದರು. ಸಾಮಾನ್ಯವಾಗಿ, ಮದುವೆಯಾಗಲ್ಲ, ಆ ಬಗ್ಗೆ ಯೋಚಿಸಿಲ್ಲ ಮುಂತಾದ ಉತ್ತರಗಳನ್ನು ರಾಹುಲ್ ಗಾಂಧಿಯಿಂದ ಜನರು ನಿರೀಕ್ಷಿಸಿದ್ದರು. 

ಆದರೆ ಇದೇ ಮೊದಲ ಬಾರಿ ಶೀಘ್ರದಲ್ಲೇ ಮದುವೆಯಾಗ್ಬೇಕು ಎಂಬ ರಾಗಾ ಉತ್ತರ ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಂತೂ ಸತ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್. Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.