ವೈಷ್ಣವಿ ನನಗೆ ಸಿಗಲಿಲ್ಲ‌ ಎಂದು ಕಣ್ಣೀರು ‌ಹಾಕಿದ ಮೊದಲು Engagement ಮಾಡಿಸಿಕೊಂಡಿದ್ದ ಯುವಕ

 | 
Nd
ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ತುಂಬಾ ಅದ್ಧೂರಿಯಾಗಿ ನೆರವೇರಿದೆ. ಇದೀಗ ಮದುವೆ ದಿನಾಂಕವನ್ನು ನಿಗಧಿ ಮಾಡಲು ಅವರ ಕುಟುಂಬ ಚಿಂತನೆ ನಡೆಸಿದೆ. ಮದುವೆ ಇನ್ನಷ್ಟು ಅದ್ಧೂರಿಯಾಗಿರಲಿದೆ ಎಂದು ವೈಷ್ಣವಿ ಗೌಡ ಹಾಗೂ ಅವರ ತಾಯಿ ಭಾನು ರವಿಕುಮಾರ್ ಹೇಳಿಕೊಂಡಿದ್ದಾರೆ. ಸಂಗೀತಾ, ನೃತ್ಯ, ರುಚಿ ರುಚಿಯಾದ ಅಡುಗೆ, ಫನ್ ಎಲ್ಲವೂ ಇರಲಿದೆಯಂತೆ. ಇದೆಲ್ಲದರ ನಡುವೆ ವೈಷ್ಣವಿ ಗೌಡ ಮೊದಲು ಹುಡುಗ ಪ್ರತ್ಯಕ್ಷ ಆಗಿದ್ದಾರೆ.
ಸೀತಾರಾಮ ಧಾರಾವಾಹಿಯ ನಟಿ ವೈಷ್ಣವಿ ಗೌಡ ಕಳೆದ ವಾರ ಎಂಗೇಂಜ್‌ಮೆಂಟ್ ಮಾಡಿಕೊಂಡರು. ಅವರ ಭಾವಿ ಪತಿ ಅನುಕೂಲ್ ಮಿಶ್ರಾ ಇಂಡಿಯನ್ ಏರ್‌ಫೋರ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವೈಷ್ಣವಿ ಅತ್ತೆ ಕೂಡ ಸರ್ಕಾರಿ ಕೆಲಸದಲ್ಲಿ ಇರುವುದರಿಂದ ಮದುವೆ ತುಂಬಾ ಗ್ರ್ಯಾಂಡ್ ಆಗಿ ಮಾಡಲು ತಯಾರಿ ನಡೆಸಿದ್ದಾರೆ. ಇನ್ನೂ ವೈಷ್ಣವಿ ತಂದೆ ತಾಯಿಯ ಕನಸು ಕೂಡ ಇದೇ ಆಗಿದೆ. ಹೀಗಾಗಿ ಐದರಿಂದ ಆರು ದಿನಗಳ ಕಾಲ ಮದುವೆ ನೆರವೇರಬಹುದು ಅನ್ನೋದನ್ನ ನಿರೀಕ್ಷಿಸಲಾಗಿದೆ. ಇದೆಲ್ಲದರ ಬೆನ್ನಲ್ಲೆ ಈಗ ದಿಢೀರ್ ಅಂತ ವೈಷ್ಣವಿ ಅವರನ್ನು ಮೊದಲು ಮೆಚ್ಚಿಕೊಂಡಿದ್ದ ಹುಡುಗ ವಿದ್ಯಾಭರಣ್ ಪ್ರತ್ಯಕ್ಷ ಆಗಿದ್ದಾನೆ.
ಯಾವಾಗಲೂ ಪ್ರೀತಿ ಅಂತ ಬಂದಾಗ ಹುಡುಗಿಯರಿಗೆ ಹುಡುಗರಿಂದ ಮೋಸ ಆಯ್ತು ಅನ್ನೋ ಕಾಲ ಇತ್ತು. ಆದರೀಗ ಹುಡುಗಿಯರಿಂದ ಹುಡುಗರಿಗೆ ಮೋಸ ಆಯ್ತು ಅನ್ನೋ ಕಾಲ ಶುರುವಾಗಿದೆ. ಹುಡುಗಿಯರು ಮದುವೆ ಆಗಿ ಹೋಗುತ್ತಾರೆ. ಆದರೆ ಹುಡುಗರು ಪ್ರೀತಿಯನ್ನು ನೆನಪಿಸಿಕೊಂಡು ನೋವಿನಲ್ಲಿ ಕಾಲ ಕಳೆಯುತ್ತಾರೆ. ಹುಡುಗಿಯರು ಒಂದು ಸಂಬಂಧವನ್ನು ತುಂಬಾ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಹುಡುಗರು ಅಷ್ಟೊಂದು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಮರೆಯುವುದಿಲ್ಲ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ವಿದ್ಯಾಭರಣ್ ವೈಷ್ಣವಿ ಗೌಡ ಅವರೊಂದಿಗೆ ಮೊದಲು ನಿಶ್ಚಿತಾರ್ಥ ಮಾಡಿಕೊಂಡ ಹುಡುಗ. ಇದು ಪಕ್ಕಾ ಅರೆಂಜ್ ಮ್ಯಾರೇಜ್ ಎಂದು ಹೇಳಿದರೂ ಕೂಡ ವೈಷ್ಣವಿ ಅವರಿಗೆ ಶೂಟಿಂಗ್ ಸೆಟ್‌ನಲ್ಲಿ ವಿದ್ಯಾಭರಣ್ ಪರಿಚಯ ಆಗಿತ್ತು ಅಂತಲೂ ಕೆಲವರು ಹೇಳುತ್ತಾರೆ. ಆದರೆ ವಿದ್ಯಾಭರಣ್ ಹೇಳುವಂತೆ, ವೈಷ್ಣವಿ ಅವರು ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ನಮ್ಮ ಕುಟುಂಬಸ್ಥರು ವೈಷ್ಣವಿ ಕುಟುಂಬಸ್ಥರೊಂದಿಗೆ ಮಾತನಾಡಿ ಜಾತಕ ತೆಗೆದುಕೊಂಡರು. ಮೊದಲು ನಮ್ಮ ಕುಟುಂಬದವರು ವೈಷ್ಣವಿ ಅವರನ್ನು ಕೇಳಿದರು ಎಂದು ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub