ಕೊಳಕು ಕಾಮೆಂಟ್ ಮಾಡುವವರನ್ನು ನಾನು ಕಣ್ಣೆತ್ತಿಯೂ ನೋಡಲ್ಲ, ನಿವೇದಿತಾ ಗೌಡ ಓಪನ್ ಟಾಕ್
Nov 3, 2024, 15:04 IST
|
ನಿವೇದಿತಾ ಗೌಡ ತನ್ನ ವೈಯುಕ್ತಿಕ ಬದುಕಿನ ಕಾರಣಕ್ಕೆ ಸದಾ ಸುದ್ದಿಯಲ್ಲಿದ್ದವರು. ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟಿದ್ದೇ ನಿವೇದಿತಾ ಗೌಡ ಅನ್ನೋ ಬಾರ್ಬಿ ಡಾಲ್‌ನಂಥಾ ಹುಡುಗಿಯ ಲೈಫೇ ಚೇಂಜ್ ಆಗಿ ಹೋಯ್ತು. ಈ ಹುಡುಗಿ ಬಿಗ್‌ಬಾಸ್‌ಗೆ ಬಂದಾಗ ಈಕೆಯ ಮುಗ್ಧತೆ ನೋಡಿ ಸುದೀಪ್ ಸಣ್ಣ ಭಯದಲ್ಲಿ ಹೇಳಿದ್ರು, 'ನೀವಿಲ್ಲಿ ಹೇಗೆ ಸರ್ವೈವ್ ಆಗ್ತಿರೋ ಅನ್ನೋ ಬಗ್ಗೆ ನಂಗೇ ಭಯ ಇದೆ' ಅನ್ನೋ ರೀತಿ ಮಾತನಾಡಿದ್ರು.
ನಿವೇದಿತಾ ಗೌಡ ಬಿಗ್‌ಬಾಸ್‌ನಂಥಾ ಬಿಗ್‌ಬಾಸ್ ಮನೆಯಲ್ಲೂ ಹೆಚ್ಚಿನ ಸಮಸ್ಯೆಯಾಗದ ಹಾಗೆ ಇದ್ದು ಬಂದರು. ಆದರೆ ಯಾವಾಗ ಆಕೆಯ ಪರ್ಸನಲ್ ಲೈಫ್ ಪಬ್ಲಿಕ್‌ಗೆ ತೆರೆದುಕೊಂಡಿತೋ ಕೊಳಕು ಮನಸ್ಥಿತಿಯ ಕೆಲವೊಂದು ಮಂದಿ ಈಕೆಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಲು ಶುರು ಮಾಡಿದರು. ಆಕೆಯ ಮಾಡರ್ನ್ ಡ್ರೆಸ್‌ಗೆ ಎಷ್ಟೋ ಹೆಂಗಸರೂ ಸೂಕ್ಷ್ಮವೇ ಇಲ್ಲದೆ ಕಾಮೆಂಟ್ ಮಾಡ್ತಾ ಹೋದ್ರು. ಇವತ್ತಿಗೂ ಅದೇ ನಡೀತಿದೆ.
ಆಕೆ ಒಂದು ಪೋಸ್ಟ್ ಹಾಕಿದರೆ ಸಾಕು, ಹಸಿದ ತೋಳಗಳ ಹಾಗೆ ಬರುವ ಕೆಲವು ಹೆಸರು ಬದಲಿಸಿಕೊಂಡ ನೆಟ್ಟಿಗರು ಆಕೆಯ ಅಂಗಾಗದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಲು ಶುರು ಮಾಡ್ತಾರೆ. ಇವರಿಗೆ ಸಪೋರ್ಟ್ ಮಾಡುವವರೂ ಬಹಳ ಮಂದಿ ಇದ್ದಾರೆ. ಎಲ್ಲರ ಟಾರ್ಗೆಟ್ ನಿವೇದಿತಾ ಪರ್ಸನಲ್ ಲೈಫ್.ಇಂಥವರಿಗೆ ಉತ್ತರ ಕೊಡುವ ಕೆಲಸವನ್ನು ನಿವೇದಿತಾ ಮಾಡಿರಲಿಲ್ಲ. ಆದರೆ ಆಕೆಯ ಬಗ್ಗೆ ಬರುತ್ತಿದ್ದ ಕಾಮೆಂಟ್‌ಗೆ ಆಕೆಯ ಮಾಜಿ ಪತಿ ಚಂದನ್ ಶೆಟ್ಟಿಯೇ ನೊಂದುಕೊಂಡು ಮಾತನಾಡಿದ್ದರು.
ಜನರ ಮನಸ್ಥಿತಿ ಇಷ್ಟೊಂದು ಗಲೀಜಾ? ಹೆಣ್ಣುಮಕ್ಕಳ ಅಂಗಗಳ ಬಗ್ಗೆ ಮಾತನಾಡುವವರು ತಮ್ಮನೆ ಹೆಣ್ಣುಮಕ್ಕಳಿಗೆ ಯಾರಾದರೂ ಹೀಗೆ ಹೇಳಿದರೂ ಅದನ್ನು ಸ್ವೀಕರಿಸುತ್ತಾ ಎಂದು ನೋವಿಂದ ನುಡಿದರು. ಇದಕ್ಕೆ ಆಕೆ ತುಂಡು ಬಟ್ಟೆ ಹಾಕ್ತಾರೆ ಅನ್ನೋ ಮಾತನ್ನು ಕೆಲವರು ಹೇಳಬಹುದು.
ಆದರೆ ಜಗತ್ತಿನ ಹೆಸರಾಂತ ನಟಿ ಕಿಮ್ ಕಾರ್ಡಿಶಿಯಾನ್‌ರಿಂದ ಹಿಡಿದು ಇತ್ತೀಚೆಗೆ ಇಂಡಸ್ಟ್ರಿಗೆ ಅಡಿಇಟ್ಟವರವರೆಗೆ ಎಲ್ಲರೂ ಮಾಡರ್ನ್ ಡ್ರೆಸ್ ತೊಡುತ್ತಾರೆ. ಅವರ ವೃತ್ತಿಗೆ ಅದು ಸಹಜ. ಇದನ್ನು ನೋಡಲು ಇಷ್ಟವಾಗದಿದ್ದರೆ ಅವರ ವಾಲ್ ಅನ್ನು ಅನ್ ಫಾಲೋ ಮಾಡಿದ್ರೆ ಕಥೆ ಮುಗೀತು. ಅದು ಬಿಟ್ಟು ತಮ್ಮ ಮನಸ್ಸಿನ ಹೊಲಸನ್ನೆಲ್ಲ ಅಲ್ಲಿ ತಂದು ಸುರಿಯೋ ಅವಶ್ಯಕತೆ ಇಲ್ಲವಲ್ಲ ಅಂತ ಪ್ರಜ್ಞಾವಂತರು ಹೇಳ್ತಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.