ಸುದೀಪ್ ಮಾತಿಗೆ ಕೆರಳಿ ಕೆಂಡವಾದ ಡಿಕೆಶಿ, ಅವನಿಗೆ ಉತ್ತರ ಕೊಡುವ ಅವಶ್ಯಕತೆ ನನಿಗಿಲ್ಲ ಎಂದ ಡಿಸಿಎಮ್

 | 
Js
ಡಿಸಿಎಂ ಡಿಕೆ ಶಿವಕುಮಾರ್ ಕೆಲ ತಿಂಗಳ ಹಿಂದೆ ನೀಡಿದ್ದ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಹೇಳಿಕೆ ಬಗ್ಗೆ ಯಾರೊಬ್ಬರೂ ಪ್ರತಿಕ್ರಿಯಿಸಲು ಹೋಗಿರಲಿಲ್ಲ. ಈಗ ಸುದೀಪ್ ಅವರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಡಿಕೆಶಿ ಅವರು ಆ ರೀತಿಯಲ್ಲಿ ಹೇಳಿಕೆ ನೀಡಬಾರದಿತ್ತು ಎಂದು ನೇರವಾಗಿ ಹೇಳಿದ್ದಾರೆ. ಸುದೀಪ್ ಹೇಳಿಕೆಗೆ ಡಿಕೆಶಿ ಕೂಡ ಪ್ರತಿಕ್ರಿಯಿಸಿದ್ದು, ಕಾಲವೇ ಉತ್ತರ ಕೊಡುತ್ತೆ ಎಂದಿದ್ದಾರೆ.
ಬೆಂಗಳೂರು ಸಿನಿಮೋತ್ಸವ ಉದ್ಘಾಟನೆ ವೇಳೆ ಯಾವುದೇ ದೊಡ್ಡ ಸಿನಿಮಾ ಸೆಲೆಬ್ರಿಟಿಗಳು ಹಾಜರಿ ಹಾಕಿರಲಿಲ್ಲ. ಇದಕ್ಕೆ ಬೇಸರ ಮಾಡಿಕೊಂಡಿದ್ದ ಡಿಕೆಶಿ, ವಾರ್ನಿಂಗ್​ ಅಂತಾದ್ರೂ ಅಂದ್ಕೊಳ್ಳಿ, ಕೋರಿಕೆ ಅಂತಾದ್ರೂ ಅಂದ್ಕೊಳ್ಳಿ, ಚಿತ್ರರಂಗದವರ ನಟ್ಟು ಬೋಲ್ಟ್ ಹೇಗೆ ಟೈಟ್ ಮಾಡಬೇಕು ಅಂತ ಗೊತ್ತು ಎಂದಿದ್ದರು. ಈ ಹೇಳಿಕೆ ಚರ್ಚೆ ಹುಟ್ಟುಹಾಕಿತ್ತು. ಡಿಕೆಶಿ ಚಿತ್ರರಂಗದವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನೇಕರು ಭಾವಿಸಿದರು.
ಇತ್ತೀಚೆಗೆ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್​ಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಅವರು ತಮ್ಮದೇ ಸ್ಟೈಲ್​ನಲ್ಲಿ ಇದಕ್ಕೆ ಉತ್ತರಿಸಿದ್ದಾರೆ. ನಾವು ಓಡಾಡೋ ಕಾರುಗಳ ನಟ್ಟು-ಬೋಲ್ಟ್ ಕೂಡ ಟೈಟ್ ಇರಬೇಕು. ಅದನ್ನು ಮಾಡೋಕೆ ನಾನು ಹೋದರೆ ಸರಿ ಇರೋದಿಲ್ಲ. ಮೆಕ್ಯಾನಿಕ್ ಬಳಿಯೇ ಹೋಗಬೇಕು. ಕಾರಿನ ವಿಚಾರ ಅವರಿಗೆ ಮಾತ್ರ ಗೊತ್ತಿರುತ್ತದೆ. ಚಿತ್ರರಂಗದ ವಿಚಾರ ಚಿತ್ರರಂಗದವರಿಗೆ ಮಾತ್ರ ಗೊತ್ತು. ಅವರ ಬಗ್ಗೆ ಗೌರವ ಇದೆ. ಕೆಲವು ಸತ್ಯವನ್ನು ತಿಳಿದುಕೊಂಡು ಮಾತನಾಡಬೇಕು ಎಂದು ಸುದೀಪ್ ಹೇಳಿದ್ದರು.
ಮಾಧ್ಯಮಗಳ ಎದುರು ಡಿಕೆಶಿ ಅವರಿಗೆ ಸುದೀಪ್ ಪ್ರತಿಕ್ರಿಯೆ ಬಗ್ಗೆ ಪ್ರಶ್ನೆ ಮಾಡಲಾಗಿದೆ. ನನಗೆ ಯಾರಿಗೂ ಉತ್ತರ ಕೊಡೋಕೆ ಇಷ್ಟ ಇಲ್ಲ. ಫಿಲ್ಮ್ ಚೇಂಬರ್​ಗೆ ಹೋಗಿ ನಾನು ಏನು ಮಾಡಿದ್ದೇನೆ ಎಂಬುದರ ಹಿಸ್ಟರಿ ತೆಗೆದುಕೊಂಡು ಬರಲಿ. ಅವರೆಲ್ಲರಿಗೂ ಉತ್ತರಿಸಬೇಕಿಲ್ಲ. ಕಾಲ ಉತ್ತರ ಕೊಡುತ್ತದೆ ಎಂದಿದ್ದಾರೆ ಅವರು.ನಾವು ಪ್ರತಿ ಕ್ಯಾಂಪೇನ್‌ಗೆ ಅಲ್ಲಿರುತ್ತೇವೆ. ಡಿಕೆ ಶಿವಕುಮಾರ್‌ ಅವರು ಆ ಸಂದರ್ಭದಲ್ಲಿ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ರೋ ಗೊತ್ತಿಲ್ಲ. ನನಗೆ ಅವರ ಮೇಲೆ ಬಹಳ ಗೌರವ ಇದೆ. ಆದರೆ ಅವರು ಆ ಹೇಳಿಕೆ ನೀಡುವ ಮುನ್ನ ಕೆಲವು ಸತ್ಯಗಳನ್ನ ಅರ್ಥ ಮಾಡಿಕೊಳ್ಳಬೇಕಿತ್ತು. ವಿಚಾರ ತಿಳಿದು ಮಾತನಾಡಿದ್ದರೆ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತಿತ್ತೇ ಹೊರತು, ಚಿತ್ರರಂಗದವರಿಗೆ ಮನಸ್ಸಿಗೆ ನೋವಾಗುತ್ತಿರಲಿಲ್ಲ ಎಂದಿದ್ದಾರೆ.