ಬಿಗ್ ಬಾಸ್ ಗೆ ನನ್ನ ಕರೆದಿಲ್ಲ; ನಡು ರಸ್ತೆಯಲ್ಲಿ ಗಿಚ್ಚಿಗಿಲಿಗಿಲಿ ಸುಶ್ಮಿತಾ ರಂಪಾಟ
Sep 27, 2024, 07:50 IST
|
ನಟ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11'ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಯಾರೆಲ್ಲಾ 'ಬಿಗ್ ಬಾಸ್' ಮನೆಗೆ ಹೋಗಬಹುದು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಒಂದಷ್ಟು ಹೆಸರುಗಳನ್ನು ತೇಲಿಬಿಡಲಾಗಿದೆ. ಈ ಮಧ್ಯೆ 'ಮಜಾಭಾರತ', 'ಗಿಚ್ಚಿ ಗಿಲಿ ಗಿಲಿ' ಮುಂತಾದ ಶೋಗಳ ಮೂಲಕ ಫೇಮಸ್ ಆಗಿರುವ ಸುಶ್ಮಿತಾ ಮತ್ತು ಜಗಪ್ಪ ದಂಪತಿ ಕೂಡ 'ಬಿಗ್ ಬಾಸ್' ಶೋಗೆ ಕಾಲಿಡಲಿದ್ದಾರೆ ಎಂಬ ಟಾಕ್ ಜೋರಾಗಿ ಕೇಳಿಬಂದಿದೆ. ಹಾಗಾದರೆ, ಇದು ಎಷ್ಟು ನಿಜ? ಅವರಿಬ್ಬರು ಶೋಗೆ ಹೋಗ್ತಾರಾ
ಈ ಬಾರಿ 'ಬಿಗ್ ಬಾಸ್' ಶೋಗೆ ಸ್ಪರ್ಧಿಯಾಗಿ ಸುಶ್ಮಿತಾ ಹೋಗ್ತಾರೋ ಇಲ್ಲವೋ ಎಂಬ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ಹಂಚಿಕೊಂಡಿರುವ ಸುಶ್ಮಿತಾ, ಬಿಗ್ ಬಾಸ್‌ನಿಂದ ಯಾವುದೇ ಬಂದಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಅವರ ಪತಿ ಜಗಪ್ಪ ಕೂಡ ಬಿಗ್ ಬಾಸ್' ಶೋಗೆ ಹೋಗಲ್ಲ ಎಂಬುದನ್ನು ಸುಶ್ಮಿತಾ ತಿಳಿಸಿದ್ದಾರೆ.
ನಾನು ಬಿಗ್ ಬಾಸ್‌ಗೆ ಹೋಗುತ್ತಿಲ್ಲ. ಕಲರ್ಸ್ ಕನ್ನಡದಲ್ಲಿ ಪರಮೇಶ್ವರ್ ಗುಂಡ್ಕಲ್ ಸರ್ ಇದ್ದಾಗ ಜಗಪ್ಪಗೆ ಅನೇಕ ಬಾರಿ ಅವಕಾಶ ಬಂದಿತ್ತು. ಆದರೆ ಆಗ ಜಗಪ್ಪಗೆ ಹೋಗೋಕೆ ಆಗಿರಲಿಲ್ಲ. ಈ ಸಲ ನನಗಂತೂ ಯಾವುದೇ ಕಾಲ್ ಬಂದಿಲ್ಲ. ನಾನಂತೂ ಬಿಗ್ ಬಾಸ್‌ಗೆ ಹೋಗುತ್ತಿಲ್ಲ, ಜಗಪ್ಪ ಕೂಡ ಹೋಗುತ್ತಿಲ್ಲ. ಬಿಗ್ ಬಾಸ್‌ನಿಂದ ಅಫರ್ ಬಂದರೆ ಯೋಚನೆ ಮಾಡಬಹುದು" ಎಂದು ಸುಶ್ಮಿತಾ ಸ್ಪಷ್ಟನೆ ನೀಡಿದ್ದಾರೆ.
ಬಿಗ್ ಬಾಸ್ ಶೋಗೆ ನನ್ನಂತಹ ಕಲಾವಿದರು ಹೋದಾಗ ನನಗೆ ತುಂಬ ಖುಷಿ ಆಗುತ್ತದೆ. 'ಗಿಚ್ಚಿ ಗಿಲಿ ಗಿಲಿ' ಶೋನಿಂದ ಒಂದಷ್ಟು ಮಂದಿ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ 'ಗಿಚ್ಚಿ ಗಿಲಿ ಗಿಲಿ' ಶೋನಿಂದ ನಮ್ಮ ಹುಡುಗರು ಹೋಗಬೇಕು ಎಂಬ ಆಸೆ ನನಗೂ ಇದೆ. ಆ ಶೋನಿಂದ ಯಾರೇ ಬಿಗ್ ಬಾಸ್ ಶೋಗೆ ಹೋದರೂ ನಮಗೆ ಖುಷಿನೇ. ಯಾವುದೇ ಹೊಟ್ಟೆಕಿಚ್ಚು ಇಲ್ಲ ಎಂದು ಸುಶ್ಮಿತಾ ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.