'ನಾನು ತಪ್ಪು ಮಾಡಿಲ್ಲ ನನ್ನ ಬಿಟ್ಟು ಬಿಡಿ ಎಂದು ಮಾಧ್ಯಮದ ಮುಂದೆ ಕಣ್ಣೀ ರಿಟ್ಟ ಚಿಕ್ಕಣ್ಣ;

 | 
U

ದರ್ಶನ್ ಕೊಲೆ ಆರೋಪದಲ್ಲಿ ಅರೆಸ್ಟ್ ಆದ ನಂತರ ಆತನ ಸ್ನೇಹಿತರು & ಅಭಿಮಾನಿಗಳು ಕೂಡ ಒಬ್ಬೊಬ್ಬರಾಗಿ ಪೊಲೀಸ್ ಠಾಣೆಗೆ ಬರುವಂತಾಗಿದೆ. ಅದರಲ್ಲೂ ಕೊಲೆ ನಡೆಯುವ ದಿನ ದರ್ಶನ್ ಜೊತೆಗೆ ನಟ ಚಿಕ್ಕಣ್ಣ ಕೂಡ ಇದ್ದರು ಅನ್ನೋ ಆರೋಪ ಕೇಳಿಬಂದಿದ್ದು, ಇದೀಗ ಪೊಲೀಸರು ಚಿಕ್ಕಣ್ಣಗೆ ವಿಚಾರಣೆಗೆ ಬಾ ಎಂದು ನೋಟಿಸ್ ನೀಡಿದ್ದಾರಂತೆ.

ನಟ ಚಿಕ್ಕಣ್ಣ & ದರ್ಶನ್ ನಡುವೆ ಬಿಗಿಯಾದ ಸ್ನೇಹ ಇದ್ದು, ಇಬ್ಬರೂ ಆತ್ಮೀಯರಾಗಿ ಇದ್ದಾರೆ. ಅದರಲ್ಲೂ ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಸಿನಿಮಾ ವೇಳೆ ಚಿಕ್ಕಣ್ಣ ಬೆನ್ನಿಗೆ ನಿಂತಿದ್ದವರಲ್ಲಿ ದರ್ಶನ್ ಮೊದಲಿಗರು. ಇದು ಒಂದು ಕಡೆಯಾದರೆ, ಇದೀಗ ದರ್ಶನ್ ವಿರುದ್ಧ ಕೇಳಿಬಂದಿರುವ ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ಚಿಕ್ಕಣ್ಣ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

https://www.youtube.com/live/NvGBSla9GyE?si=PBMnzUAs3S4n7jkj

 ಅದ್ರಲ್ಲೂ ಕೊಲೆ ನಡೆಯುವ ಕೆಲವೇ ಗಂಟೆಗಳ ಹಿಂದೆ ನಟ ಚಿಕ್ಕಣ್ಣ ಕೂಡ ದರ್ಶನ್ & ಗ್ಯಾಂಗ್ ಜೊತೆಗೆ ಪಾರ್ಟಿ ಮಾಡಿದ್ದರಂತೆ, ಹಾಗಾಗಿಯೇ ನಟ ಚಿಕ್ಕಣ್ಣನಿಗೂ ಸಂಕಟ ಎದುರಾಗಿದ್ದು.ದರ್ಶನ್ ಸಹವಾಸ ಮಾಡಿದ್ದಕ್ಕೆ ನೂರಾರು ಜನ ಸಮಸ್ಯೆಗೆ ಸಿಲುಕಿದ್ದಾರೆ, ಅದರಲ್ಲೂ ಈಗ ತಾನೆ ಹೀರೋ ಆಗಿ ಜೀವನ ಕಟ್ಟಿಕೊಳ್ಳುತ್ತಿದ್ದ ನಟ ಚಿಕ್ಕಣ್ಣ ಕೂಡ ಮಾಜಿ ಡಿ-ಬಾಸ್ ಸಹವಾಸದಿಂದ ಪೊಲೀಸ್ ಠಾಣೆಗೆ ಹೋಗುವಂತಾಗಿದೆ.

 ಇಲ್ಲಿ ಆಗಿದ್ದು ಏನು ಅಂದ್ರೆ, ಜೂನ್‌ 8 ರಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ & ಕೊಲೆ ನಡೆಸುವ ಮೊದಲು ದರ್ಶನ್‌ & ಗ್ಯಾಂಗ್ ಆರೋಪಿ ವಿನಯ್‌ಗೆ ಸೇರಿದ ಸ್ಟೋನಿ ಬ್ರೂಕ್ ಎಂಬ ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದರಂತೆ. ಇದೇ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗವಹಿಸಿದ್ರು ಎನ್ನಲಾಗಿದೆ. ಹೀಗಾಗಿ ಪೊಲೀಸರು ತನಿಖೆಯನ್ನ ನಡೆಸಿ ಈ ವಿಚಾರ ಕನ್ಫರ್ಮ್ ಮಾಡಿಕೊಂಡಿದ್ದು, ಇದೀಗ ನಟ ಚಿಕ್ಕಣ್ಣಗೆ ವಿಚಾರಣೆ ಬಾ ಎಂದು ನೋಟಿಸ್ ಕೂಡ ನೀಡಿದ್ದಾರೆ.

ಇನ್ನು ಈ ಕೊಲೆ ಪ್ರಕರಣದಲ್ಲಿ ಪೊಲೀಸರು ಚಿಕ್ಕಣ್ಣ ಅವರನ್ನು ಸಾಕ್ಷಿದಾರನಾಗಿ ಪರಿಗಣಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಸುಮಾರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು, ರೆಸ್ಟೋರೆಂಟ್‌ನಲ್ಲಿ ಅಂದು ನಡೆದ ಬೆಳವಣಿಗೆಗಳ ಚಿಕ್ಕಣ್ಣ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ವಿಚಾರಣೆಗೆ ಕರೆದಾಗ ಬರುವಂತೆ ಸೂಚಿಸಿ, ಅವರನ್ನು ಕಳುಹಿಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.