'ನಾನು ಗರ್ಭಿಣಿ ಎಂದು ಡಾಕ್ಟರ್ ಹೇಳಿದ ಬಳಿಕ ರಾತ್ರಿ ಎಲ್ಲ ನಿದ್ದೆ ಮಾಡಿಲ್ಲ; ಅಲಿಯಾ ಭಟ್

 | 
Y

ಬಾಲಿವುಡ್ ಸುಂದರಿ ಅಲಿಯಾ ಭಟ್ ಅದ್ಭುತ ನಟಿ ಮಾತ್ರವಲ್ಲದೆ, ಮಗಳು ರಾಹಾಗೆ ಪ್ರೀತಿಯ ತಾಯಿ ಆಗಿದ್ದಾರೆ. ನಟಿ ಆಲಿಯಾ ಭಟ್ ತನ್ನ ಮಗಳು ರಾಹಾವನ್ನು ಬೆಳೆಸಲು ತನ್ನ ತಂದೆ ಮಹೇಶ್ ಭಟ್ ನೀಡಿದ ಸಲಹೆ ಬಗ್ಗೆ ಮಾತಾಡಿದ್ದಾರೆ. ತಾಯಿಯಾದ ಬಳಿಕ ನಟಿ ಆಲಿಯಾ ಭಟ್ ತಾಯ್ತನದ ಬಗ್ಗೆ ಅನೇಕ ಬಾರಿ ಮಾತಾಡಿದ್ದಾರೆ. 

ಇತ್ತೀಚೆಗೆ ನಟಿ ರಾಹಾವನ್ನು ಬೆಳೆಸಲು ತನ್ನ ತಂದೆ ಮಹೇಶ್ ಭಟ್ ನೀಡಿದ ಸಲಹೆ ಬಗ್ಗೆ ಹೇಳಿದ್ರು. ನೋಡ್ ಮ್ಯಾಗಜೀನ್ ಸಂದರ್ಶನದಲ್ಲಿ ಮಾತಾಡಿದ ನಟಿ ಆಲಿಯಾ, ತಾನು ಗರ್ಭಿಣಿ ಎನ್ನುವ ವಿಚಾರ ತಿಳಿದು ಶಾಕ್ ಆಗಿದ್ದೆ ಎಂದು ಹೇಳಿದ್ದಾರೆ. ನಾನು ಚಿಕ್ಕ ವಯಸ್ಸಿಗೆ ಮನೆಯಿಂದ ಹೊರಬಂದೆ ಆದ್ರೆ ರಾಹಾಗೆ ಈ ರೀತಿ ಆಗಲು ಬಿಡುವುದಿಲ್ಲ ಎಂದು ನಟಿ ಆಲಿಯಾ ಭಟ್ ಹೇಳಿದ್ರು. 

ನಾನು ಮನೆ ಬಿಟ್ಟಾಗ ನನಗೆ ಕೇವಲ 23 ವರ್ಷ. ನಾನು ದೀರ್ಘಕಾಲದವರೆಗೆ ಶೂಟಿಂಗ್ ಶೆಡ್ಯೂಲ್ ಗಳಲ್ಲಿ ಹೊರಗಿದ್ದೆ ಮತ್ತು ಕೆಲವೊಮ್ಮೆ ನಾನು ಯಾವ ಊರಿನಲ್ಲಿದ್ದೇನೆ ಎಂದು ಮನೆಯವರಿಗೆ ತಿಳಿದಿರಲಿಲ್ಲ.ನಟಿ ತನ್ನ ತಾಯಿ ಸೋನಿ ರಜ್ಧಾನ್ ಬಗ್ಗೆ ಮಾತನಾಡುತ್ತಾ, ಈಗ ನಾನು ಹಿಂತಿರುಗಿ ನೋಡಿದಾಗ, ನನಗೆ ಅನಿಸುತ್ತದೆ, ನೀವು ನನಗೆ ಇಷ್ಟು ಬೇಗ ಇದನ್ನು ಸ್ವತಂತ್ರ ಕೊಟ್ಟಿಬಿಟ್ಟರಿ ಎಂದು.

ಏಕೆಂದರೆ ಇದು ನನ್ನ ಜೀವನವನ್ನು ನಾನೇ ಮುನ್ನಡೆಸಲು ನನಗೆ ಸಹಕಾರಿಯಾಯ್ತು. ಆದ್ರೆ ನಾನು ಬೇಗನೆ ಮನೆಯಿಂದ ಹೊರಟೆ ಎಂದು ನನಗೆ ಅನಿಸುತ್ತದೆ. ರಾಹಾಗೆ ಹಾಗೆ ಆಗಲು ನಾನು ಬಿಡುವುದಿಲ್ಲ. ತಾನು ಗರ್ಭಿಣಿಯಾಗಿದ್ದಾಗ ಮತ್ತು ಲಂಡನ್ ನಲ್ಲಿ ಹಾರ್ಟ್ ಆಫ್ ಸ್ಟೋನ್ ಚಿತ್ರೀಕರಣದ ಸಮಯದಲ್ಲಿ ನಾನು ತಪ್ಪು ಮಾಡಿದ ತಪ್ಪಿತಸ್ಥೆಯಾದೆ ಎಂದು ಆಲಿಯಾ ಹೇಳಿದ್ದಾರೆ. 

ಆ ಸಮಯದಲ್ಲಿ ನಾನು ಮೂರು ದಿನಗಳ ಕಾಲ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಏಕೆಂದರೆ ನಾನು ಒಳ್ಳೆಯ ಮಗಳು ಅಲ್ಲ ಅನಿಸಿತು. ದೊಡ್ಡ ತಪ್ಪು ಮಾಡಿದ ಬೇಸರ ನನ್ನನ್ನು ಕಾಡಿತು ಎಂದು ನಟಿ ಹೇಳಿದ್ದಾಳೆ. ಹಾರ್ಮೋನು ಸಮಸ್ಯೆ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ನಾನು ಪ್ರೀತಿ, ಕಾಳಜಿ ಜವಾಬ್ದಾರಿ ಮತ್ತು ಉದ್ವೇಗದಂತಹ ಭಾವನೆಗಳನ್ನು ಹೊಂದಿದ್ದೆ. ಇದೆಲ್ಲವೂ ಏಕಕಾಲದಲ್ಲಿ ನಡೆಯುತ್ತಿತ್ತು. 

ಮದುವೆಗೂ ಮನ್ನವೇ ನಟಿ ಆಲಿಯಾ ಭಟ್ ಗರ್ಭಿಣಿ ಆಗಿದ್ರು. ಈ ವಿಚಾರದ ಬಗ್ಗೆ ನಟಿ ಪರೋಕ್ಷವಾಗಿ ಮಾತಾಡಿ ತಾನು ಮಾಡಿದ್ದು ದೊಡ್ಡ ತಪ್ಪು ಎನ್ನುವಂತೆ ಮಾತಾಡಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.