ಗಂಡ ಇರುವಾಗ ಆ ಕೆಲಸ ಯಾವತ್ತೂ ಮಾಡಲ್ಲ; ಬೇಕಾದರೆ ಸಿನಿಮಾದಿಂದ ದೂರು ಹೋಗುತ್ತೀನಿ ಎಂದ ನ ಟಿ

 | 
D

ರಾಜಿ ಉರ್ಫ್​ ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​. ರಾಜೇಶ್ವರಿ ಎಂದಾಕ್ಷಣ ಈ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ  ರಾಜಿ ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. 

ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್.

ಇದೀಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ರಾಜಾ ರಾಣಿ ರೀಲೋಡೆಡ್​ ಗ್ರ್ಯಾಂಡ್​ ಓಪನಿಂಗ್​ನಲ್ಲಿ, ಹಂಸ ಅವರು ಪತಿ ಪ್ರತಾಪ್​ ಜೊತೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಲೈಫ್​ ಸ್ಟೋರಿಯನ್ನು ಹಂಸ ಹೇಳಿಕೊಂಡಿದ್ದಾರೆ. ಮದುವೆಯಾದಾಗ ನಮ್ಮಿಬ್ಬರ ನಡುವೆ ತುಂಬಾ ಡಿಫರೆನ್ಸ್​ ಇತ್ತು. ಬೇರೆ ಕಪಲ್​ಗಳನ್ನು ನೋಡಿದಾಗ ನಾವ್ಯಾಕೆ ಹೀಗೆ ಇರ್ಲಿಲ್ಲ ಅಂತ ಅಂದ್ಕೊಂಡಿದ್ವಿ. ನಿಜ ಹೇಳಬೇಕು ಎಂದ್ರೆ ಇಬ್ರೂ ಸಪರೇಟ್​ ಕೂಡ ಆದ್ವಿ. ಆದರೆ ಆ ದೇವರ ದಯೆಯಿಂದ ಮತ್ತೆ ಒಂದಾದ್ವಿ ಎಂದು ಸ್ಟೋರಿ ಹೇಳಿಕೊಂಡಿದ್ದಾರೆ. ಆಗ ಪ್ರತಾಪ್ ಅವರು ಪತ್ನಿಯನ್ನು ಸಂತೈಸಿ ಇನ್ನು ಸದಾ ಒಟ್ಟಿಗೇ ಇರೋಣ, ಏನೂ ಆಗಲ್ಲ ಎಂದಿದ್ದಾರೆ. 

ಹಿಂದೆ, ಧ್ರುವ, ಅಮ್ಮ, ರಾಜಾಹುಲಿ, ಸಖತ್​, ಜೇಮ್ಸ್, ಉಂಡೆನಾಮ ​ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಿಯಾಲಿಟಿ ಷೋಗಳಲ್ಲಿಯೂ ಭಾಗಿಯಾಗಿದ್ದಾರೆ.   ಹಂಸ ಅವರು ಕೆಲವೊಮ್ಮೆ ತಮ್ಮ ಪತಿ ಹಾಗೂ ಹಲವು ಬಾರಿ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ತಮ್ಮನ ಪಾತ್ರದಲ್ಲಿ ನಟಿಸ್ತಿರೋ ಕಾಳಿಯ ಜೊತೆ ರೀಲ್ಸ್​ ಮಾಡುತ್ತಾರೆ.  ಅಂದಹಾಗೆ ಹಂಸ ಅವರು, ನಟಿ, ಅನೇಕ ಆ್ಯಂಗಲ್​ಗಳಲ್ಲಿ, ಬಗೆಬಗೆಯ ಡ್ರೆಸ್​ ತೊಟ್ಟು ಹಂಸ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. 

ಇಂದು ಕೂಡ ಹಲವಾರು ರೀತಿಯ ಡ್ರೆಸ್​ಗಳಲ್ಲಿ ಅವರು ಫೋಟೋಶೂಟ್​  ಮಾಡಿಸಿಕೊಂಡು ಅದನ್ನು ಶೇರ್​ ಮಾಡಿಕೊಡುತ್ತಿರುತ್ತಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್​, ಸಲ್ವಾರ್​, ಸೀರೆ... ಹೀಗೆ ವಿಭಿನ್ನ ಉಡುಗೆ ತೊಟ್ಟು ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದು ಅದರ ಫೋಟೋ ಶೇರ್​ ಮಾಡುತ್ತಿರುತ್ತಾರೆ. 

ಈ ಹಿಂದೆ ಬಿಕಿನಿ ಹಾಕಬೇಕೆಂದು ಹೇಳಿದಕ್ಕೆ ಸಿನಿಮಾ ಸುದ್ದಿಯೇ ಬೇಡ ಎಂದ ಇವರು ಕಿರುತೆರೆಯಲ್ಲಿಯೇ ಹ್ಯಾಪಿ.ಇನ್ನು ಇವರ ಫೋಟೋಗಳಿಗೆ ಸಕತ್​ ಕಮೆಂಟ್​ಗಳ ಸುರಿಮಳೆಯಾಗುತ್ತಿರುತ್ತದೆ. ಅಂದಹಾಗೆ ಹಂಸ ಅವರಿಗೆ ಓರ್ವ ಮಗನಿದ್ದಾನೆ. ಬದುಕು ಸಂತೋಷವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.