ದರ್ಶನ್ ಮನೆ ಪಕ್ಕನೇ ಇದ್ದೀನಿ, ಆದರೂ ಒಂದು ದಿನ ನನ್ನ ಮನೆಗೆ ಬರ್ಲಿಲ್ಲ; ಡೈರೆಕ್ಟರ್ ನಾಗಶೇಖರ್

 | 
Nz
ಸ್ಯಾಂಡಲ್‌ವುಡ್‌ ನಿರ್ದೇಶಕ ನಾಗಶೇಖರ್‌ ಅವರು ಅಚ್ಚರಿ ವಿಚಾರವೊಂದನ್ನು ರಿವೀಲ್‌ ಮಾಡಿದ್ದಾರೆ. ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ನಾಗಶೇಖರ್‌ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವುದು ಮಾತ್ರವಲ್ಲದೆ, ಒಂದೇ ಏರಿಯಾದಲ್ಲಿ ಅಕ್ಕಪಕ್ಕದ ಮನೆಗಳಲ್ಲೇ ವಾಸವಿದ್ದಾರೆ. ಈ ವಿಚಾರವನ್ನು ನಾಗಶೇಖರ್‌ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಇನ್ನು ದರ್ಶನ್‌ ಅವರ ಮನೆಯ ನೆರೆಹೊರೆಯಲ್ಲಿದ್ದರೂ ನಾನು ಆ ಕೆಲಸ ಯಾವತ್ತೂ ಮಾಡಿಲ್ಲ ಎಂಬ ಗುಟ್ಟೊಂದನ್ನು ಅವರು ಬಿಚ್ಚಿಟ್ಟಿದ್ದಾರೆ.
ನಾನು ಯಾರನ್ನೂ ನಮ್ಮ ಮನೆಯ ಹತ್ತಿರಕ್ಕೆ ಕರೆಸಿಕೊಳ್ಳಲ್ಲ. ಈಗ ನನಗೆ ಆರೋಗ್ಯ ಸಮಸ್ಯೆ ಆಗಿರುವ ಕಾರಣಕ್ಕೆ ಮನೆಯಲ್ಲಿದ್ದೀನಿ. ಈ ರೋಡ್‌ನಲ್ಲೂ ನಾನು ಮಾಸ್ಕ್‌ ಹಾಕಿಕೊಂಡೇ ಓಡಾಡುತ್ತೀನಿ. ಇಲ್ಲಿ ನಾನು ಸುಮಾರು ಹತ್ತು ವರ್ಷಗಳಿಂದ ಇದ್ದೀನಿ, ಒಳಗೆ ಹೋದ್ರೆ ನಮ್ಮನೆ ಯಾವುದೋ ಸ್ವಿಜರ್‌ಲ್ಯಾಂಡ್‌ ಮನೆ ತರ ಫೀಲ್‌ ಆಗುತ್ತೆ ಎಂದಿದ್ದಾರೆ.
ದರ್ಶನ್‌ ಸರ್‌ ನಿಜಕ್ಕೂ ಜಂಟಲ್‌ಮನ್‌, ನಾವಿಬ್ಬರೂ ಅಕ್ಕಪಕ್ಕದಲ್ಲೇ ಇದ್ದರೂ ಒಂದು ದಿನವೂ ಮಾತನಾಡಲಿಲ್ಲ. ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು ಇರ್ತೀವಿ. ನಾನು ಕೂಡ ಯಾರನ್ನು ಮನೆಯ ಹತ್ತಿರಕ್ಕೆ ಕರೆಸಿಕೊಳ್ಳಲ್ಲ. ಈ ರೋಡಲ್ಲಿ ಕೂಡ ನಾನು ಯಾರಿಗೂ ಫೋಟೋ ಕೊಡೋದಿಲ್ಲ. ಏಕೆಂದರೆ ಇಲ್ಲಿ ಒಂದೇ ಟೈಗರ್‌, ಅದು ದರ್ಶನ್‌ ಸರ್‌. ಇಲ್ಲಿ ಅವರೊಬ್ಬರು ಮಾತ್ರವೇ ಫೋಟೋ ಕೊಡಬೇಕು. ಇಲ್ಲಿ ಅವರೇ ಸ್ಟಾರ್‌ ಎಂದು ನಾಗಶೇಖರ್‌ ಹೇಳಿದ್ದಾರೆ.
ದರ್ಶನ್‌ ಸರ್‌ ಮನೆಗೆ ಇವತ್ತಿನವೆರೆಗೆ ನಾನೂ ಹೋಗಿಲ್ಲ, ನನ್ನ ಮನೆಗೆ ಅವರೂ ಬಂದಿಲ್ಲ. ನಾವಿಬ್ಬರೂ ಒಟ್ಟಿಗೆ ಎದುರುಬದುರು ಸಿಕ್ಕೇ ಇಲ್ಲ. ಅವರಿದ್ದಾಗ ನಾನು ಇಲ್ಲಿರೋದೇ ಇಲ್ಲ. ಅವರ ಸ್ಪೇಸ್‌ ಅವರದ್ದು, ನಮ್ಮ ಸ್ಪೇಸ್‌ ನಮ್ದು. ಇಬ್ಬರೂ ನಮ್ಮ ನಮ್ಮ ಪಾಡಿಗೆ ಇರ್ತೀವಿ. ಜೊತೆಗೆ ನಾನು ಹೆಚ್ಚಾಗಿ ಮನೇಲಿ ಇರೋದಿಲ್ಲ. ನಾನು ಬೆಳಿಗ್ಗೆ ಎದ್ದು ಹೊರಟರೆ, ಸಿನಿಮಾ, ಸ್ಕ್ರಿಪ್ಟ್‌ ಕೆಲಸ ಅಂತೆಲ್ಲ ಮುಗಿದು ಮಧ್ಯರಾತ್ರಿ ಮನೆಗೆ ವಾಪಸ್‌ ಆಗ್ತೀನಿ. ಹಾಗಾಗಿ ನಮ್ಮಿಬ್ಬರ ನಡುವೆ ಹೆಚ್ಚಾಗಿ ಮಾತುಕತೆ ಇಲ್ಲಿಲ್ಲ' ಎಂದಿದ್ದಾರೆ.
'ಸಿನಿಮಾದಲ್ಲಿ ನಾನು ಗಳಿಸಿದ್ದನ್ನಷ್ಟೇ ಕಳೆದುಕೊಂಡಿದ್ದೇನೆ. ನಾನು ಸಿನಿಮಾದಿಂದ ಮಾತ್ರವಲ್ಲ, ನಟನೆಯಿಂದಲೂ ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡಿದ್ದೀನಿ, ನಾನು ನಟನಾಗಿದ್ದಾಗ ಒಂದು ದಿನಕ್ಕೆ 50,000 ರೂಪಾಯಿ ಸಂಭಾವನೆ ಕೊಡ್ತಿದ್ರು. ಬಳಿಕ ನಿರ್ದೇಶನಕ್ಕೆ ಬಂದ ಮೇಲೂ ತುಂಬಾ ಹಣ ಸಂಪಾದಿಸಿದ್ದೀನಿ. ಯಾವುದೋ ಸಿನಿಮಾದಲ್ಲಿ ಒಂದು ಹದಿನೈಟು ಕೋಟಿ ಕಳೆದುಕೊಂಡಿದ್ದೀನಿ ಅಂತಾರಲ್ಲ, ಒಂದೇ ಒಂದು ಸಿನಿಮಾ ಕೈ ಹಿಡಿದರೆ ಸಾಕು ಕೋಟಿ ಕೋಟಿ ದುಡಿಯುತ್ತೀನಿ ಎಂದು ನಾಗಶೇಖರ್‌ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.