ಹತ್ತು ವರ್ಷಗಳ‌ ಕಾಲ‌‌ ನಾನು ಕೂಡ ಲವ್ ಮಾಡಿದ್ದೆ; ಆದರೆ ದೊಡ್ಡ ಮೋಸ ನಡೆಯಿತು' ಸಾಯಿ ಪಲ್ಲವಿ

 | 
Ue

ದಕ್ಷಿಣ ಭಾರತದ ಜನಪ್ರಿಯ ನಟಿ, ಸಿಂಪಲ್ ಚೆಲುವೆ ಸಾಯಿ ಪಲ್ಲವಿಯವರ  ತಂಗಿ ಮದುವೆಗೆ ಎಲ್ಲ ತಯಾರಿ ನಡೆಯುತ್ತಿದೆ. ಈ ನಡುವೆ ಅಕ್ಕ ಯಾಕೆ ಇನ್ನೂ ಮದುವೆಯಾಗಿಲ್ಲ, ಸಾಯಿ ಪಲ್ಲವಿ ಮದುವೆ ಯಾವಾಗ? ಸಾಯಿ ಪಲ್ಲವಿ ಲವ್ ಮಾಡ್ತಿದ್ದಾರ ಎನ್ನುವ ಪ್ರಶ್ನೆ ಎಲ್ಲರೂ ಕೇಳುತ್ತಲೇ ಇದ್ದಾರೆ. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.  

ಕೆಲ ದಿನಗಳ ಹಿಂದಷ್ಟೇ ಸೋಶಿಯಲ್ ಮೀಡಿಯಾದಲ್ಲಿ ನಟಿ ಸಾಯಿ ಪಲ್ಲವಿ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದು ಯಾವುದೋ ಇಂಟರ್ವ್ಯೂ ವಿಡಿಯೋ. ಆದ್ರೆ ಯಾವಾಗ ಅವರು ಸಂದರ್ಶನ ನೀಡಿದ್ದು ಅನ್ನುವ ಮಾಹಿತಿ ಇಲ್ಲ. ಈ ಸಂದರ್ಭದಲ್ಲಿ ಅವರು ತಮ್ಮ ಲವ್  ಗುಟ್ಟನ್ನು ರಟ್ಟು ಮಾಡಿದ್ದಾರೆ.

ನನಗೆ ಕಳೆದ ಸುಮಾರು 10 ವರ್ಷಗಳಿಂದ ಅಭಿಮನ್ಯು  ಎನ್ನುವ ವ್ಯಕ್ತಿಯ ಮೇಲೆ ಲವ್ ಆಗಿದೆ. ಅವರನ್ನ ನನ್ನ ಡ್ರೀಮ್ ಬಾಯ್ ಅಂತಾನೂ ಹೇಳಬಹುದು ಎಂದು ಹೇಳಿ ಬ್ಲಶ್ ಆಗಿ, ನಾಚಿಕೆಯಿಂದ ನಕ್ಕಿದ್ದಾರೆ. ಅಷ್ಟಕ್ಕೂ ಆ ಹುಡುಗ ಯಾರು ಅನ್ನೋದು ಗೊತ್ತಾದ ಮೇಲೆ ಅಲ್ಲಿದ್ದವರೆಲ್ಲಾ ನಕ್ಕಿದ್ದು ನಿಜ. ಸಾಯಿ ಪಲ್ಲವಿಗೆ ಲವ್ ಆಗಿರೋ ಅಭಿಮನ್ಯು ಬೇರಾರೂ ಅಲ್ಲ, ಮಹಾಭಾರತದಲ್ಲಿ  ಬರುವಂತಹ ಅರ್ಜುನನ ಮಗ. ಸದ್ಯ ಈ ಕ್ಯಾರೆಕ್ಟರ್ ನಟಿಗೆ ತುಂಬಾ ಇಷ್ಟವಂತೆ.

ಮಲಯಾಲಂ ಸಿನಿಮಾ ಪ್ರೇಮಂ ಮೂಲಕ ಜನಪ್ರಿಯತೆ ಪಡೆದ ನಟಿ ಸಾಯಿ ಪಲ್ಲವಿಗೆ 32 ವರ್ಷವಾಗಿದ್ದು ಇನ್ನೂ ಸಿಂಗಲ್. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಾಯಿಪಲ್ಲವಿ ಸಿಂಪ್ಲಿ ಸಿಟಿಗೆ ಜೊತೆ ಅದ್ಭುತ ನಟನೆ, ಡ್ಯಾನ್ಸಿಂಗ್ ಕೌಶಲ್ಯಕ್ಕೆ ಅದೆಷ್ಟೋ ಹುಡುಗರು ಫಿದಾ ಆಗಿದ್ದಾರೆ. ಹಾಗಾಗಿ ಅವರಿಗೆ ಲವ್ ಆಗಿದ್ದು ಕೇಳಿ ಶಾಕ್ ಆಗಿದ್ದು, ಅದು ಮಹಾಭಾರತದ ಕ್ಯಾರೆಕ್ಟರ್ ಅನ್ನೋದು ಗೊತ್ತಾದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.