ನನ್ನಿಂದ ತಪ್ಪಾಯಿತು; ಯುವನ ಜೊತೆ ಆ ಕೆಲಸ ಮಾಡಬಾರದಿತ್ತು ಎಂದ ಸಪ್ತಮಿ
ಯುವ ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ಡಿವೋರ್ಸ್ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿರುವ ಹೆಸರು ನಟಿ ಸಪ್ತಮಿ ಗೌಡ. ಇದೀಗ ಇದೇ ಡಿವೋರ್ಸ್‌ಗೆ ಕಾರಣವಾಗಿರುವ ಪ್ರಮುಖ ಘಟನೆಯ ಆಡಿಯೋ ಲೀಕ್ ಆಗಿದೆ. ನಟಿ ಸಪ್ತಮಿ ಗೌಡ ಅವರದ್ದು ಎನ್ನಲಾದ ಈ ಆಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ.
ನಟ ಯುವ ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ಡಿವೋರ್ಸ್ ಪ್ರಕರ ನ್ಯಾಯಲದಲ್ಲಿದೆ. ಯುವ ವಕೀಲರ ಆರೋಪದ ಬೆನ್ನಲ್ಲೇ ಶ್ರೀದೇವಿ ಮಾಡಿದ ಆರೋಪಗಳು ಕನ್ನಡ ಚಿತ್ರರಂಗವನ್ನೆ ಕಂಪಿಸಿತ್ತು. ಯುವ ರಾಜ್‌ಕುಮಾರ್, ನಟಿ ಸಪ್ತಮಿ ಗೌಡ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ. ಹೊಟೆಲ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂದು ಆರೋಪಿಸಿದ್ದು. ಇದೀಗ ಈ ಆರೋಪಗಳಿಗೆ ಪುಷ್ಠಿ ನೀಡುವ ಆಡಿಯೋ ಲೀಕ್ ಆಗಿದೆ.
ನಟಿ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಇದಾಗಿದ್ದು, ಯುವ ರಾಜ್ ಕುಮಾರ್ ಜೊತೆಗಿನ ಸಂಬಂಧ, ನಡೆದ ಘಟನೆ ಕುರಿತು ಮಾತನಾಡಿದ್ದಾರೆ.ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಮೇಲೆ ನಾನು ಮುಂದುವರೆದೆ. ಅದು ನಿಮ್ಮ ಸೆಟ್ನಲ್ಲಿ ಆಯ್ತು, ಆಗಬಾರದಿತ್ತು, ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ, ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ ಎಂಬ ಮಾತುಗಳು ಆಡಿಯೋನಲ್ಲಿದೆ.
ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೆ, ಇದೆಲ್ಲ ವರ್ಕೌಟ್ ಆಗಲ್ಲ ಎಂದು. ಅಲ್ಲದೆ ನಾನು ಎಂದಿಗೂ ಸಹ ಫ್ಯಾಮಿಲಿ ಬಿಟ್ಟು ಬಾ, ಪತ್ನಿ ಜೊತೆ ಬ್ರೇಕ್ ಅಪ್ ಮಾಡಿಕೊ ಎಂದು ಹೇಳಿಲ್ಲ ಸರ್ ನನ್ನನ್ನು ನಂಬಿ. ಬೇಕಾದರೆ ನನ್ನನ್ನು ಬೈಯ್ಯಿರಿ, ಗುರುಗೆ ಅದು ಮೊದಲ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ನನಗೆ ಗೊತ್ತಿದೆ. ಯಾರಿಗೂ ತೊಂದರೆ ಆಗಬಾರದು ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ ಎಂದು ಸಪ್ತಮಿ ಅವರದ್ದು ಎನ್ನಲಾದ ಆಡಿಯೋನಲ್ಲಿ ಹೇಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.