ಗಂಡ ಸ ತ್ತ 4ದಿನಕ್ಕೆ ಶೂಟಿಂಗ್ ಹೋಗಿದ್ದೆ, ನಟಿ ವಿನಯ ಪ್ರಸಾದ್ ಕಣ್ಣೀರ ಕಥೆ
Sep 14, 2024, 11:56 IST
|

ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿ ವಿನಯ ಪ್ರಸಾದ್. ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು ಚಿತ್ರರಂಗದಲ್ಲಿ ಮಿಂಚಿರುವ ವಿನಯ ಪ್ರಸಾದ್ ಪಂಚ ಭಾಷೆ ತಾರೆ. ಮಾತಿನಲ್ಲಿ ನಯ, ಹೆಸರಿಗೆ ತಕ್ಕ ವಿನಯ, ಅಭಿನಯ ಚತುರೆ ವಿನಯ ಪ್ರಸಾದ್. ಆದರೆ ಅವರ ಬದುಕು ಸಿನಿಮಾ, ಸೀರಿಯಲ್ ರೀತಿ ಸುಂದರವಾಗಿರಲಿಲ್ಲ.
ವಿನಯಾ ಪ್ರಸಾದ್ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಛಾಪನ್ನು ಮೂಡಿಸಿರುವ ಈ ನಟಿ ಜನಿಸಿದ್ದು ಉಡುಪಿಯಲ್ಲಿ. 1988 ರಲ್ಲಿ ಮಧ್ವಾಚಾರ್ಯ ಚಿತ್ರದಿಂದ ಅಭಿನಯ ಆರಂಭಿಸಿದ ಇವರು ಅನಂತನಾಗ್ ರವರ ಗಣೇಶನ ಮದುವೆ ಚಿತ್ರದಲ್ಲಿ ಮೊದಲಬಾರಿಗೆ ನಾಯಕನಟಿಯಾಗಿ ಕಾಣಿಸಿಕೊಂಡರು.
ಇನ್ನು ವಿನಯಾ ಪ್ರಸಾದ್ ಅವರು ಅತ್ತ್ಯುತ್ತಮ ನಟಿ ಹಾಗೂ ಅತ್ತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ‘ಆತಂಕ’ ಹಾಗೂ ‘ಬಣ್ಣದ ಹೆಜ್ಜೆಗಳು’ ಚಿತ್ರದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.ನಟಿ ವಿನಯಾ ಮತ್ತು ಪ್ರಕಾಶ್ ಇಬ್ಬರು ಒಬ್ಬರಿಗೊಬ್ಬರು ಪರಿಚಿತರಾಗಿದ್ದು ಒಂದು ಸಿನಿಮಾ ಪ್ರಾಜೆಕ್ಟ್ ಕೆಲಸ ಮಾಡುತ್ತಿರುವಾಗ. ಇದ್ದಿದ್ದನ್ನು ಇದ್ದಹಾಗೆ ಹೇಳುತ್ತಿದ್ದ ಪ್ರಚಂಡ ಸತ್ಯವಂತರಂತೆ ಕಂಡಿದ್ದ ಪ್ರಕಾಶ್ ವಿನಯಾ ಪ್ರಸಾದ್ ಅವರ ಮನ ಕದ್ದಿದ್ದರು. ಅಲ್ಲದೆ ಇಬ್ಬರು ಬಣ್ಣದ ಲೋಕದಲ್ಲೆ ಇದ್ದಿದ್ದರಿಂದ ಇಬ್ಬರಿಗು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಇಬ್ಬರ ನಡುವೆ ಪ್ರಾರಂಭವಾದ ಈ ಪ್ರೀತಿ ನಂತರ ಪತಿ-ಪತ್ನಿಯರನ್ನಾಗಿ ಮಾಡಿದೆ.
1988ರಲ್ಲಿ ಕೃಷ್ಣ ಪ್ರಸಾದ್ ಜೊತೆ ವಿನಯಾ ಅವರು ವಿವಾಹ ಆಗಿದ್ದರು. ಏಳು ವರ್ಷಗಳ ಕಾಲ ಪ್ರಸಾದ್ ಜೊತೆ ಸಂಸಾರ ನಡೆಸಿದ್ದಾರೆ. ವಿನಯಾ ಮತ್ತು ಪ್ರಸಾದ್ ದಂಪತಿಗೆ ಪ್ರಥಮಾ ಎನ್ನುವ ಒಬ್ಬಳು ಮಗಳು ಕೂಡ ಇದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೆ ಪತಿ ಕೃಷ್ಣ ಪ್ರಸಾದ್ ನಿಧನರಾಗುತ್ತಾರೆ. ಆ ನಂತರ ಏಳು ವರ್ಷ ಮಗಳ ಜವಬ್ದಾರಿಯನ್ನು ತಾಯಿಯೊಬ್ಬಳೆ ಹೊತ್ತುಕೊಂಡು ಮಗಳನ್ನು ಬೆಳೆಸುತ್ತಾರೆ. ಗಂಡ ತೀರಿಹೋದ 4 ದಿನಕ್ಕೆ ಹೊಟ್ಟೆಪಾಡಿಗಾಗಿ ಕೊಟ್ಟ ಕಮಿಟ್ಮೆಂಟ್ ಉಳಿಸಿಕೊಳ್ಳಬೇಕು ಎಂದು ಶೂಟಿಂಗ್ ಗೆ ಹೊರಡುತ್ತಾರೆ. ಹೀಗೆ ಒಂದಿಷ್ಟು ವರ್ಷ ಕಷ್ಟದ ದಿನಗಳ ದಾಟಿ ನಂತರ ಜ್ಯೋತಿ ಪ್ರಕಾಶ್ ಜೊತೆ ಮದುವೆ ಆಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.