‘ಬೈಕ್, ಕಾರು, ಒಂದು ಕೋಟಿ ಹಣವನ್ನು ಬಡವರಿಗೆ ದಾನ ಮಾಡುತ್ತೀನಿ’ ನನಿಗೆ ಕನ್ನಡಿಗರ ಅಭಿಮಾನ ಬೇಕು ಎಂದ ಪ್ರತಾಪ್

 | 
Hd

ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಸ್ಪರ್ಧಿ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ವಂಚನೆ ಕೇಸ್ ಕೇಳಿ ಬಂದಿದೆ. 8 ಡ್ರೋನ್ ಕೊಡೋದಾಗಿ ಪ್ರತಾಪ್ ಅವರು 2 ಡ್ರೋನ್ ನೀಡಿದ್ದಾರಂತೆ. ಮಹಾರಾಷ್ಟ್ರ ಮೂಲದ ಸಾರಂಗ್ ಮಾನೆ ಅವರು ಈ ಆರೋಪವನ್ನು ಮಾಡಿದ್ದಾರೆ. ಪ್ರತಾಪ್ ಅವರು ಒಟ್ಟೂ 80 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.ಸಾರಂಗ್ ಅವರಿಗೆ ನೀಡಿರುವ ಡ್ರೋನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಸಾರಂಗ್ ಅವರು 8 ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ಎಕ್ಸಿಬಿಶನ್ ವೇಳೆ ಪ್ರತಾಪ್, ನನ್ನ ಪರಿಚಯ ಆಗಿದೆ. ಕೃಷಿ ಜಮೀನಿಗೆ ಔಷಧಿ ಸಿಂಪಡಿಸುವ ಸಲುವಾಗಿ ಡ್ರೋನ್ ಬೇಕು ಅಂತ ಹೇಳಿದ್ದೆ. ಡ್ರೋನ್ ಕೊಡುವ ಟೆಂಡರ್ ಪ್ರಕ್ರಿಯೆಯಲ್ಲಿ ನಮ್ಮಿಬ್ಬರ ನಡುವೆ ಒಪ್ಪಂದ ಆಗಿದೆ. ನಾನು ಪ್ರತಾಪ್‌ಗೆ 38 ಲಕ್ಷ ರೂಪಾಯಿ ಹಣ ಕಳಿಸಿದ್ದರ ಬಗ್ಗೆ ದಾಖಲೆ ಇದೆ. ಪ್ರತಾಪ್ ಅವರು ಡ್ರೋನ್ ಕೊಡ್ತೀನಿ ಅಂತ ಹೇಳಿ 1 ವರ್ಷ ಸತಾಯಿಸಿದ್ದಾರೆ. ಆ ನಂತರದಲ್ಲಿ ಹಣ ವಾಪಸ್ಸು ಮಾಡ್ತೀನಿ ಅಂತ ಕೂಡ ಹೇಳಿದ್ದರು. ಆದರೆ ಏನೂ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ.

ಇನ್ನು ಈ ಕುರಿತಾಗಿ ಮಾತನಾಡಿದ  ಡ್ರೋನ್ ಪ್ರತಾಪ್ ಮ್ಯಾನೇಜರ್ ಡ್ರೋನ್ ಮಾಡಲು ನಮಗೆ ಸಮಯ ಬೇಕು, ಡ್ರೋನ್ ಆವಿಷ್ಕಾರ ಮಾಡಲು ಟೈಮ್ ಬೇಕು, ಆದರೆ ಸಾರಂಗ್ ಅವರು ಡ್ರೋನ್ ಬೇಕು ಅಂತ ಒತ್ತಾಯ ಮಾಡಿದ್ದಕ್ಕೆ ನಾವು ಅಸೆಂಬಲ್ ಡ್ರೋನ್ ನೀಡಿದ್ದೆವು. ಪ್ರತಾಪ್ ಗೆಲ್ಲಬಹುದು ಅಂತ ಅವರ ವಿರುದ್ಧ ಪಿತೂರಿ ಮಾಡುತ್ತಿರಬಹುದು ಎಂದು ಕಿರಣ್ ಮಾಧವ್ ಅವರು ಹೇಳಿದ್ದಾರೆ.

ಈಗಾಗಲೇ ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಟಾಪ್ 6 ಸ್ಥಾನದಲ್ಲಿದ್ದಾರೆ. ಜನವರಿ 27, 28ರಂದು ‘ಬಿಗ್ ಬಾಸ್ ಕನ್ನಡ 10’ ಫಿನಾಲೆ ನಡೆಯಲಿದೆ. ಯಾರು ಟ್ರೋಫಿ ಗೆಲ್ಲಲಿದ್ದಾರೆ ಎಂಬ ಕುತೂಹಲ ಜೋರಾಗಿದೆ.​ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯ ಆರಂಭದಲ್ಲಿ ಸ್ಪರ್ಧಿಗಳ ಮಾತಿನಿಂದ ಕಣ್ಣೀರು ಹಾಕಿದ್ದರು. ಆ ನಂತರ ಪ್ರತಾಪ್ ಅವರ ವೈಖರಿ ಬದಲಾಯ್ತು, ಡ್ಯಾನ್ಸ್ ಮಾಡಿದ್ರು, ಅಡುಗೆ ಮಾಡಿದ್ರು, ಮಾತು ಆಡಿದ್ರು. ಈಗ ಅವರು ಫಿನಾಲೆ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಪ್ರತಾಪ್ ಅವರು ಟ್ರೋಫಿ ಗೆಲ್ಲಲಿದ್ದಾರಾ? ಇಲ್ಲವಾ ? ಎಂದು ಕಾದು ನೋಡಬೇಕಿದೆ.