ನನ್ನ ಜೀವನದಲ್ಲಿ ನಿನ್ನ ಯಾವತ್ತೂ ಕೈಬಿಡಲ್ಲ ಎಂದ ರಮೋಲ, ರಮೋಲ ಮಾತಿಗೆ ರಕ್ಷಕ್ ಚಿನ್ನದಂತ ಮುತ್ತಿಟ್ಟ

 | 
ರರಹ
ಬ್ಯಾಚುಲರ್ಸ್ ವೇದಿಕೆ ಮೇಲೆ ಭರ್ಜರಿ ಉಂಗುರ ತೊಡಿಸಿ, ರಮೋಲ ಕೆನ್ನೆಗೆ ಮುತ್ತಿಟ್ಟು ಬ್ಯೂಟಿಫುಲ್ ಆಗಿ ಪ್ರೇಮ ನಿವೇದನೆ ಮಾಡಿದ್ದಾನೆ ರಕ್ಷಕ ಬುಲೆಟ್​. ಹೌದು, ದಿನೇ ದಿನೇ ರಕ್ಷಕ ಬುಲೆಟ್ ಸಖತ್ ಆಗಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಬಿಗ್ಬಾಸ್ ಸೀಸನ್ 10 ಮೂಲಕ ಫೇಮಸ್ ಆಗಿದ್ದ ರಕ್ಷಕ ಬುಲೆಟ್ ಇದೀಗ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಮಿಂಚುತ್ತಿದ್ದಾರೆ.
ಅದರಲ್ಲೂ ರಕ್ಷಕ ಬುಲೆಟ್‌ಗೆ ರಮೋಲ ಜೋಡಿಯಾಗಿ ಸಿಕ್ಕಿದ್ದು ವೀಕ್ಷಕರಿಗೆ ಒಳ್ಳೆ ಮಜಾ ಕೊಡುವಂತಿದೆ.ಎಲ್ಲ ಟಾಪ್ 10 ಮಂದಿ ಬ್ಯಾಚುಲರ್‌ಗಳು ತಮ್ಮ ಮೆಂಟರ್ಸ್‌ಗಳಿಗೆ ಸರ್ಪ್ರೈಸ್‌ಗಳನ್ನು ಕೊಟ್ಟಿದ್ದಾರೆ. ಹೌದು, ಈ ವಾರ ಬ್ಯಾಚುಲರ್ಸ್ ಗೆ ಜಡ್ಜಸ್ ಟಾಸ್ಕ್ ಕೊಟ್ಟಿದ್ದರು. ಅದುವೇ ಪ್ರಪೋಸಲ್ ರೌಂಡ್ ಬ್ಯಾಚುಲರ್ಸ್ ವೇದಿಕೆಯಲ್ಲಿ ಭರ್ಜರಿಯಾಗಿ ಒಬ್ಬೊಬ್ಬರಾಗಿ ಬಂದು ತಮ್ಮ ಮೆಂಟರ್ಸ್ ಗಳಿಗೆ ಬ್ಯಾಚುಲರ್ಸ್ ಪ್ರಪೋಸ್ ಮಾಡಿದ್ದಾರೆ. 
ವಿಭಿನ್ನ ವಿಭಿನ್ನ ಥೀಮ್‌ನಲ್ಲಿ ವೇದಿಕೆ ರೆಡಿ ಮಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ.ಇನ್ನೂ, ರಕ್ಷಕ ಬುಲೆಟ್ ಸರ್ಪ್ರೈಸ್ ಎಂಬಂತೆ ಭರ್ಜರಿ ಬ್ಯಾಚುಲರ್ಸ್ ವೇದಿಕೆಯ ಮೇಲೆ ಮುದ್ದಾಗಿ ರಮೋಲಗೆ ಪ್ರಪೋಸ್ ಮಾಡಿದ್ದಾರೆ. ಆಕಾಶದ ಎತ್ತರಕ್ಕೆ ಕರೆದುಕೊಂಡು ಹೋಗಿ ತನ್ನ ಮನಸ್ಸಿನ ಮಾತನ್ನು ಬಿಚ್ಚಿಟ್ಟ ರಕ್ಷಕ . ನಾನು ಎಷ್ಟು ದೌಲತ್ ನಿಂದ ಇರಬಹುದು ಆದರೆ ನಿಮ್ಮ ಮುಂದೆ ಯಾವತ್ತು ನಾನು ತಲೆ ಬಗ್ಗಿಸಿಕೊಂಡೆ ಇರುತ್ತೇನೆ. 
ಈ ಪ್ರೀತಿಗೆ ನಾನು ಯಾವತ್ತು ಚಿರರುಣಿಯಾಗಿ ಇರುತ್ತೇನೆ ಎಂದು ಕೈಗೆ ಉಂಗುರ ಹಾಕಿ, ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಆಗ ರಮೋಲ, ಇಡೀ ಜೀವನ ನಾನು ನಿಮ್ಮ ಜೊತೆಗೆ ಇರಲು ಇಷ್ಟ ಪಡುತ್ತೇನೆ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಇಬ್ಬರ ಪ್ರೇಮ ನಿವೇದನೆ ನೋಡಿ ನಟಿ ರಚಿತಾ ರಾಮ್ ಸೇರಿ ಎಲ್ಲರೂ ಫುಲ್ ಶಾಕ್ ಆಗಿದ್ದಾರೆ. ಇದು ನಿಜವಾಗಿಯೂ ಇಲ್ಲವೇ ನಾಟಕಕ್ಕೋ ಅರಿಯಲಾಗದಷ್ಟು ಚೆನ್ನಾಗಿ ಪರ್ಫೆಮ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub