'ನಾನು ಅವಳನ್ನ ಮದುವೆ ಆಗಲ್ಲ; ದಿವ್ಯಾ ಉರುಡುಗ ಮುಖವಾಡ ಕಳಚಿದ ಅರವಿಂದ್

 | 
ರದದ೮

ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರದ್ದು ಬಿಗ್ ಬಾಸ್​ನಲ್ಲಿ ಶುರುವಾದ ಪ್ರೇಮ ಕಥೆ. ಇವರು ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಅವರು ಒಂದು ಸರ್​ಪ್ರೈಸ್ ನೀಡುವ ಸೂಚನೆ ಕೊಟ್ಟಿದ್ದಾರೆ. ದಿವ್ಯಾ ಹಾಗೂ ಅರವಿಂದ್ ಒಂದು ಅನೌನ್ಸ್​ಮೆಂಟ್ ಮಾಡಿದ್ದಾರೆ. ‘ಇನ್ವಿಟೇಶನ್ ಕೂಡ ರೆಡಿ ಆಗಿದೆ. ಅದರ ಜೊತೆಗೆ ಅನೌನ್ಸ್ ಮಾಡ್ತೀವಿ’ ಎಂದು ಹೇಳಿದ್ದಾರೆ.

ಅವರ ಮದುವೆ ವಿಚಾರದ ಬಗ್ಗೆ ಈ ಅನೌನ್ಸ್​ಮೆಂಟ್ ಇರಬಹುದು ಎಂದು ಕೆಲವರು ಊಹಿಸಿದ್ದಾರೆ. ಇನ್ನೂ ಕೆಲವರು ಇದನ್ನು ಸಿನಿಮಾ ಪ್ರಚಾರದ ಗಿಮಿಕ್ ಎಂದು ಕರೆದಿದ್ದಾರೆ. ಅವರ ನಟನೆಯ ‘ಅರ್ಧಂಬರ್ಧ ಪ್ರೇಮಕಥೆ’ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲು ಈ ರೀತಿಯ ತಂತ್ರ ಉಪಯೋಗಿಸಲಾಗಿದೆ’ ಎನ್ನಲಾಗಿದೆ.

ಈ ಹಿಂದೆ ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದಲ್ಲಿ ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೂ ಇಬ್ಬರ ನಡುವಿನ ಅನುಬಂಧ ಮುಂದುವರೆದಿದೆ. ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪರಸ್ಪರ ಪ್ರೀತಿಸುತ್ತಿದ್ದಾರಾ? ಈ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಆದರೆ, ಇಬ್ಬರೂ ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಾರೆ. ಈಗ ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಸೇರಿ ಹೊಸ ಉದ್ಯಮ ಆರಂಭಿಸಿದ್ದಾರೆ. ಹೌದು, ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಬೆಂಗಳೂರಿನಲ್ಲಿ ನೇಲ್ ಆರ್ಟ್ ಸ್ಟುಡಿಯೋ ಆರಂಭಿಸಿದ್ದಾರೆ. 

ನೇಲ್ ಆರ್ಟ್ ಸ್ಟುಡಿಯೋದ ಉದ್ಘಾಟನೆ ಸಮಾರಂಭ ಗ್ರ್ಯಾಂಡ್ ಆಗಿ ನೆರವೇರಿದ್ದು, ಲಾಂಚ್‌ ಕಾರ್ಯಕ್ರಮಕ್ಕೆ ‘ಬಿಗ್ ಬಾಸ್’ ಸ್ಪರ್ಧಿಗಳು ಆಗಮಿಸಿದ್ದರು. ಸಾನ್ಯ ಅಯ್ಯರ್‌, ಮಯೂರಿ, ನೇಹಾ ಗೌಡ, ಭವ್ಯಾ ಗೌಡ ಮುಂತಾದವರು ಆಗಮಿಸಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ ಪಿಗೆ ಶುಭ ಹಾರೈಸಿದರು.