ಬೇರೆ ಭಾಷೆ ಸಿನಿಮಾ ಇನ್ನೂ ಮಾಡ್ತೀನಿ; ಅದು ನನ್ನ ಬ್ಯುಸಿನೆಸ್
ಹೊಸ ಸಿನೆಮಾ ವಿಚಾರವಾಗಿ ಆಶಿಕಾ ರಂಗನಾಥ ಲೈವ್ ಬಂದಿದ್ದಾರೆ. ಹೌದು ಅವಳು ಸಂಶೋಧನಾನಿರತ ವೈದ್ಯೆ. ಅವನು ರೇಡಿಯೊ ಜಾಕಿ. ಆಸ್ಪತ್ರೆಯ ಕಾರಿಡಾರ್‌ನಲ್ಲಿಯೇ ಪ್ರೀತಿ ಅರಳುತ್ತದೆ. ಡಾಕ್ಟರ್ ಶ್ರದ್ಧಾ ಆಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದರೆ, ಜಾಕಿ ಓಶೋ ಆಗಿ ರಾಘವ್ ನಾಯಕ್ ಅಭಿನಯಿಸಿದ್ದಾರೆ. ಇವರಿಬ್ಬರ ಪ್ರೀತಿಯ ಕೆಮಿಸ್ಟ್ರಿ ಅದೆಷ್ಟು ಚೆಂದವಾಗಿ ವರ್ಕ್ ಆಗಿದೆ ಎಂದರೆ, ಚಿತ್ರ ನೋಡುತ್ತಿದ್ದಾಗ ಸಾಕಷ್ಟು ಕಡೆ ನಿರ್ದೇಶಕರು ಇದನ್ನೊಂದು ಪರಿಶುದ್ಧ ಪ್ರೇಮಕಥೆಯಾಗಿಸಬಾರದಿತ್ತೆ ಎನ್ನಿಸುತ್ತದೆ.
ಇದು ಅಶಿಕಾ ರಂಗನಾಥ್ ಇತ್ತೀಚಿಗೆ ನಟಿಸಿದ ಚಿತ್ರ. ಇನ್ನು ಈ ಚಿತ್ರದ ಕುರಿತಾಗಿ ಲೈವ್ ಬಂದು ಹೇಳಿದ್ದಾರೆ. ಇದೊಂದು ಅದ್ಬುತ ಕಥಾ ಹಂದರವನ್ನು ಹೊಂದಿರುವ ಚಿತ್ರ ಹಾಗಾಗಿ ಓ ಟಿಟಿ ಬರುವ ತನಕ ಕಾಯದಿರಿ ಈಗಲೇ ಥಿಯೇಟರ್ ನಲ್ಲಿ ನೊಡಿ ಎಂದಿದ್ದಾರೆ.ಹೃದಾಯಾಘಾತದಿಂದ ಮರಣ ಹೊಂದಿದ ಕೆಲ ನಿಮಿಷಗಳಲ್ಲಿ ದೇಹಕ್ಕೆ O2 ಇಂಜೆಕ್ಟ್ ಮಾಡಿದರೆ ಮನುಷ್ಯ ಬದುಕುಳಿಯುವ ಸಾಧ್ಯತೆಯಿದೆ ಎಂಬ ವಿಷಯದ ಸುತ್ತ ಚಿತ್ರ ಸಾಗುತ್ತದೆ.
ಡಾಕ್ಟರ್ ಶ್ರದ್ಧಾ ಇದೇ ವಿಷಯದಲ್ಲಿ ಸಂಶೋಧನೆ ನಡೆಸುತ್ತ ಇರುತ್ತಾಳೆ. ಡಾಕ್ಟರ್ ದೇವ್ ಆಗಿ ಪ್ರವೀಣ್ ತೇಜ್ ಹಾಗೂ ಡಾಕ್ಟರ್ ಸೃಷ್ಟಿಯಾಗಿ ಸಿರಿ ರವಿಕುಮಾರ್ ಈ ತಂಡ ಸೇರಿಕೊಳ್ಳುತ್ತಾರೆ. ಆದರೆ ಅಂದುಕೊಂಡಂತೆ ಸಂಶೋಧನೆ ನಡೆಯುವುದಿಲ್ಲ. ಹತ್ತಾರು ವಿಘ್ನಗಳು. ಸಂಶೋಧನೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದೇ ಚಿತ್ರಕಥೆ. ಖಳನಾಯಕನ ಪಾತ್ರದಲ್ಲಿ ಡಾ.ಮೃತ್ಯುಂಜಯನಾಗಿ ಬರುವ ಪ್ರಕಾಶ್ ಬೆಳವಾಡಿ ಈ ಸಂಶೋಧನೆಗೆ ಅಡ್ಡಗಾಲಾಗಿ ನಿಲ್ಲುತ್ತಾರೆ.
ಕಥಾವಸ್ತು ಹೊಸತಾಗಿದೆ. ಕಥೆಯನ್ನು ಕಟ್ಟಿಕೊಟ್ಟಿರುವ ರೀತಿಯು ಭಿನ್ನವಾಗಿದೆ. ಸಂಶೋಧನೆ ನಡುವೆ ತೆರೆದುಕೊಳ್ಳುವ ಆಶಿಕಾ ಪ್ರೇಮಕಥೆ ಹಿತವಾದ ಅನುಭವ ನೀಡುತ್ತದೆ. ಆಶಿಕಾ ಹಾಗೂ ರಾಘವ್ ನಟನೆ ಅದ್ಭುತ. ಆಶಿಕಾ ಸಾಕಷ್ಟು ಕಡೆ ಕಣ್ಣಿನ ನೋಟದಿಂದಲೇ ಕೊಲ್ಲುತ್ತಾರೆ. ಚಿತ್ರದ ನಿರ್ದೇಶಕರಲ್ಲೊಬ್ಬರಾಗಿ, ಪ್ರಮುಖ ಪಾತ್ರದಲ್ಲಿಯೂ ನಟಿಸಿರುವ ರಾಘವ್ ನಾಯಕ್ ನಟನಾಗಿ ಬಹಳ ಭರವಸೆ ಮೂಡಿಸುತ್ತಾರೆ. ಪ್ರಕಾಶ್ ಬೆಳವಾಡಿ ನಟನೆ ಗಮನೀಯ. ಡಾಕ್ಟರ್ ವೆಂಕಿಯಾಗಿ ಪುನೀತ್ ಬಿ.ಎ ಅಲ್ಲಲ್ಲಿ ನಗಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ತಪ್ಪದೇ ನೋಡಿ ಅನಂದಿಸಬಹುದಾದ ಚಿತ್ರ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.