ನಾನು ತಿರುಪತಿಗೆ ಹೋಗಲ್ಲ ಎಂದ ರವಿಚಂದ್ರನ್; ಹಣ ಕೊಟ್ಟು ದರ್ಶನ ಪಡೆಯಲ್ಲ ಎಂದ ಕ್ರೇಜಿಸ್ಟಾರ್

 | 
Cghu

ಸ್ಯಾಂಡಲ್‌ವುಡ್‌ ಕ್ರೇಜಿಸ್ಟಾರ್‌ ರವಿಚಂದ್ರನ್‌ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರು. ಅಂದ್ರೆ, ಶ್ರೀಮಂತ ಮನೆತನದಲ್ಲಿಯೇ ಬೆಳೆದವರು. ಅಪ್ಪ ವೀರಾಸ್ವಾಮಿ ಸಿನಿಮಾ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಸರಣಿ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅಪ್ಪನ ಹಾದಿಯಲ್ಲಿಯೇ ಮಗ ರವಿಚಂದ್ರನ್‌ ಸಹ ನಟ, ನಿರ್ದೇಶಕ, ನಿರ್ಮಾಪಕನಾಗಿ ಬಣ್ಣದ ಲೋಕ ಪ್ರವೇಶಿಸಿದ್ದರು. ಅದರಂತೆ ಅಲ್ಲಿ ಸೋಲು ಗೆಲುವನ್ನೂ ಕಂಡರು. ಇದೀಗ ಇದೇ ರವಿಚಂದ್ರನ್‌, ತಾವು  ತಿರುಪತಿಗೆ ಯಾಕೆ ಹೋಗುವುದಿಲ್ಲ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

ಮೊದಲೆಲ್ಲಾ ಎಲ್ಲ ಸಿನಿಮಾಗಳಿಗೆ ತಿರುಪತಿಗೆ ಭೇಟಿ ನೀಡಿ ಅಲ್ಲಿನ ದೇವರ ದರ್ಶನ ಪಡೆದು ಸಿನೆಮಾ ರಿಲೀಸ್ ಮಾಡುವುದು ಪದ್ಧತಿ ಆಗಿತ್ತು ಆದರೆ ಕೆಲ ವರ್ಷಗಳ ನಂತರ ಅಲ್ಲಿನ ನೂಕು ನುಗ್ಗಲು, ಜನಂಗಳಿ ಮೈ ಮೇಲೆ ಬೀಳುವ ಕ್ಯೂ ಎಲ್ಲವನ್ನೂ ನೋಡಿ ಇನ್ನು ಇಲ್ಲಿಗೆ ಬರುವುದು ನನ್ನಿಂದಾಗದು ಎಂದುಕೊಂಡೆ ಅದರಂತೆ ಅಲ್ಲಿಂದ ಇಲ್ಲಿಯ ತನಕ ಹೋಗಿಲ್ಲ ಎಂದಿದ್ದಾರೆ.

ಇನ್ನು ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ರವಿಚಂದ್ರನ್ ಅವರು ಪ್ರೇಮಲೋಕ 2 ಬಗ್ಗೆ ಮಾತನಾಡಿದ್ದಾರೆ. ಪ್ರೇಮಲೋಕ ಸಿನಿಮಾದಲ್ಲಿ 11 ಹಾಡುಗಳು ಇದ್ದವು. ಈ ಚಿತ್ರದಲ್ಲಿ 25 ಹಾಡುಗಳು ಇರಲಿವೆ. ಪ್ರೇಮಲೋಕದ ಗೆಲುವು ನಿಮ್ಮದು. ಆ ಸಿನಿಮಾ ನಿಮ್ಮದು. ನೀವು ಗೆಲ್ಲಿಸಿರೋದು. ಮತ್ತೆ ಪ್ರೇಮಲೋಕ ಸೃಷ್ಟಿ ಮಾಡಬೇಕು ಎನ್ನುವ ಆಸೆ ನನ್ನದು ಎಂದಿದ್ದಾರೆ ರವಿಚಂದ್ರನ್. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಪ್ರೇಮಲೋಕ ಸಿನಿಮಾದಲ್ಲಿ 11 ಹಾಡುಗಳು ಇದ್ದವು. ಈ ವಿಚಾರ ಕೇಳಿ ಯಾರೊಬ್ಬರೂ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿರಲಿಲ್ಲ. ಹೀಗಾಗಿ, ಅವರೇ ನಿರ್ಮಾಣ ಮಾಡಿದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಸಿನಿಮಾ ಮಾಡಲು ಬೆಂಬಲ ಕೊಟ್ಟರು. ಈ ಚಿತ್ರ ಯಾರೂ ಊಹಿಸದ ರೀತಿಯಲ್ಲಿ ಗೆಲುವು ಕಂಡಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.