ದರ್ಶನ್ ಸುದೀಪ್ ಗೆ ನಾನು ಬಂಡವಾಳ ಹಾಕಿ ಪಿಚ್ಚರ್ ಮಾಡಲ್ಲ ರೀ; ಕಡ್ಡಿ ಮುರಿದಂತೆ ಮಾತಾನಾಡಿದ ಯಶ್ ತಾಯಿ ಪುಷ್ಪ

 | 
Na
ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರ ತಾಯಿ ಪುಷ್ಪ ಅರುಣ್‌ ಕುಮಾರ್‌ ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇಂದು ತಮ್ಮ ಚೊಚ್ಚಲ ನಿರ್ಮಾಣದ ಕೊತ್ತಲವಾಡಿ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಇದೇ ಕಾರ್ಯಕ್ರಮದಲ್ಲಿ ಅವರು ಕೆಲ ಅಚ್ಚರಿ ಹಾಗೂ ಶಾಕಿಂಗ್‌ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಮುಖ್ಯವಾಗಿ ತಮ್ಮ ಮಗ ಯಶ್‌ ಹಾಗೂ ಸೊಸೆ ರಾಧಿಕಾ ಅವರ ವಿಚಾರ ಪ್ರಸ್ತಾವಿಸಿದ್ದಾರೆ.
ಯಶ್‌ ಸದ್ಯ ಟಾಕ್ಸಿಕ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಪುಷ್ಪ ಅರುಣ್‌ ಕುಮಾರ್‌ ಅವರು ಮಗ ಯಶ್‌ ನನಗೆ ವಿಲನ್‌ ಎಂದಿರುವುದು ಎಲ್ಲರಿಗೂ ಶಾಕ್‌ ಕೊಟ್ಟಿದೆ. ಪುಷ್ಪ ಅವರು ತಮ್ಮ ಪಿಎ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆಯಡಿ ಕೊತ್ತಲವಾಡಿ ಎಂಬ ಚೊಚ್ಚಲ ಚಿತ್ರ ರಿಲೀಸ್‌ ಮಾಡಲು ಸಜ್ಜಾಗಿದ್ದಾರೆ. ಈ ಟೀಸರ್‌ ಬಿಡುಗಡೆ ಕಾರ್ಯಕ್ರಮ ಒರಾಯನ್‌ ಮಾಲ್‌ನಲ್ಲಿ ನಡೆಯಿತು. 
ಈ ವೇಳೆ ತಮ್ಮ ಮಗ ಹಾಗೂ ಸೊಸೆ ರಾಧಿಕಾ ಅವರ ಬಗ್ಗೆ ಪುಷ್ಪ ನೆನೆದಿದ್ದಾರೆ. ಕೊತ್ತಲವಾಡಿ ಸಿನಿಮಾ ಬಗ್ಗೆ ನನ್ನ ಮಗಳು, ಮಗ, ಸೊಸೆ ಯಾರಿಗೂ ಗೊತ್ತಿಲ್ಲ. ಇದು ನಾನೇ ಹೊಸದಾಗಿ ಮಾಡಿರುವ ಒಂದು ಚಿಕ್ಕ ಪ್ರಯತ್ನ. ಕಥೆ ಸೆಲೆಕ್ಟ್‌ ಮಾಡೋ ವಿಚಾರದಲ್ಲಿ ರಾಧಿಕಾ ಸೂಪರ್‌, ನನ್ನ ಸೊಸೆ ಆಗೋಕೆ ಮುಂಚೆಯಿಂದಲೂ ಅವಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಈ ವಿಚಾರದಲ್ಲಿ ಸೊಸೆ ರಾಧಿಕಾ ಯಶ್‌ಗಿಂತ ದೊಡ್ಡ ಕಿಲಾಡಿ ಎಂದಿದ್ದಾರೆ. ನಾನು ಮೊದಲಿನಿಂದಲೂ ರಾಧಿಕಾ ಫ್ಯಾನ್‌. 
ನಾನು ಅವಳಷ್ಟು ಕಲಿಯಲು ಇನ್ನೂ ಸಮಯ ಬೇಕು. ಈ ಸಿನಿಮಾ ಚೆನ್ನಾಗಿ ಆದ ಮೇಲೆ ಒಪ್ಪಿಕೊಳ್ತಾಳೋ ಇಲ್ಲವೋ ಕಾದು ನೋಡೋಣ ಎಂದಿದ್ದಾರೆ. ಅವರೆಲ್ಲ ಇದನ್ನು ಒಪ್ಪಿಕೊಳ್ಳಬೇಕು ಅಂದ್ರೆ ನಾವಿನ್ನೂ ದೂರ ಹೋಗ್ಬೇಕು ಎಂದಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಯಶ್‌ ರಾವಣನ ಪಾತ್ರ ಮಾಡುತ್ತಿರುವ ಬಗ್ಗೆ ಮಾತನಾಡಿ, ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು. ಇದನ್ನು ಅವನೇ ಆಯ್ಕೆ ಮಾಡಿಕೊಂಡಿದ್ದು. ವಿಲನ್‌ ಪಾತ್ರ ಓಕೆನಾ ಎಂದಿದ್ದಕ್ಕೆ ನಾನು ಅವನನ್ನು ನಾನು ವಿಲನ್‌ ಆಗಿ ನೋಡಲು ಇಷ್ಟಪಡುತ್ತೇನೆ. 
ಅವನು ರಿಯಲ್‌ ಲೈಫಲ್ಲಿ ಮನೆಯಲ್ಲಿ ನಿಜವಾಗಿಯೂ ವಿಲನ್ನೇ ಎಂದು ಎಂದು ಕ್ಷಣ ಎಲ್ಲರಿಗೂ ಶಾಕ್‌ ನೀಡಿದ್ದಾರೆ. ನಾನು ಟಾಕ್ಸಿಕ್‌ ಸೆಟ್‌ಗೆ ಹೋಗಿಲ್ಲ, ಅವನು ಎಲ್ಲವೂ ಚೆನ್ನಾಗಿ ಮಾಡ್ತಾನೆ. ಎಲ್ಲ ಯಶಸ್ವಿಯಾಗಿ ಮಾಡಿಕೊಂಡು ಬರ್ತಾನೆ ಅನ್ನೋದೆ ನನ್ನ ನಂಬಿಕೆ. ನಾನು ಅಣ್ಣಾವ್ರ ಫ್ಯಾನ್‌, ಯಶ್‌ ಫ್ಯಾನ್‌ ಅಲ್ಲ. ಹಾಗಾಗಿ ಅಣ್ಣಾವ್ರ ತರ ಸಿಂಪ್ಲಿಸಿಟಿ ಫಾಲೋ ಮಾಡ್ತಿದ್ದೀನಿ ಎಂದಿದ್ದಾರೆ. .