ಅವಳು ಸ್ಟಾರ್ ಆದರೆ ಅವಳಿಗೆ, ನನ್ನ ಜೊತೆ ಆಟ ಬೇಡ ಎಂದ ಕಿಟ್ಟಿ
Jun 23, 2025, 20:45 IST
|

ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್, ನಟ ಶ್ರೀನಗರ ಕಿಟ್ಟಿ ಅವರು ಕಂಪ್ಲೇಂಟ್ ಕೊಟ್ಟಿದ್ದಾರೆ. ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟ ನಿರ್ದೇಶಕ ನಾಗಶೇಖರ್, ರಮ್ಯಾ, ತಮನ್ನಾ ಎಲ್ಲರಿಗೂ ನಾನು ಸಿನಿಮಾ ಮಾಡಿದ್ದೀನಿ. ಆದ್ರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ ಎಂದಿದ್ದಾರೆ.
ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ರಚಿತಾ ರಾಮ್ ಬಂದಿಲ್ಲ. ಹೀಗಾಗಿ ರಚಿತಾ ರಾಮ್ ವಿರುದ್ಧ ನಿರ್ದೇಶಕರು ತಿರುಗಿ ಬಿದ್ದಿದ್ದಾರೆ. ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಪೋರ್ಟ್ ಕೊಟ್ಟಿಲ್ಲ. ರಾಕ್‌ಲೈನ್ ವೆಂಕಟೇಶ್ ಮನವೊಲಿಸಲು ಪ್ರಯತ್ನಿಸಿದ್ರು. ಆದರೂ ರಚಿತಾ ಒಪ್ಪಿಲ್ಲ. ನಾವು ಇಂತಹ ಕಲಾವಿದರಿಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ಮಾಡಿದ್ದೀನಿ. ಆದ್ರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ.
ಸಂಜು ವೆಡ್ಸ್ ಗೀತಾ ಸಿನಿಮಾ ಇಷ್ಟು ದಿನ ಪ್ರದರ್ಶನ ಕಂಡರು ಒಂದು ದಿನವೂ ರಚಿತಾ ರಾಮ್ ಸಪೋರ್ಟ್ ಕೊಟ್ಟಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಅಂತಹವರೇ ಈ ಸಿನಿಮಾವನ್ನು ಬೆಂಬಲಿಸಿದ್ದಾರೆ. ನಾವು ಪೇಮೆಂಟ್ ಕಮ್ಮಿ ಕೊಟ್ಟಿಲ್ಲ. ಹೀಗಾಗಿ ನಟಿ ರಚಿತಾ ರಾಮ್ ವಿರುದ್ಧ ಹಾಗೂ ಕನ್ನಡ ಸಿನಿಮಾಗೆ ಥಿಯೇಟರ್ ಸಮಸ್ಯೆ ಕುರಿತು ನಿರ್ದೇಶಕ ನಾಗಶೇಖರ್ ಮತ್ತು ನಟ ಶ್ರೀನಗರ ಕಿಟ್ಟಿ ಫಿಲ್ಮ್ ಚೇಂಬರ್ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಅಲ್ಲದೆ ಶ್ರೀನಗರ ಕಿಟ್ಟಿ ಆಯಮ್ಮ ಇಂದ ಏನೂ ಆಗಬೇಕು ಎಂದೇನಿಲ್ಲ ಎಂದು ರಚಿತಾ ರಾಮ್ ಅವರನ್ನು ತೆಗಳಿದ್ದಾರೆ.
ಇನ್ನು ಈ ವಿಚಾರವಾಗಿ ಖಡಕ್ ಎಚ್ಚರಿಕೆ ನೀಡಿರುವ ರಚಿತಾ ರಾಮ್ ನಾನು ಎಲ್ಲ ಪ್ರಚಾರ ಕಾರ್ಯದಲ್ಲಿ ಇದ್ದೆ. ರೀ-ರಿಲೀಸ್ ಸಮಯದಲ್ಲಿ ನನಗೆ ನನ್ನ ಸಿನಿಮಾದ ಕಮಿಟ್ಮೆಂಟ್ ಇತ್ತು. ಅದಕ್ಕಾಗಿ ನಾನು ಪ್ರತಿ ದಿನ ಸ್ಟೋರಿ ಹಾಕುತ್ತಿದ್ದೇನೆ. ರೀಲ್ಸ್ ಕೂಡ ಮಾಡಿದ್ದೇನೆ. ಕೊನೇ ಸಮಯದಲ್ಲಿ ಅವರ ದಿನಾಂಕ ಬದಲಾವಣೆ ಆಗುತ್ತಾ ಇರುತ್ತದೆ. ಅದಕ್ಕೆ ನಾನು ಹೊಣೆನಾ? ಇದಕ್ಕೆ ನಾನು ಏನು ಹೇಳಬೇಕೋ ಗೊತ್ತಿಲ್ಲ. ಜನರಿಗೆ ಬಿಡುತ್ತೇನೆ. ನೀವೇ ನಿರ್ಧರಿಸಿ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.