ನಿಮಗೆ ವಿಷಪೂರಿತ ಹಾವು ಕಚ್ಚಿದರೆ ಮಂಗಳೂರಿನ ಈ ದೇವಸ್ಥಾನದ ನೀರು ಕುಡಿದರೆ ಸಾಕು, ಕ್ಷಣಮಾತ್ರದಲ್ಲಿ ವಿಷ ಮಾಯ

 | 
Ghj

ಸಾಮನ್ಯವಾಗಿ ಬಾವಿಯ ನೀರು ಕುಡಿಯುವವರು ಪುಣ್ಯವಂತರು ಎಕೆಂದರೆ ಸ್ವಚ್ಛ ಹಾಗೂ ಸಿಹಿ ನೀರು ಆದರೆ ಇಲ್ಲೊಂದು ಭಾವಿಯಿದೆ ಆ ಬಾವಿಯ ನೀರು ಎಲ್ಲಾ ಬಾವಿಗಳಲ್ಲಿ ಸಿಗುವ ಮಾಮೂಲಿ ನೀರಲ್ಲ. ಬದಲಾಗಿ ಜೀವ ಉಳಿಸುವ ಸಂಜೀವಿನಿ. ಯಾವುದೇ ರೀತಿಯ ವಿಷ ಜಂತುಗಳು ಕಡಿದರೆ ಆ ಬಾವಿಯ ನೀರನ್ನು ಕುಡಿದು, ಅಲ್ಲಿನ ಮಣ್ಣನ್ನು ಹಾಕಿಕೊಂಡರೆ ವಿಷವೆಲ್ಲಾ ಇಳಿಯುತ್ತದೆ. 

ಏತದ ಮೂಲಕ ನೀರನ್ನು ಎಳೆಯುವ ಈ ಬಾವಿ ಪವಿತ್ರ ಸಂಜೀವಿನಿ ಬಾವಿ. ಮಂಗಳೂರಿನ ಕಟೀಲು ಸಮೀಪದ ಶಿಬರೂರು ಎಂಬಲ್ಲಿರುವ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪವಿತ್ರ ಬಾವಿ ಇದು. ವರ್ಷಕ್ಕೊಂದು ಬಾರಿ ನಡೆಯುವ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವದ ಎಂಟು ದಿನಗಳ ಕಾಲ ಈ ಬಾವಿಯ ನೀರನ್ನು ಅತೀ ಹೆಚ್ಚು ಭಕ್ತರಿಗೆ ತೆಗೆದು ತೀರ್ಥದ ರೂಪದಲ್ಲಿ ನೀಡಲಾಗುತ್ತದೆ.

ಪುರಾತನ ಕಾಲದಲ್ಲಿ ಸ್ಥಳೀಯ ದೈವೀ ವೈದ್ಯರಾದ ತ್ಯಾಂಪಣ್ಣ ಶೆಟ್ಟಿ ಎಂಬವರು ತನ್ನಲ್ಲಿದ್ದ ವಿಷ ಹೀರುವ ಕಲ್ಲೊಂದನ್ನು ಲೋಕದ ಜನತೆಯ ಒಳಿತಿಗಾಗಿ ಈ ಬಾವಿಗೆ ಹಾಕಿದ್ದಾರೆ. ಹೀಗಾಗಿ ಆ ಶಕ್ತಿಯಿಂದಲೇ ಈ ಬಾವಿಯ ನೀರು ಯಾವುದೇ ರೀತಿಯ ವಿಷವನ್ನು ಹೀರಿಕೊಳ್ಳುತ್ತದೆ ಅನ್ನುವ ನಂಬಿಕೆ ಹಿಂದಿನ ಕಾಲದಿಂದ ಇಂದಿನವರೆಗೂ ಉಳಿದುಕೊಂಡು ಬಂದಿದೆ. 

ಹಾಗಾಗಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಜಾತ್ರಾ ಮಹೋತ್ಸವದ 8 ದಿನದಲ್ಲಿ ಈ ದೈವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದು, ಈ ಪವಿತ್ರ ನೀರನ್ನು ಕೊಂಡೊಯ್ಯತ್ತಾರೆ. ಈ ನೀರನ್ನು ಕುಡಿಯುವುದರಿಂದ ವರ್ಷವಿಡೀ ದೇಹದಲ್ಲಿದ್ದ ವಿಷಕಾರಿ ಅಂಶಗಳು ಹೋಗುತ್ತದೆ. ಜೊತೆಗೆ ವಿಷಜಂತುಗಳು ಕಡಿದಂತಹ ಸಂದರ್ಭದಲ್ಲಿ ತಕ್ಷಣ ಈ ನೀರನ್ನು ಕುಡಿದು ನಂತರ ಈ ಕ್ಷೇತ್ರದಲ್ಲೇ ಸಿಗುವ ಮಣ್ಣನ್ನು ನೀರಲ್ಲಿ ಬೆರಸಿ ಗಾಯಕ್ಕೆ ಹಚ್ಚಿದರೆ ವಿಷ ಕಾರುತ್ತದೆ ಅನ್ನುವ ನಂಬಿಕೆ ಇಂದಿಗೂ ಉಳಿದಿದೆ. 

ನಾನಾ ಊರುಗಳಿಂದ ಬರುವ ಭಕ್ತರು ಈ ಆಧುನಿಕ ಯುಗದಲ್ಲೂ ಈ ನಂಬಿಕೆಯನ್ನು ಇಟ್ಟು ನೀರು ಕುಡಿದು ರೋಗ ಮುಕ್ತಿ ಹೊಂದಲು ಬಯಸುತ್ತಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.