ಹೊಸ ಕಾರುಗಳನ್ನು ಖರೀದಿ ಮಾಡಿದರೆ ಬೀದಿಗೆ ಬರುವುದು ಗ್ಯಾರಂಟಿ; ಕಾರು ಪ್ರಿಯರಿಗೆ ಆಘಾ.ತ

 | 
Hii
ನಮ್ಮಲ್ಲೂ ಸುಂದರ ಕಾರು ಇರಬೇಕು ಎಂಬುದು ಎಲ್ಲರೂ ಆಸೆ ಪಡುವುದು ಸಹಜವೇ. ತಮ್ಮ ಈ ಕನಸಿನ ಸಾಕಾರಕ್ಕೆ ಎಲ್ಲರೂ ಬಹಳಷ್ಟು ಕಷ್ಟಪಡುತ್ತಾರೆ. ಹಣವನ್ನು ಜತನದಿಂದ ಕೂಡಿಡುತ್ತಾರೆ ಅಥವಾ ಲೋನ್ ಪಡೆದು ತಮ್ಮ ಇಷ್ಟದ ವಾಹನವನ್ನು ಖರೀದಿಸಿ ಮನೆ ತರುತ್ತಾರೆ. ನಮ್ಮ ಈ ಕನಸಿಗೆ ನಾವು ದುಬಾರಿ ಹಣವನ್ನೇ ತೆರುತ್ತೇವೆ. ಹೀಗಾಗಿ ಹೊಸ ಕಾರು ಖರೀದಿಸುವಾಗ ಕೆಲವೊಂದು ಲೆಕ್ಕಾಚಾರಗಳೂ ಬೇಕು.
 ಓಡಿಸಲು ಆರಾಮದಾಯಕ, ಸುರಕ್ಷತಾ ಅಂಶಗಳು, ಮೈಲೇಜ್, ಆವೃತ್ತಿ ಹೀಗೆ ಇಲ್ಲಿ ತಿಳಿದುಕೊಳ್ಳಬೇಕಾದ ಸಾಕಷ್ಟು ಅಂಶಗಳಿವೆ. ಕಾರು ಕೊಳ್ಳುವಾಗ ನೀವು ಯೋಚಿಸಬೇಕಾದ ಪ್ರಮುಖ ಅಂಶ ಬಜೆಟ್. ಕಷ್ಟಪಟ್ಟು, ಸಾಲ ಮಾಡಿ ದುಬಾರಿ ಕಾರನ್ನು ಖರೀದಿಸುವುದು ಕಷ್ಟವೇನಲ್ಲ. ಆದರೆ, ಸರಿಯಾಗಿ ಯೋಚಿಸದೆ ಮಾಡುವ ಖರೀದಿ ಭವಿಷ್ಯದಲ್ಲಿ ನಿಮಗೆ ಕಷ್ಟವನ್ನೂ ತರಬಹುದು, ನಿಮ್ಮನ್ನು ದಿವಾಳಿಯನ್ನಾಗಿಸಬಹುದು.
ಆದ್ದರಿಂದ ನಿಮ್ಮ ಸಾಮರ್ಥ್ಯದ ಅರಿವಿರಲಿ. ಕಾರಿಗೆ ನೀವು ಮಾಡುವ ವ್ಯಯ ನಿಮಗೆ ನಿಭಾಯಿಸಿಕೊಳ್ಳುವ ರೀತಿಯಲ್ಲಿ ಇರಲಿ. ಸಾಧ್ಯವಾದಷ್ಟು ನಿಮ್ಮ ವಾರ್ಷಿಕ ಆದಾಯ, ಮನೆಯ ಖರ್ಚು, ಲೋನ್ ಇಎಂಐಗಳನ್ನು ಲೆಕ್ಕ ಹಾಕಿ ಖರೀದಿ ಮಾಡಿ. ಆಗ ಸಾಲ ಸಂದಾಯಕ್ಕೆ ಕಷ್ಟವಾಗದು. ನಿಮ್ಮ ಖರೀದಿಯ ಪ್ರಕ್ರಿಯೆ ಅಂತಿಮವಾಗುವ ಮುನ್ನ ಬ್ಯಾಂಕಿನ ಸಾಲದ ಮೇಲಿನ ಬಡ್ಡಿ ಮತ್ತು ಇಎಂಐ ಮೊತ್ತದ ಬಗ್ಗೆಯೂ ಸರಿಯಾಗಿ ತಿಳಿದುಕೊಳ್ಳಿ.
ಇದಾದ ಬಳಿಕ ನೀವು ಆಯ್ಕೆ ಮಾಡಿಕೊಂಡಿರುವ ಮಾದರಿಯ ಜೊತೆಗೆ ಇತರ ಮಾದರಿಗಳನ್ನೂ ಹೋಲಿಕೆ ಮಾಡಿ. ಯಾಕೆಂದರೆ, ಸ್ಪರ್ಧಾತ್ಮಕ ಬೆಲೆಯಲ್ಲಿ ಈಗ ಹೆಚ್ಚಿನ ಆಟೋಮೊಬೈಲ್ಗಳಲ್ಲಿ ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳು ಇರುತ್ತವೆ. ಹೀಗಾಗಿ, ಇವುಗಳಲ್ಲಿ ನಿಮಗೆ ಸೂಕ್ತ ಯಾವುದು ಎಂಬುದನ್ನು ತಿಳಿದುಕೊಳ್ಳಿಟೆಸ್ಟ್ ಡ್ರೈವ್ ಮಾಡಿನೀವು ನಿಗದಿತ ಮಾದರಿಯ ಕಾರನ್ನು ಖರೀದಿಸಬೇಕು ಎಂದು ನಿರ್ಧರಿಸಿದ ಬಳಿಕ ಟೆಸ್ಟ್ ಡ್ರೈವ್ ಮಾಡುವುದು ಬಹಳ ಉತ್ತಮ.
ಟೆಸ್ಟ್ ಡ್ರೈವ್ ಭವಿಷ್ಯದ ನಿರಾಸೆ, ಪಶ್ಚಾತಾಪಗಳಿಂದ ನಿಮ್ಮನ್ನು ಪಾರು ಮಾಡುತ್ತದೆ. ವಾಹನವನ್ನು ಡ್ರೈವ್ ಮಾಡಿ ನೋಡುವುದರಿಂದ ಇದರ ದಕ್ಷತೆ, ವಿಶಾಲತೆ, ಚಾಲನಾ ಸೌಕರ್ಯ, ಒಳಾಂಗಣದ ವಿನ್ಯಾಸ ಸೇರಿದಂತೆ ಸಾಕಷ್ಟು ಸಂಗತಿಗಳು ತಿಳಿಯುತ್ತವೆ. ಹ್ಯಾಚ್ಬ್ಯಾಕ್, ಎಸ್ಯುವಿ ಮತ್ತು ಸೆಡಾನ್ ಎಂಬ ಮೂರು ಪ್ರಕಾರದ ಕಾರುಗಳು ಸದ್ಯ ಲಭ್ಯವಿವೆ. ಇವುಗಳಲ್ಲಿ ನಿಮಗೆ ಸೂಕ್ತವಾದ ಕಾರಿನ ಮಾದರಿ ಯಾವುದು ಎಂಬುದನ್ನು ಆರಿಸಿಕೊಳ್ಳಿ. ಹ್ಯಾಚ್ಬ್ಯಾಕ್ಗಳು ಚಿಕ್ಕದಾದ ವಾಹನ ಮತ್ತು ನಿರ್ವಹಿಸಲು ಸುಲಭ ಮತ್ತು ಮೆಟ್ರೋಪಾಲಿಟನ್ ಟ್ರಾಫಿಕ್ಗೆ ಸರಿ ಹೊಂದುವ ವಾಹನಗಳಲ್ಲಿ ಇದೂ ಒಂದು. 
ಇನ್ನು ಎಸ್ಯುವಿಗಳು ಕಳೆದ ಒಂದು ದಶಕದಿಂದ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ. ಎಲ್ಲಿಯಾದರೂ ಚಲಿಸುವ ಸಾಮರ್ಥ್ಯವನ್ನು ಇವುಗಳು ಹೊಂದಿರುತ್ತವೆ. ಇದಾದ ಬಳಿಕ ಇರುವ ಮಾದರಿ ಸೆಡಾನ್. ಸ್ಟೈಲ್ ಮತ್ತು ಭವ್ಯತೆಯನ್ನು ಹೊಂದಿರುವ ಕಾರುಗಳು ಇವು. ಹ್ಯಾಚ್ಬ್ಯಾಕ್ಗೆ ಹೋಲಿಸಿದರೆ ಉದ್ದವಾದ ಚಾಸಿಸ್ನಿಂದಾಗಿ ಇದು ಒಳಾಂಗಣದಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ಪಡೆಯುತ್ತದೆ.
ಹೊಸ ವಾಹನವನ್ನು ತೆಗೆದುಕೊಳ್ಳುವಾಗ, ಆಟೋ ಕಂಪನಿಗಳು ತಮ್ಮ ಡೀಲರ್‌ಶಿಪ್‌ನಿಂದಲೇ ವಿಮೆಯನ್ನು ನೀಡುತ್ತವೆ. ಆದರೆ ನೀವು ಬೇರೆ ಯಾವುದಾದರೂ ಉತ್ತಮ ಆಯ್ಕೆಯನ್ನು ಪಡೆದರೆ ನೀವು ಡೀಲರ್‌ಶಿಪ್‌ ಬಿಟ್ಟು ನಿಮ್ಮ ಆಯ್ಕೆಯ ವಿಮೆ ಕಂಪನಿಯನ್ನು ಆರಿಸಿಕೊಳ್ಳಬಹುದು. ರೋಡ್ ಟ್ಯಾಕ್ಸ್ ಬಗ್ಗೆ ಕೂಡಾ ಗಮನವಿರಲಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.